ರಸ್ತೆ ಅಪಘಾತದಲ್ಲಿ ರಾಜ್ಯಕ್ಕೆ 4ನೇ ಸ್ಥಾನ

0
398

 
ರಾಷ್ಟ್ರೀಯ ಪ್ರತಿನಿಧಿ ವರದಿ
ರಸ್ತೆ ಅಪಘಾತದಲ್ಲಿ ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. 2015ರಲ್ಲಿ ಅಪಘಾತದಲ್ಲಿ ನಿತ್ಯ ಸರಾಸರಿ 400 ಜನ ಸಾವನ್ನಪ್ಪಿದ್ದಾರೆ.
 
 
ಉತ್ತರಪ್ರದೇಶದಲ್ಲಿ ಅತಿಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದೆ. ನಮ್ಮ ನೆರೆಯ ರಾಜ್ಯ ತಮಿಳುನಾಡು ಆಕ್ಸಿಡೆಂಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.
 
 
 
2015ರಲ್ಲಿ ಕರ್ನಾಟಕದಲ್ಲಿ ಅಪಘಾತಕ್ಕೆ 10856 ಜನ ಬಲಿಯಾಗಿದ್ದಾರೆ. 2015ರಲ್ಲಿ ಉತ್ತರಪ್ರದೇಶದಲ್ಲಿ 17,666 ಜನರು ದುರ್ಮರಣ ಹೊಂದಿದ್ದಾರೆ. ತಮಿಳುನಾಡಿನಲ್ಲಿ ರಸ್ತೆ ಅಪಘಾತಕ್ಕೆ 15,642 ಜನರು ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅಪಘಾತಕ್ಕೆ 13,212 ಜನ ಸಾವನ್ನಪ್ಪಿದ್ದಾರೆ.
 
 
 
ರಾಜ್ಯ ಪೊಲೀಸರು ನೀಡಿದ ಮಾಹಿತಿ ಮೇಲೆ ಅಂಕಿ ಅಂಶದ ಪ್ರಕಾರ 2015ರಲ್ಲಿ ಒಟ್ಟು 1,46,133 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2014ರಲ್ಲಿ ಕರ್ನಾಟಕದಲ್ಲಿ 10452 ಜನರು ಸಾವನ್ನಪ್ಪಿದ್ದಾರೆ. 2014ರಲ್ಲೂ ಕರ್ನಾಟಕ ಅಪಘಾತದಲ್ಲಿ 4ನೇ ಸ್ಥಾನದಲ್ಲಿತ್ತು ಎನ್ನಲಾಗಿದೆ.
 
 
 
ಸಭೆ
ದೇಶದಲ್ಲಿ ದಿನೇದಿನೇ ರಸ್ತೆ ಅಪಘಾತನಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಸಾರಿಗೆ ಇಲಾಖೆ ಕಾರ್ಯದರ್ಶಿಗಳ ಮುಂದಿನ ವಾರ ಸಭೆ ಕರೆಯಲಾಗಿದೆ. 2020ರ ವೇಳೆಗೆ ಶೇ.50ರಷ್ಟು ಅಪಘಾತ ಇಳಿಸುವ ಗುರಿ ಹೊಂದಿದೆ. ರಸ್ತೆ ಅಪಘಾತ ತಡೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

LEAVE A REPLY

Please enter your comment!
Please enter your name here