ರಷ್ಯಾ ವಿಮಾನ ಪತನ

0
564

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ರಷ್ಯಾದ ಸೇನಾ ವಿಮಾನವು ಭಾನುವಾರ ಕಪ್ಪು ಸಮುದ್ರದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ 91 ಜನರು ಸಹ ಸಾವನ್ನಪ್ಪಿದ್ದಾರೆ ವರದಿಯಾಗಿದೆ.
 
 
ಸಿರಿಯಾಗೆ ಹೊರಟಿದ್ದ 91 ಜನರನ್ನೊಳಗೊಂಡಿದ್ದ ಟಿಯು-154 ವಿಮಾನ ಟೇಕ್‍ಆಫ್ ಆದ ಕೆಲ ಸಮಯದ ನಂತರ ಸೇನಾ ವಿಮಾನ ರಡಾರ್‍ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಕೆಲ ಹೊತ್ತಿನ ನಂತರ ರಷ್ಯಾ ಭದ್ರತಾ ಸಿಬ್ಬಂದಿ ವಿಮಾನ ಸಮುದ್ರದಲ್ಲಿ ಪತನವಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
 
 
 
ಸೋಚಿ ನಗರದಿಂದ 1.5 ಕಿ.ಮೀ. ದೂರದಲ್ಲಿ ಕಪ್ಪುಸಮುದ್ರದ 50 ರಿಂದ 70 ಮೀಟರ್ ಆಳದಲ್ಲಿ ಟಿಯು-154 ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಇದುವರೆಗೆ 10 ಶವವನ್ನು ಮಾತ್ರ ಹೊರ ತಗೆಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
 
 
 
ಪತನಗೊಂಡ ವಿಮಾನದಲ್ಲಿ ಸೈನಿಕರು ಸೇರಿದಂತೆ ಹಲವು ಸಂಗೀತ ಕಲಾವಿದರು ಹಾಗೂ ಪತ್ರಕರ್ತರು ಪ್ರಯಾಣಿಸುತ್ತಿದ್ದರು ಇವರೆಲ್ಲರೂ ರಷ್ಯಾ ವಾಯುಪಡೆಯೊಂದಿಗೆ ಹೊಸ ವರ್ಷಾಚರಣೆಗಾಗಿ ಸಿರಿಯಾಗೆ ತೆರಳುತ್ತಿದ್ದರು.

LEAVE A REPLY

Please enter your comment!
Please enter your name here