ರವಿಶಾಸ್ತ್ರೀ ಮಾಡಿದ ಆರೋಪದಿಂದ ನೋವಾಗಿದೆ

0
268
ವರದಿ:ಲೇಖಾ
ಕೋಚ್ ವಿಚಾರವಾಗಿ ಮಾಜಿ ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ನನ್ನ ಮೇಲೆ ಮಾಡಿರುವ ಆರೋಪದಿಂದ ನೋವಾಗಿದೆ ಎಂದು  ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಹೇಳಿದ್ದಾರೆ.
ಶಾಸ್ತ್ರಿ ಅವರು ನನ್ನ ಸ್ಥಿತಿಯನ್ನು ಅರಿಯದೆ ಹೀಗೆ ಬಹಿರಂಗವಾಗಿ ನನ್ನ ವಿರುದ್ಧದ ಹೇಳಿಕೆ ನೀಡುತ್ತಿದ್ದಾರೆ. ಸರಿಯಾಗಿ ಐದು ಗಂಟೆಗೆ ಬಂಗಾಳ ಕ್ರಿಕೆಟ್ ಸಂಸ್ಥೆಯ ಸಭೆ ಏರ್ಪಾಡು ಮಾಡಲಾಗಿತ್ತು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿರುವ ನಾನು ಆ ಸಂದರ್ಭದಲ್ಲಿ ಉಪಸ್ಥಿತವಾಗಿಬೇಕಾಗಿತ್ತು. ಆದ್ದರಿಂದ ಶಾಸ್ತ್ರಿ ಅವರ ಸಂದರ್ಶನ ಸಮಯದಲ್ಲಿ ಹಾಜರಿರಲು ಸಾಧ್ಯವಾಗಿಲ್ಲ. ಭಾರತ ಕ್ರಿಕೆಟ್ ತಂಡದ ಕೋಚ್ ಆಗುವವರು ಸಮಿತಿಯ ಮುಂದೆ ಬಂದು ಸಂದರ್ಶನ ನೀಡಬೇಕೆ ಹೊರತು ಬ್ಯಾಂಕಾಕ್​ನಲ್ಲಿ ಕುಳಿತು ನೀಡುವುದು ತರವಲ್ಲ. ಇದು ನಮಗೆ ಅವಮಾನ ಮಾಡಿದಂತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ ನಾನು ಶಾಸ್ತ್ರಿ ಅವರ ಸಂದರ್ಶನದಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಕೋಚ್ ಸ್ಥಾನ ತಪ್ಪಿತು ಎನ್ನುವುದು ಮೂರ್ಖ ಹೇಳಿಕೆ ಎಂದು ತಿಳಿಸಿದ್ದಾರೆ.
ಗಂಗೂಲಿ ಬಗ್ಗೆ ಬಹಿರಂಗವಾಗಿ ರವಿ ಶಾಸ್ತ್ರಿ ಅಸಮಧಾನ ಹೊರಹಾಕಿ, ನನ್ನ ಸಂದರ್ಶದ ಸಂದರ್ಭ ಸೌರವ್ ಉಪಸ್ಥಿತರಿರಲಿಲ್ಲ. ಹುದ್ದೆಗೆ ಅಗೌರವ ತೋರಿಸುವ ಜತೆಗೆ ಉದ್ದೇಶಪೂರ್ವಕ ಅರ್ಧದಲ್ಲೆ ಸಂದರ್ಶನ ಪ್ರಕ್ರಿಯೆ ತೊರೆದಿದ್ದಾರೆ ಎಂದು ಆರೋಪಿಸಿದ್ದರು.

LEAVE A REPLY

Please enter your comment!
Please enter your name here