'ರಯೀಸ್' ಪ್ರಮೋಷನ್ ವೇಳೆ ದುರಂತ

0
182

ಸಿನಿ ಪ್ರತಿನಿಧಿ ವರದಿ
ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಯೀಸ್’ ಚಿತ್ರದ ಪ್ರಮೋಷನ್ ವೇಳೆ ದುರಂತ ಸಂಭವಿಸಿದೆ. ವಡೋದರಾ ರೈಲ್ವೆ ನಿಲ್ದಾಣದಲ್ಲಿ ಚಿತ್ರ ಪ್ರಚಾರ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
 
 
ಕಾಲ್ತುಳಿತಕ್ಕೆ ಓರ್ವ ಅಭಿಮಾನಿ ಬಲಿಯಾಗಿದ್ದು, ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಮೃತರನ್ನು ರಾಜಕಾರಣಿ ಫರೀದ್ ಖಾನ್ ಪಠಾಣ್ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ನಟ ಶಾರುಖ್ ಖಾನ್ ಅವರು ವಡೋದರಾ ನಿಲ್ದಾಣಕ್ಕೆ ಅಗಸ್ಟ್ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬಂಧಿದ್ದರು.
 
 
ಈ ಸಂದರ್ಭದಲ್ಲಿ ಶಾರುಖ್ ಖಾನ್ ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರು. ಶಾರುಖಾ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಶಾರುಖ್ ಇದ್ದ ಬೋಗಿ ಕಡೆಗೆ ಜನರು ಗುಂಪು-ಗುಂಪಾಗಿ ನುಗ್ಗಲಾರಂಭಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

LEAVE A REPLY

Please enter your comment!
Please enter your name here