ರಮಾಬಾಯಿ ಬಾವಿಯೊಳಗೆ ಹಾರಿಯೇಬಿಟ್ಟಳು…

0
1345

ನಿತ್ಯ ಅಂಕಣ: ೬೯ -ತಾರಾನಾಥ್‌ ಮೇಸ್ತ,ಶಿರೂರು.
ಗಣೇಶಪುರಿಯಲ್ಲಿ ನಿತ್ಯಾನಂದ ಸ್ವಾಮಿಗಳ ಅನುಗ್ರಹ ಸಾಂಗತ್ಯ ಪಡೆಯಲು ಬಹಳಷ್ಟು ಭಕ್ತರು ಅವರಲ್ಲಿಗೆ ಬರುತ್ತಿದ್ದರು. ಹಾಗೆ ಬಂದು ಹೋಗುವ ಗುರುದೇವರ ಭಕ್ತ ಗಡಣದಲ್ಲಿ ಮುಂಬೈಯಿ ಪರಿಸರದ ರಮಾಬಾಯಿ ಕೂಡ ಆಗಿದ್ದಳು. ಅಂದು ಆಕೆಗೆ ಹಂದಿನೆಂಟರ ಆಸುಪಾಸಿನ ಹರೆಯ. ಅವಳ ಹೆತ್ತವರು ಗುರುದೇವರ ಪರಮಭಕ್ತರು. ರಮಾಬಾಯಿ ಬಾಲ್ಯದಿಂದಲೇ ಹೆತ್ತವರೊಂದಿಗೆ ಆಗಿಂದಾಗ ಗಣೇಶಪುರಿಗೆ ಬಂದು ಗುರುದೇವರ ದರ್ಶವನ್ನು ಪಡೆಯುತ್ತಿದ್ದಳು. ಆವಾಗಲೇ ಅವಳಿಗೆ ಅವಧೂತ ನಿತ್ಯಾನಂದರ ಮಹಿಮೆ ಪವಾಡಗಳು ತಿಳಿದು ಬಂದಿರುವುದು. ಗುರುದೇವರು ಎಂದರೆ ಆಕೆಗೆ ಅತೀವವಾದ ಭಕ್ತಿ, ಅವರ ಮೇಲಿರುವ ಶ್ರದ್ಧೆ ನಂಬಿಕೆ ಏಲ್ಲವೂ ಅತೀತ.

ರಮಾಬಾಯಿ ಒಂದು ದಿನ ಗಣೇಶಪುರಿಗೆ ಹೋಗಲು ಯೋಚಿಸುತ್ತಾಳೆ. ಹೋಗುವ ದಿನ ರಮಾಬಾಯಿ ಸಣ್ಣದಾದ ಅಪರಾಧ ಮಾಡುತ್ತಾಳೆ. ತಂದೆ ತಾಯಿಗೆ ತಿಳಿಸದೆ, ಒಬ್ಬಳೇ ಮನೆಯಿಂದ ಹೋರಡುತ್ತಾಳೆ. ರೈಲಿನಿಂದ ಇಳಿದವಳೇ ಗಣೇಶಪುರಿಗೆ ಹೋಗಬೇಕಾದ ಬಸ್ಸು ನಿಲುಗಡೆ ಹೊಂದುವ ಬಸ್ಸು ನಿಲ್ದಾಣದಲ್ಲಿ ಬಂದು ನಿಲ್ಲುತ್ತಾಳೆ. ಆವಾಗ ಅಲ್ಲಿ ಯಾವೊಂದು ಬಸ್ಸು ಗಣೇಶಪುರಿಗೆ ಹೋಗುವುದು ಇರಲಿಲ್ಲವಾಗಿತ್ತು. ಬಸ್ಸು ಬರಬಹುದೆಂಬ ನಿರೀಕ್ಷೆಯಲ್ಲಿ ಅತ್ತ ಇತ್ತ ಕತ್ತು ಇಣುಕಿಸುತ್ತ ರಮಾಬಾಯಿ ಬಹಳ ಸಮಯ ಬಸ್ಸು ನಿಲ್ದಾಣದಲ್ಲಿ ಕಾಯುತ್ತಾಳೆ. ಹಾಗೆ ಬಹಳ ಸಮಯ ಕಾದರೂ ಬಸ್ಸು ಬರಲಿಲ್ಲ. ಸುಂದರವಾಗಿರುವ ಯುವತಿಗೆ ಎದುರಾಗಿರುವ ಸಮಸ್ಯೆ ಏನೆಂದು ದೂರದಿಂದಲೇ ಬಾಡಿಗೆ ಕಾರಿನ ಚಾಲಕನಿಗೆ ಗೊತ್ತಾಗುತ್ತದೆ.

ಚಾಲಕ ತನ್ನ ಕಾರನ್ನು ಯುವತಿಯ ಸನಿಹ ನಿಲ್ಲಿಸಿದ. ಯುವತಿಯತ್ತ ಕಣ್ಣುಹಾಯಿಸಿ, ‘ನಾನು ಗಣೇಶಪುರಿಯತ್ತ ತೆರಳುತ್ತಿದ್ದೇನೆ ಬರ್ತಿಯಾ..?’ ಎಂದು ತಾನಾಗಿಯೇ ವಿಚಾರಿಸಿದ. ರಮಾಬಾಯಿ ತನಗೆ ಗಣೇಶಪುರಿಗೆ ಹೋಗಲು ಬಸ್ಸು ಇಲ್ಲದ ಪರಿಸ್ಥಿತಿ ಎದುರಾಗಿದೆ, ಕತ್ತಲೂ ಆವರಿಸುತ್ತಿದೆ. ಹಾಗಿಗಿ ಕಾರಿನಲ್ಲಿಯೇ ಗಣೇಶಪುರಿಗೆ ತೆರಳುವುದು ಉತ್ತಮವೆಂದು ಯೋಚಿಸುತ್ತಾಳೆ. ಯಾವೊಂದು ಆತಂಕ ಪಡದೆ ಕಾರು ಹತ್ತುತ್ತಾಳೆ. ಡ್ರೈವರು ಗಣೇಶಪುರಿಯಲ್ಲಿ ಬಾಡಿಗೆ ಮಾಡುತ್ತಿರುವನು. ಖಂಡಿತ ಅವನಿಗೆ, ನಾನು ಆರಾಧಿಸುವ ಗರುದೇವರ ಮಹಿಮೆಯು ತಿಳಿದಿರುತ್ತದೆ. ಚಾಲಕ ಸುರಕ್ಷಿತವಾಗಿ ತನಗೆ ಗಣೇಶಪುರಿಗೆ ತಲುಪಿಸ ಬಲ್ಲನು, ಎಂದು ಮನದಲ್ಲಿ ಅಂದುಕೊಂಡಳು. ಅವಳಿಗೆ ಕಾರಿನಲ್ಲಿ ನಿತ್ಯಾನಂದರ ಫೋಟ ಇರುವುದು ಕಂಡು ಬರುತ್ತದೆ. ನಾನು ಊಹಿಸಿದಂತೆ ಚಾಲಕ ಗುರುದೇವರ ಭಕ್ತ ಎನ್ನುವ ಭರವಸೆ ಮತ್ತು ಗೌರವವು ಆಕೆಗೆ ಅವನ ಮೇಲೆ ಬರುತ್ತದೆ.

ದೇವರ ಫೋಟ ಎದರು ಇಟ್ಟುಕೊಂಡವರೆಲ್ಲರು ಸದ್ಗುಣ ಹೊಂದಿರುತ್ತಾರೆ ಎಂದು ನಂಬವುದು ತಪ್ಪು. ಏಲ್ಲರೂ ಒಳ್ಳೆಯವರು ಆಗಿರುದಿಲ್ಲ. ರಮಾಬಾಯಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕನು ಕಾಮದ ಮನಸ್ಕನಾಗಿದ್ದ. ಅವನು ಯುವತಿಯನ್ನು ತನ್ನಾಶೆಯನ್ನು ಪೂರೈಸಿಕೊಳ್ಳಲೆಂದು ಕಾರಿನೊಳಗೆ ಹತ್ತಿಸಿಕೊಂಡಿದ್ದ. ಪಾಪಾ ಮುಗ್ದೆ ರಮಾಬಾಯಿಗೆ ವಿಕೃತ ಮನಸ್ಸಿನ ಚಾಲಕನ ದುರಾಲೋಚನೆ ಹೇಗೆ ಗೊತ್ತಾಗ ಬೇಕು..!! ಆದರೆ ಆಕೆ ನಂಬಿರುವ ಗುರುದೇವರು ಕೈ ಬಿಡುತ್ತಾರೆಯೇ..! ಚಲಿಸುತ್ತಿರುವ ಕಾರಿನ ಇಂಜಿನ್ನು ದೋಷ ಹೊಂದಿರುವುದು ಚಾಲಕನಿಗೆ ಕಂಡುಬರುತ್ತದೆ. ಅತಿಯಾದ ಕಪ್ಪು ಹೊಗೆಯು, ಕಾರಿನ ಹೊಗೆ ನಳಿಕೆಯಿಂದ ಹೊರಗಡೆ ಬರುತ್ತಿರುತ್ತದೆ. ಸ್ವಲ್ಪದ ಸಮಯದ ಬಳಿಕ ಕಾರು ಕೆಟ್ಟು ನಿಲ್ಲುತ್ತದೆ. ಚಾಲಕ ದುರಿಸ್ಥಿಗೊಳಿಸಲು ತೋಡಗಿದ. ಇಲ್ಲಿಗೆ ಯೋಚಿಸಿರುವ ಚಾಲಕನ ಸಂಚು ವಿಫಲವಾಗುತ್ತದೆ. ರಮಾಬಾಯಿ ಇನ್ನೇನು ಗಣೇಶಪುರಿಗೆ ಬಹಳ ದೂರವಿಲ್ಲ, ನಡೆದು ಸಾಗಿದರೂ ತಲುಪಬಹುದೆಂದು ನಡೆದುಕೊಂಡು ಹೋಗುತ್ತಾಳೆ.

ರಮಾಬಾಯಿ ವೇಗದ ನಡಿಗೆ ಹಾಕುತ್ತ, ಅಂತೂ ಕತ್ತಲ ಸಮಯದಲ್ಲಿ ಗುರುದೇವರ ಸಾನಿಧ್ಯವನ್ನು ತಲುಪುತ್ತಾಳೆ. ಸುಸ್ತಾಗಿ ಬಂದಿರುವ ಭಕ್ತೆಯನ್ನು ಗಮನಿಸಿದ ನಿತ್ಯಾನಂದರು, “ಏಂತಹಾ ಭಕ್ತಿ..! ಎಂತಹ ಶೃದ್ಧೆ..! ಅವಳೊಬ್ಬಳೇ ರಾತ್ರಿಯಲ್ಲಿ ಬಂದಿದ್ದಾಳೆ..! ಇದಕ್ಕೆ ಇನ್ನಾವುದನ್ನು ಸಂರಕ್ಷಿಸಬೇಕು..! ಇದು ಬಾವಿಗೆ ಹಾರೆಂದರೆ, ಅವಳು ಹಾಗೆ ಮಾಡಿಯಾಳೆ..?” ಎಂದರು. ಗುರುದೇವರ ಮಾತುಗಳು ಅವಳಿಗೆ ಕೇಳಲ್ಪಟ್ಟವು. ಅವಳಿಗೆ ಗುರುದೇವರ ಮಾತಿನಲ್ಲಿ ಏನೋ ಸಂಶಯ ಕಂಡುಬಂದಿತು..! ಅಲ್ಲೇ ಸನಿಹದಲ್ಲಿ ತೆರೆದ ಬಾವಿಯೊಂದು ಇತ್ತು. ಯಾವೊಂದು ಭಯವಿಲ್ಲದೆ ರಮಾಬಾಯಿ ಬಾವಿಯೊಳಗೆ ಹಾರಿಯೇಬಿಟ್ಟಳು. ಆಕೆಯ ಕೃತ್ಯವು ಆಶ್ರಮದ ಭಕ್ತರಿಗೆ ಯಾರಿಗೂ ತಿಳಿದು ಬರಲಿಲ್ಲ. ಆದರೆ ಗುರುದೇವರು ದೊಡ್ಡ ಸ್ವರದಲ್ಲಿ ನಕ್ಕರು. ನಗುತ್ತಲೇ ಸನಿಹ ಇದ್ದ ಭಕ್ತರಲ್ಲಿ ಬಾವಿಗೆ ಬಿದ್ದಿರುವ ಹುಡುಗಿಯನ್ನು ರಕ್ಷಿಸಲು ಹೇಳುತ್ತಾರೆ. ಅಲ್ಲಿದ್ದವರು ಬಾವಿಯ ಬಳಿಗೆ ಬಂದು ಇಣುಕಿ ಕಣ್ಣಾಡಿಸಿದಾಗ, ಹುಡುಗಿ ಬಿದ್ದಿರುವುದು ಕಂಡು ಬರುತ್ತದೆ. ನಂತರ ಹಗ್ಗವೊಂದಕ್ಕೆ ಕುರ್ಚಿ ಕಟ್ಟಿ ಕೆಳಗೆ ಇಳಿಸಲಾಗುತ್ತದೆ. ಅದರ ಮೂಲಕ ಆಕೆಯನ್ನು ಮೇಲಕ್ಕೆ ಎತ್ತಲಾಗುತ್ತದೆ. ಗುರುದೇವರ ಪರಮಭಕ್ತೆ ಯಾವೊಂದು ಗಾಯಗೊಳಗಾದೆ ರಕ್ಷಿಸಲ್ಪಡುತ್ತಾಳೆ.

Advertisement

LEAVE A REPLY

Please enter your comment!
Please enter your name here