ರಥ ತೆರವಿಗೆ ಮತ್ತೊಂಡು ಕ್ರೇನ್ ಬಳಕೆ!

0
289

ಬಳ್ಳಾರಿ ಪ್ರತಿನಿಧಿ ವರದಿ
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಕೊಟ್ಟೂರೇಶ್ವರ ರಥೋತ್ಸವ ವೇಳೆ ರಥ ಬಿದ್ದು ಅವಘಡ ಸಂಭವಿಸಿತ್ತು.
ಈಗ ರಸ್ತೆಯಲ್ಲಿ ಬಿದ್ದಿದ್ದ ರಥದ ತೆರವಿಗೆ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಇಂದು ಬೆಳಗಿನ ಜಾವ 3.30ರವರೆಗೂ ತೆರವು ಕಾರ್ಯಾಚರಣೆ ನಡೆದಿದೆ. ಎಲ್&ಟಿ ತಂಡದಿಂದ ತೆರವು ಕಾರ್ಯಾಚರಣೆ ನಡೆದಿದೆ. 2 ಕ್ರೇನ್ ಬಳಸಿದರೂ ಬೃಹತ್ ಗಾತ್ರದ ರಥದ ಗಾಲಿಗಳ ತೆರವು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಂದು ಕ್ರೇನ್ ಬಳಕೆಗೆ ನಿರ್ಧಾರಿಸಲಾಗಿದೆ. ಹೀಗಾಗಿ ಮತ್ತೊಂದು ಕ್ರೇನ್ ತರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಇದರಿಂದ ಎಲ್&ಟಿ ತಂಡ ಇನ್ನೊಂದು ಕ್ರೇನ್ ಗೆ ಕಾಯುತ್ತಿದೆ.
 
 
ಏನಿದು ಘಟನೆ?
ಪ್ರಸಿದ್ಧ ಕೊಟ್ಟೂರು ಗುರು ಬಶವೇಶ್ವರ ಜಾತ್ರಾ ಮಹೋತ್ಸವ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಕುಸಿದು ಬಿದ್ದಿದ್ದು, ರಥದಡಿ ಸಿಲುಕು ಹಲವರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ನಿನ್ನೆ ಸಂಜೆ ರಥೋತ್ಸವ ವೇಳೆ ಲಕ್ಷಾಂತರ ಭಕ್ತರು ಸೇರಿದ ವೇಳೆ ಈ ದುರಂತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here