ರಥಸಪ್ತಮಿ ಸಂಭ್ರಮ

0
407

ಮಂಡ್ಯ ಪ್ರತಿನಿಧಿ ವರದಿ
ಇಂದು ನಾಡಿನಾದ್ಯಂತ ರಥಸಪ್ತಮಿ ಸಂಭ್ರಮದಿಂದ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ ನಡೆಯಿತ್ತಿದೆ. ಸೂರ್ಯ, ಚಂದ್ರ ಮಂಡಲದ ಮೆರವಣಿಗೆ ನಡೆಯಲಿದೆ.
ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದಿದೆ. ಈ ದಿನ ಸೂರ್ಯನ ದರ್ಶನದಿಂದ ಉತ್ತಮ ಆರೋಗ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ.
 
 
ಮೈಸೂರು ಅರಮನೆಯಲ್ಲೂ ರಥಸಪ್ತಮಿ ವಿಶೇಷ ಪೂಜೆ
ರಥಸಪ್ತಮಿ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ವಿಶೇಷ ಪೂಜೆ ನಡೆದಿದೆ. ಭುವನೇಶ್ವರಿ, ಗಾಯತ್ರಿದೇವಿ, ತ್ರಿನೇಶ್ವರಿ, ಶ್ರೀಲಕ್ಷ್ಮೀರಮಣಸ್ವಾಮಿ, ವರಹಸ್ವಾಮಿ, ಪ್ರಸನ್ನ ಕೃಷ್ಣಸ್ವಾಮಿ, ಖಿಲ್ಲೆವೆಂಕಟರಮಣ ಸ್ವಾಮಿ ಮತ್ತು ಮಹಾಲಕ್ಷ್ಮೀ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ.ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಉತ್ಸವಮೂರ್ತಿಗಳ ಸಾಮೂಹಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12ರವರೆಗೂ ಉತ್ಸವಮೂರ್ತಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

LEAVE A REPLY

Please enter your comment!
Please enter your name here