ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ಚಿಂತನೆ

0
369

 
ನವದೆಹಲಿ ಪ್ರತಿನಿಧಿ ವರದಿ
ಭೂ, ವಾಯು ಹಾಗೂ ನೌಕಾದಳಗಳಿಗೆ ಒಬ್ಬರೇ ಜನರಲ್ ನೇಮಕಕ್ಕೆ ಕೇಂದ್ರ ಸರ್ಕಾರ ಕಾರ್ಯಪೌರುತ್ತವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
 
 
ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಬಿಜೆಪಿ 2014ರಲ್ಲಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳ ಪೈಕಿ ಒಂದಾಗಿದ್ದ ಭಾರತೀಯ ಸೇನೆಗಳಿಗೆ ಒಬ್ಬರೇ ಜನರಲ್ ಮಾಡುವ ಕುರಿತು ಕ್ರಮಕೈಗೊಂಡಿದೆ.
 
 
ನಿವೃತ್ತ ಜನರಲ್ ಶೇಖ್ ಅಥ್ಕರ್ ನೇತೃತ್ವದಲ್ಲಿ 11 ಸದಸ್ಯರೆಲ್ಲಾ ಸಮಿತಿಯೊಂದನ್ನು ರಚಿಸಿ ಸಾಧಕ ಬಾಧಕಗಳ ಕುರಿತಂತೆ 90 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗುವುದು. ಆ ವರದಿ ಅನ್ವಯ ಇದೇ ವರ್ಷದಲ್ಲಿ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಲಿದೆ ಎಂದು ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
 
 
 
ಕಾರ್ಗಿಲ್ ಯುದ್ಧದ ಬಳಿಕ ಪ್ರಮುಖ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳುವ ಸಲುವಾಗಿ ಭಾರತೀಯ ಮೂರು ಸೇನೆಗಳಿಗೆ ಒಬ್ಬರೇ ಜನರಲ್ ಮಾಡುವ ಕುರಿತಂತೆ ಉನ್ನತ ಸೇನಾಧಿಕಾರಿಯೊಬ್ಬರು ಶಿಫಾರಸ್ಸು ಮಾಡಿದ್ದರು. ಅದರಂತೆ ಬಿಜೆಪಿ ಲೋಕಸಭೆ ಚುನಾವಣೆಗೂ ಮುನ್ನ ತಾನು ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲೂ ಈ ಕುರಿತು ಆಶ್ವಾಸನೆ ನೀಡಿತ್ತು.

LEAVE A REPLY

Please enter your comment!
Please enter your name here