ರಕ್ತದಾನ ಶಿಬಿರ

0
379

 
ಮ0ಗಳೂರು ಪ್ರತಿನಿಧಿ ವರದಿ
ಸಂವಿದಾನ ಸಮಾಜದ ಸಮಾನತೆಯನ್ನು ಸಜ್ಜುಗೊಳಿಸಿ ಹೇಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸಿರುತ್ತದೆಯೋ ಹಾಗೆಯೇ ರಕ್ತದಾನ ಯಾವುದೇ ಜಾತಿ ಮತ ಬೇದವಿಲ್ಲದೆ ಮಾನವ ಜೀವವನ್ನು ರಕ್ಷಿಸುವಲ್ಲಿ ಅಪ್ರತಿಮ ಪಾತ್ರ ವಹಿಸುತ್ತಿದ್ದು, ಲಿಂಗಬೇದ ಅಸಮಾನತೆಯನ್ನು ಬದಿಗೊತ್ತಿ ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವಲ್ಲಿ ಶ್ರೇಷ್ಟ ಪಾತ್ರವನ್ನು ವಹಿಸುತ್ತಿರುವುದರಿಂದ ಸಂವಿದಾನ ಮತ್ತು ರಕ್ತದಾನ ಸಮಾನತೆಯನ್ನು ಪ್ರತಿಬಿಂಬಿಸುವ ಮೂಲಸ್ಥಾನ ಎಂದು ಕದ್ರಿಹಿಲ್ಸ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಹಾಗೂ ಕೆ.ಜಿ.ಟಿ.ಟಿ.ಐ ಸಂಸ್ಥೆಯ ಪ್ರಭಾರೆ ನಿರ್ದೇಶಕ ಗಿರಿಧರ್ ಸಾಲಿಯಾನ್ ಅಭಿಪ್ರಾಯ ಪಟ್ಟರು.
 
 
ಅವರು ಸಂವಿದಾನ ಶಿಲ್ಪಿ ಡಾ:ಅಂಬೇಡ್ಕರ್ ರವರ 125ನೇ ಜನ್ಮ ದಿನಾಚರಣೆ ಹಾಗೂ ಆ ಪ್ರಯುಕ್ತ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಾನು ಸ್ವತ: ರಕ್ತದಾನ ಮಾಡುವ ಮೂಲಕ ಲಯನ್ಸ್ ಕ್ಲಬ್ ಕದ್ರಿಹಿಲ್ಸ್ ಮಂಗಳೂರು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಒಟ್ಟು 96 ಮಂದಿ ಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿಯವರು ರಕ್ತದಾನ ಮಾಡಿರುವುದು ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು.
 
 
 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪೂಜಾ ಪೈ ರಕ್ತದಾನ ಒಂದು ನಿಸ್ವಾರ್ಥ ಸೇವೆಯಾಗಿದ್ದು ಈ ಮಹತ್ಕಾರ್ಯದಲ್ಲಿ ಭಾಗವಹಿಸಲು ಹಿಂದೇಟು ಹಾಕಬಾರದು ಎಂದು ಕರೆ ಇತ್ತರು. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮೆನ್ ಶಾಂತರಾಮ ಶೆಟ್ಟಿ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನವನ್ನು ತಿಳಿಸಿ ಶಿಕ್ಷಣಾರ್ಥಿಗಳಿಗೆ ರಕ್ತದಾನ ಮಾಡಲು ಉತ್ತೇಜನ ನೀಡಿದರು.

LEAVE A REPLY

Please enter your comment!
Please enter your name here