ರಕ್ತದಾನ ಶಿಬಿರ

0
328

ವರದಿ: ಹರ್ಷ ರಾವ್
ಇತ್ತಿಚೇಗೆ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕಾಲೇಜು ಸಭಾಂಗಣದಲ್ಲಿ ರೋಟರಿ ಪುತ್ತೂರು ಇದರ ಸಹಯೋಗದೊಂದಿಗೆ ಆಯೋಜಿಸಿತ್ತು.
 
 
 
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ|| ರಾಮಚಂದ್ರ ಭಟ್ , ಹಿರಿಯ ವೈದ್ಯರು ಆಗಮಿಸಿದ್ದರು. ಅತಿಥಿಗಳು ಮಾತನಾಡುತ್ತಾ ಮೌಲ್ಯಗಳನ್ನೇ ಕಳೆದುಕೊಂಡಿರುವ ಈ ಸಂದರ್ಭದಲ್ಲಿ , ವ್ಯಕ್ತಿಗಳ ನಡುವೆ ಪರಸ್ಪರ ಏಕತೆ,ಆತ್ಮೀಯತೆ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಬಹಳ ಪ್ರಮುಖ ಪಾತ್ರ ವಹಿಸುತ್ತದೆ, ತನ್ನಿಂದ ಸಮಾಜಕ್ಕೆ ಏನಾದರೂ ನೀಡುವಂಥಹ ಕಾರ್ಯಕ್ರಮಗಳನ್ನು ನೀಡುವಂತಾಗಲಿ ಯೆಂದು , ಮತ್ತಿದು ಯಾವುದೇ ಜಾತಿ,ಧರ್ಮ ಬೇಧಗಳಿಲ್ಲದೇ ಒಮ್ಮನಸ್ಸಿನಿಂದ ನಾವೆಲ್ಲಾ ಒಂದು ಎಂದು ತೋರಿಸಲು ಇದು ಅತ್ಯಂತ ಸಹಾಯಕಾರಿಯಾಗಿದೆಂದು ಅಭಿಪ್ರಾಯ ಪಟ್ಟರು.
 
 
 
ಹಾಗೆಯೇ ಪ್ರತೀ ವರ್ಷ ಕಾಲೇಜು ಇಂಥಹ ಸಮಾಜಮುಖಿ ಸೇವೆ ಸಲ್ಲಿಸುತ್ತಾ ಬಂದಿರುವುದಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಮುಂದುವರಿದು , ರಕ್ತದಾನ ಎಂಬುವುದು ಶ್ರೇಷ್ಠ ದಾನ ,ಒಬ್ಬ ವ್ಯಕ್ತಿಯ ಬದುಕು ಬೆಳಗಿಸಬಲ್ಲ ಕೆಲಸವೆಂದರು , ಹೀಗೆ ರಕ್ತದಾನದ ಮಹತ್ವವನ್ನು ಹೇಳುತ್ತಾ ಯಾರು ರಕ್ತದಾನವನ್ನು ಮಾಡಲು ಸೂಕ್ತರು , ರಕ್ತದಾನ ಮಾಡಬೇಕಾದರೆ ದೇಹದ ಆರೋಗ್ಯ ಹೇಗಿರಬೇಕು ಎಂಬುದನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಕೆ.ಜಿ.ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
 
 
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಹರೀಶ್ ರಾವ್. ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಅವರು ರಾಷ್ಟ್ರೀಯ ಸೇವಾ ಯೋಜನಾ ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿಯಾದ ಪ್ರಜ್ಞಾ ಪ್ರಾರ್ಥಿಸಿ, ಚೈತ್ರಾ ವಂದಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಯಂಸೇವಕ ತೇಜಸ್ ನೆರವೇರಿಸಿದರು. ತದನಂತರ ರಕ್ತದಾನ ಶಿಬಿರವು ನಡೆಯಿತು. ಉಪನ್ಯಾಸಕರು ಸಹಿತ ಸುಮಾರು 38 ಜನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here