ರಕ್ತದಾನ ಶಿಬಿರ

0
255

ಉಡುಪಿ ಪ್ರತಿನಿಧಿ ವರದಿ
ಮುನಿಯಾಲು ಆಯುರ್ವೆದ ವ್ಯೆದ್ಯಕೀಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಕಂದಾಯ ಇಲಾಖಾ ನೌಕರರ ಸಂಘ, ಉಡುಪಿ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಾಗೂ ಗ್ರಾಮ ಸಹಾಯಕರ ಸಂಘ ವತಿಯಿಂದ ಅ. 2 ರಂದು ಮಿಷನ್ ಕಂಪೌಂಡ್ ನಲ್ಲಿ ಜರಗಿದ ಶಿಬಿರದಲ್ಲಿ ಸುಮಾರು 75 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
 
 
ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ನೌಕರರು ರಕ್ತದಾನದ ಕುರಿತಾಗಿ ವಹಿಸಿರುವ ಕಾಳಜಿಯನ್ನು ಶ್ಲಾಘಿಸಿದರು. ಉಡುಪಿ ನಗರಸಭೆಯ ಪೌರಆಯುಕ್ತ ಮಂಜುನಾಥಯ್ಯ, ತಹಶೀಲ್ದಾರರಾದ ಮಹೇಶ್ಚಂದ್ರ, ಮುನಿಯಾಲು ಆಯುರ್ವೆದ ವ್ಯೆದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ/ ಸತ್ಯನಾರಾಯಣ ಭಟ್, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಅಸಾದಿ, , ಉಡುಪಿ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಪುನೀತ್ ಕುಮಾರ್, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಹಿರಿಯರಾದ ಕೆ. ಶಿವರಾಮ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here