ರಂಧ್ರದಿಂದ ಬಂದ ಊದುಬತ್ತಿಯ ಸುಗಂಧ ಚೆನ್ನಾಗಿದೆ

0
1054

ನಿತ್ಯ ಅಂಕಣ-೯೨ : ತಾರಾನಾಥ್‌ ಮೇಸ್ತ, ಶಿರೂರು.
ಕೇರಳ ರಾಜ್ಯದ ಕಣನ್ನೂರು ಇಲ್ಲಿಯ ನಿವಾಸಿ ಪಿ. ವಿ. ರವೀಂದ್ರನ್ ಅವರು ನಿತ್ಯಾನಂದ ಸ್ವಾಮಿಗಳ ಭಕ್ತರು. ಇವರು ಮಳಯಾಳ ಭಾಷೆಯ ಸಾಹಿತಿಗಳು. ಗುರುದೇವರ ಚರಿತೆ “ಸದ್ಗುರು ನಿತ್ಯಾನಂದ ಭಗವಂತ” ಕೃತಿಯನ್ನು ಬರೆದವರು. ಅಲ್ಲದೆ ಸಾದ್ವಿ ತುಳಸಿ ಅಮ್ಮ ಅವರು ಕನ್ನಡದಲ್ಲಿ ಬರೆದಿರುವ ‘ಚಿದಾಕಾಶ ಗೀತಾ- ಆತ್ಮ ಪ್ರಭಾವ’ ಗ್ರಂಥವನ್ನು ಮಳಯಾಳ ಭಾಷೆಯಲ್ಲಿ ಭಾಷಾಂತರ ಮಾಡಿದವರು.
ರವೀಂದ್ರನ್ ಅವರಿಗೆ ಶ್ರೀ ಎಮ್.ವಿ. ಮೆನನ್ ಎನ್ನುವ ಮಿತ್ರರಿದ್ದರು. ಅವರು ಭಾರತೀಯ ವಿಮಾನ ಪ್ರಾಧಿಕಾರದಲ್ಲಿ ರೇಡಿಯೋ ಆಫೀಸರ್ ಆಗಿದ್ದರು. ಅವರಿಗೊಬ್ಬರು ಮಿತ್ರರು ಇರುತ್ತಾರೆ. ಅವರು ವಿಮಾನದಲ್ಲಿ ಫೈಲಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಕೂಡ ನಿತ್ಯಾನಂದ ಸ್ವಾಮಿಗಳ ಭಕ್ತರಾಗಿದ್ದವರು. ಆಗಾಗ ಗಣೇಶುಪುರಿಗೆ ಹೋಗಿ ಗುರುದೇವರ ದರ್ಶನವನ್ನು ಪಡೆಯುತ್ತಿದ್ದರು.
ಒಮ್ಮೆ ಅವರಿಗೆ ಆಕಾಶದಲ್ಲಿ ವಿಮಾನದಲ್ಲಿ ಸಂಚರಿಸುತ್ತಿರುವಾಗ, ಗಣೇಶಪುರಿ ಭಾಗದಿಂದ ಹಾದು ಹೋಗುವ ಅವಕಾಶ ದೊರೆಯುತ್ತದೆ. ಆಗ ಅವರು ಆಕಾಶದಲ್ಲಿಯೇ ವಿಮಾನವನ್ನು ನಿತ್ಯಾನಂದ ಆಶ್ರಮಕ್ಕೆ ಒಂದು ಸುತ್ತು. ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ತೆರಳುತ್ತಾರೆ.
ಒಂದು ರಜಾ ದಿನ ಪೈಲೆಟ್ ಭಕ್ತನು ಗಣೇಶಪುರಿಗೆ ನಿತ್ಯಾನಂದರ ದರ್ಶನ ಪಡೆಯಲು ಹೋಗಿದ್ದನು. ಗುರುದೇವರು ಪೈಲೆಟ್ ಭಕ್ತನನ್ನು ಕಂಡು, ನೀನು ಆಕಾಶದ ಮೇಲೆ ಪ್ರದಕ್ಷಿಣೆ ಹಾಕಿರುವೆಯಾ..! ಎಂದು ಹೇಳುತ್ತಾರೆ. ಗುರುದೇವರ ಮಾತುಕೇಳಿ ಪೈಲೆಟ್ ಅಚ್ಚರಿಗೆ ಒಳಗಾಗುತ್ತಾನೆ. ಭಕ್ತನು ಎಲ್ಲಿಯೂ ಇರಲಿ. ಅವನ ನಿಸ್ವಾರ್ಥ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುತ್ತಾನೆ ಎಂಬುವುದಕ್ಕೆ ಇದೊಂದು ಉದಾಹರಣೆ ಎನ್ನಬಹುದು. ಪೈಲೆಟ್ ಭಕ್ತನ ಜೀವನದಲ್ಲಿ ನಡೆದ ಘಟನೆಯನ್ನು ರವೀಂದ್ರನ್ ಬಳಿಯಲ್ಲಿ ಎಮ್.ವಿ. ಮೆನನ್ ಅವರು ಹೇಳಿಕೊಳ್ಳುತ್ತಾರೆ. ಈ ಘಟನೆಯನ್ನು ರವೀಂದ್ರನ್ ಅವರು ನಿತ್ಯಾನಂದ ಭಗವಂತ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಅದೇ ರೀತಿಯಲ್ಲಿ ಮುಂಬೈಯಲ್ಲಿ ಕೊಠಡಿ ಮಾಡಿಕೊಂಡು, ಗುರುದೇವರ ಭಕ್ತನೋರ್ವನು ಜೀವನ ಸಾಗಿಸುತ್ತಿದ್ದನು. ಆತ ಭಕ್ತಿಯಿಂದ ನಿತ್ಯಾನಂದರನ್ನು ನೆನೆದು, ಗೋಡೆಯಲ್ಲಿ ಹೊಡೆದಿರುವ ಆಣಿ ತೆಗೆದು, ಉಂಟಾದ ರಂಧ್ರದಲ್ಲಿ ಊದುಬತ್ತಿ ಹಚ್ಚಿಸಿ ಇಡುತ್ತಿದ್ದನು. ಇದು ಆತನ ನಿತ್ಯದ ತಪ್ಪದ ದಿನಚರಿ. ಒಮ್ಮೆ ಆತನು ಗಣೇಶಪುರಿಗೆ ಗುರುದೇವರ ದರ್ಶನ ಪಡೆಯಲು ಹೋದಾಗ, ನಿತ್ಯಾನಂದರು “ನಿನ್ನ ಪೂಜೆ ತಲುಪಿದೆ. ರಂಧ್ರದಿಂದ ಬಂದ ಊದುಬತ್ತಿಯ ಸುಗಂಧ ಚೆನ್ನಾಗಿದೆ” ಅಂದರಂತೆ. ಒಮ್ಮೊಮ್ಮೆ ಅವರ ಸಭಾಂಗಣದಲ್ಲಿ ಅಗರಬತ್ತಿಯ ಪರಿಮಳ ಪಸರಿಸಿದನ್ನು ಭಕ್ತರು ಅನುಭವಿಸಿದ್ದು ಇದೆ. ಈ ಬಗ್ಗೆ ಅತೀ ಆತ್ಮೀಯ ಭಕ್ತರು, ಗುರುದೇವರಲ್ಲಿ ಕೇಳಿದಾಗ, ‘ಭಕ್ತರ ಪೂಜೆ’ ಎಂದು ಸೂಕ್ಷ್ಮ ಉತ್ತರ ಅವರು ನೀಡುತ್ತಿದ್ದರಂತೆ.

LEAVE A REPLY

Please enter your comment!
Please enter your name here