ಯೋಗ ತರಬೇತಿ ಶಿಬಿರ ಉದ್ಘಾಟನೆ

0
454

ಮ0ಗಳೂರು ಪ್ರತಿನಿಧಿ ವರದಿ
ನಗರದ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ, ಸಂಸ್ಥೆಯ ಮಹಿಳಾ ಅಭಿವೃದ್ಧಿ ಘಟಕದ ವತಿಯಿಂದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯೋಗರತ್ನ ಶ್ರೀ.ಗೋಪಾಲಕೃಷ್ಣ ದೇಲಂಪಾಡಿ ಇವರ ಮಾರ್ಗದರ್ಶನದಲ್ಲಿ ಜುಲೈ 4 ರಿಂದ ಆಗಸ್ಟ್ 3 ರವರೆಗೆ ಒಂದು ತಿಂಗಳ ಕಾಲ ಯೋಗ ತರಬೇತಿ ಶಿಬಿರ ವನ್ನು ಆಯೋಜಿಸಿದ್ದು, ಇದರ ಉದ್ಘಾಟನಾ ಸಮಾರಂಭವು ಜುಲೈ 4 ರಂದು ಸಂಸ್ಥೆಯ ಪ್ರಾಂಶುಪಾಲರಾದ ಸುಶೀಲಾ ಕುಮಾರಿ ವಿ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
 
ಸಮಾರಂಭದ ಉದ್ಘಾಟನೆಯನ್ನು ಗೋಪಾಲಕೃಷ್ಣ ದೇಲಂಪಾಡಿ, ಮಾಡಿದರು. ಸಂಸ್ಥೆಯ ಕುಲಸಚಿವರಾದ ರಾಜೇಂದ್ರ ಪ್ರಸಾದ್, ಮಹಿಳಾ ಅಭಿವೃದ್ಧಿ ಘಟಕದ ಅಧಿಕಾರಿಗಳಾದ ಮೃದುಲಾ ವಿ. ಮತ್ತು ಮಮತಾ ಎನ್., ಸಂಸ್ಥೆಯ ವಿವಿಧ ವಿಭಾಗಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here