ಯೋಗಾಭ್ಯಾಸದಿಂದ ಆರೋಗ್ಯವಂತರಾಗಿರಲು ಸಾಧ್ಯ

0
234

ವರದಿ: ಲೇಖಾ
ಯೋಗ ಒಂದು ತಪಸ್ಸು ಇದ್ದಂತೆ. ಪ್ರತಿ ನಿತ್ಯ ಯೋಗಾಭ್ಯಾಸವನ್ನು ರೂಢಿಸಿಕೊಂಡಲ್ಲಿ ಆರೋಗ್ಯವಂತರಾಗಿರಲು ಸಾಧ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
 
 
ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿನಿತ್ಯ ಯೋಗದ ದಿನವೆಂದು ತಿಳಿದು ನಿರಂತರ ಯೋಗಾಭ್ಯಾಸ ಮಾಡಿ ಎಂದು ಜನತೆಗೆ ಕರೆ ನೀಡಿದರು.
 
 
 
ಯೋಗ ಯಾವುದೇ ಒಂದು ಸಮುದಾಯಕ್ಕೆ ನೀಡಿದ ಕೊಡುಗೆಯಲ್ಲ, ಎಲ್ಲಾ ಸಮುದಾಯದವರೂ ಆರೋಗ್ಯ ದೃಷ್ಠಿಯಿಂದ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಲುವುದು ಮುಖ್ಯ ಎಂದು ತಿಳಿಸಿದರು.
 
 
ಇದೇ ಸಂದರ್ಭದಲ್ಲಿ ಯೋಗದ ಕುರಿತು ದೇಶಾದ್ಯಂತ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನರಲ್ಲಿ ಇಷ್ಟೊಂದು ಜಾಗೃತಿ ಮೂಡಿದೆ ಎಂದರೆ ಅದಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವರ ಪರಿಶ್ರಮ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು.
 
 
2014, ಡಿಸೆಂಬರ್ 11ರಲ್ಲಿ 69ನೇ ಯು ಎನ್ ಅಸೆಂಬ್ಲಿ ಪ್ರಧಾನಿ ಪ್ರಸ್ತಾವನೆಯನ್ನು ಮನ್ನಿಸಿ, ಜೂನ್ 21ರಂದು ಅಂತಾರಾಷ್ಟ್ರಿಯ ಯೋಗ ದಿನ ಎಂದು ಘೂಷಿಸಿತು. ನಿಜವಾಗಲು ಇದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here