ಯುವಜನತೆ ಅದ್ಭುತ ಶಕ್ತಿಯ ಆಗರ

0
359

ವರದಿ: ಸುನೀಲ್ ಬೇಕಲ್
ಮನುಷ್ಯ ತನ್ನ ಜೀವಿತಾ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಸಮಾಜ ಮತ್ತು ಸನ್ಮಾನ ಈ ನಾಲ್ಕು ವಿಷಯಗಳ ಅನಿವಾರ್ಯತೆಯನ್ನು ಅರಿತು ಮುಂದುವರಿದಲ್ಲಿ ಸಾರ್ಥಕ್ಯ ಮನೋಭಾವವನ್ನು ಹೊಂದುತ್ತಾನೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್. ಸಿ. ಲೋಧ ರವರು ಅಭಿಪ್ರಾಯಪಟ್ಟರು.
 
 
 
ಅವರು ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದ ಶಿಬಿರಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಹಿರಿಯ ಪ್ರಾದೇಶಿಕ ಪ್ರಬಂಧಕರಾದ ವಾಸ್ತಿ ವೆಂಕಟೇಶ್ ರವರು ಮಾತನಾಡಿ ಸ್ವ ಉದ್ಯೋಗವನ್ನು ಪ್ರಾರಂಭಿಸುವಾಗ ಬ್ಯಾಂಕ್ ಗಳ ಸಹಕಾರವನ್ನು ಪಡೆದು ಮುಂದುವರಿಸಿದಲ್ಲಿ ಹೆಚ್ಚಿನ ಜವಾಬ್ದಾರಿಯೊಂದಿಗೆ ಕೆಲಸ ನಿರ್ವಹಿಸುತ್ತೀರಿ ಎಂದು ಕಿವಿ ಮಾತು ನೀಡಿದರು.
 
ಕಾರ್ಯಕ್ರಮದಲ್ಲಿ ಕಲ್ಕುಂಡ್ರಿ, ನಿರ್ದೇಶಕರು, ಎನ್.ಎ.ಸಿ.ಇ.ಆರ್, ಬೆಂಗಳೂರು ಮತ್ತು ಸಂಸ್ಥೆಯ ನಿರ್ದೇಶಕರಾದ ಅಜಿತ್ ಕೆ. ರಾಜಣ್ಣವರ್ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅನಸೂಯ ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ವಂದಿಸಿದರು.

LEAVE A REPLY

Please enter your comment!
Please enter your name here