ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ

0
393

 
ವರದಿ: ಲೇಖಾ
ಯುರೋಪಿಯನ್ ಒಕ್ಕೂಟ(ಇಯು)ದಿಂದ ಬ್ರಿಟನ್ ಹೊರಹೋಗಿದೆ. ಬಹು ನಿರೀಕ್ಷಿತ ಬ್ರೆಕ್ಸಿಟ್ ಜನಮತ ಸಂಗ್ರಹ ಫಲಿತಾಂಶ ಪ್ರಕಟವಾಗಿದ್ದು, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂಬುದಾಗಿ ಜನಮತಗಣನೆಯಲ್ಲಿ ಸ್ಪಷ್ಟ ಜನಾಭಿಪ್ರಾಯ ಬಂದಿದೆ.
 
 
 
ಹೊರಹೋಗುವ ಪರವಾಗಿ ಸುಮಾರು ಷೇ.51. 8ರಷ್ಟು ಮತಗಳು ಹಾಗೂ ಬ್ರಿಟನ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕು ಎಂಬುದರ ಪರವಾಗಿ ಶೇಕಡಾ 48.2ರಷ್ಟು ಮತಗಳು ಬಂದಿವೆ. ಹೀಗಾಗಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆದಿದೆ.
 
 
 
28 ರಾಷ್ಟ್ರಗಳನ್ನೊಳಗೊಂಡ ಯುರೋಪಿಯನ್ ಒಕ್ಕೂಟದಿಂದ 43 ವರ್ಷಗಳ ನಂತರ ಬ್ರಿಟನ್ ಅಧಿಕೃತವಾಗಿ ಒಕ್ಕೂಟದಿಂದ ಹೊರಹೋಗಿರುವ ಪ್ರಥಮ ದೇಶವಾಗಿದೆ. ಜೂನ್ 23 ನಿಜವಾದ ಸ್ವಾತಂತ್ರ್ಯ ದಿನ ಎಂದು ಬ್ರಿಟನ್ ನಿಂದ ಹೊರ ಹೋಗುವ ಪರವಿದ್ದ ಪ್ರಜೆಗಳು ಅಭಿಪ್ರಾಯವ್ಯಕ್ತಪಡಿಸಿ ಸಂಭ್ರಮಿಸುತ್ತಿದ್ದಾರೆ.
 
 
 
ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರ ಹೋಗಬೇಕೋ ಅಥವಾ ಅದರೊಳಗೇ ಉಳಿಯಬೇಕೋ ಎಂಬುದರ ಕುರಿತು ಜೂನ್ 23ರಂದು ಬ್ರಿಟನ್ ನಲ್ಲಿ ಜನಮತಗಣನೆ ನಡೆದಿತ್ತು. ಬ್ರಿಟನ್‌ನಲ್ಲಿರುವ 12 ಲಕ್ಷ ಭಾರತೀಯ ಮೂಲದವರೂ ಸೇರಿದಂತೆ ಒಟ್ಟಾರೆ 4.6 ಕೋಟಿ ಮತದಾರರು, ಜನಮತಗಣನೆಯಲ್ಲಿ ಹಕ್ಕು ಚಲಾಯಿಸಿದ್ದರು.
 
 
 
ಬ್ರೆಕ್ಸಿಟ್ ಮತಎಣಿಕೆಯ ಫಲಿತಾಂಶ ಹೊರಬೀಳುತ್ತಿರುವಂತೆಯೇ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಭಾರತದ ಷೇರುಮಾರುಕಟ್ಟೆ ಭಾರೀ ಕುಸಿತ ಕಂಡಿದೆ.
 
 
 
ಯೂರೋಪಿಯನ್ ಒಕ್ಕೂಟ ತೊರೆಯುವಂತೆ ಬ್ರಿಟನ್ ಜನತೆ ಮತ ಹಾಕಿದ್ದು, ಅವರ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದು ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ. ಅಕ್ಟೋಬರ್ ನಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕ್ಯಾಮರೂನ್ ಭಾವುಕರಾಗಿ ಘೋಷಿಸಿದ್ದಾರೆ.
 
 
 
ವ್ಯಾಪಾರ ಮತ್ತು ಭದ್ರತೆಯ ನಿಟ್ಟಿನಲ್ಲಿ ಯುರೋಪಿಯನ್‌ ರಾಷ್ಟ್ರಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್‌, ಇಟಲಿ, ಲಕ್ಸೆಂಬರ್ಗ್‌ ಮತ್ತು ನೆದರ್‌ಲೆಂಡ್‌ ದೇಶಗಳು 1958ರಲ್ಲಿ ಯರೋಪಿಯನ್‌ ಆರ್ಥಿಕ ಒಕ್ಕೂಟ ಎಂಬ ಸಂಘಟನೆ ಹುಟ್ಟುಹಾಕಿಕೊಂಡಿದ್ದವು. ನಂತರ ಇದಕ್ಕೆ 22 ರಾಷ್ಟ್ರಗಳು ಸೇರ್ಪಡೆಯಾಗಿದ್ದವು. ಈ ಪೈಕಿ ಬ್ರಿಟನ್‌ 1973ರಲ್ಲಿ ಸೇರ್ಪಡೆಯಾಗಿತ್ತು.

LEAVE A REPLY

Please enter your comment!
Please enter your name here