ಯುಪಿ ರಾಜಕೀಯದಲ್ಲಿ ಹೈಡ್ರಾಮ!

0
333

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಒಂದೆಡೆ ಯಾದವೀ ಕಲಹ ಭುಗಿಲೆದಿದ್ದರೆ, ಮತ್ತೊಂದೆಡೆ ಎರಡೂ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮತ್ತು ಘರ್ಷಣೆಗೆ ಕಾರಣವಾದ ಪ್ರಸಂಗ ಎಸ್‍ಪಿ ಕಚೇರಿ ಮುಂದೆ ನಡೆದಿದೆ.
 
ಪಕ್ಷದ ಪರಮೋಚ್ಚ ನಾಯಕ ಮುಲಾಯಂಸಿಂಗ್ ಯಾದವ್ ಇಂದು ಕರೆದಿದ್ದ ಪಕ್ಷದ ಸಂಸದರು, ಸಚಿವರು ಮತ್ತು ಶಾಸಕರ ಸಭೆಯ ಸಂದರ್ಭದಲ್ಲೇ ಕಚೇರಿ ಹೊರಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಸಿಂಗ್ ಯಾದವ್ ಕಾರ್ಯಕರ್ತರು ಪರಸ್ಪರ ಮಾತಿನ ಚಕಮಕಿ ಮತ್ತು ಘರ್ಷಣೆಯಲ್ಲಿ ತೊಡಗಿದಾಗ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

LEAVE A REPLY

Please enter your comment!
Please enter your name here