ಯುಪಿಯಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್

0
302

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಪ್ರದೇಶದಲ್ಲಿ ಮುಖ್ಯಂತ್ರಿಯಾಗಿ ಗದ್ದುಗೆ ಏರುತ್ತಿದ್ದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಯುಪಿಯ ಸಿಎಂ ಆದೇಶದಂತೆ ಇಂದು ಉತ್ತರಪ್ರದೇಶದಲ್ಲಿ ಪೊಲೀಸರು ರೋಡ್ ರೋಮಿಯೋ ಸ್ಕ್ವಾಡ್ ದಾಳಿ ನಡೆಸಿದ್ದಾರೆ.
 
 
ಕಾಲೇಜು, ಪಾರ್ಕ್, ಮಾಲ್ ಗಳ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಕಾಣಿಸಿಕೊಂಡ ಜೋಡಿಗಳು, ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಹಪಾಠಿಗಳ ಜೊತೆ ಕೂತು ಸ್ಟಡಿ ಮಾಡ್ತಿರೋ ವಿದ್ಯಾರ್ಥಿಗಳನ್ನೂ ವಿಚಾರಣೆ ನಡೆಸಿದ್ದಾರೆ. ಲವರ್ ಜೊತೆ ಕಾಣಿಸಿಕೊಳ್ಳೋ ಯುವಕರಿಗೆ ಸ್ಥಳದಲ್ಲೇ ಶಿಕ್ಷೆ ನೀಡಲಾಗಿದೆ. ಕಾಲೇಜು, ಮಾಲ್, ಪಾರ್ಕ್ ನಲ್ಲೇ ಶಿಕ್ಷೆ ನೀಡಲಾಗಿದೆ.
 
 
ಮಹಿಳಾ ಪೊಲೀಸ್ ತಂಡದಿಂದ ಕಾರ್ಯಾಚರಣೆ ನಡೆದಿದೆ. ಉತ್ತರಪ್ರದೇಶದ ಲಖನೌ, ಮೀರತ್ ಹಾಗೂ ಬುಲಂದ್ ಶಹರ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಿನ್ನೆ 50 ಜೋಡಿಗಳನ್ನು ವಶಪಡಿಸಿಕೊಂಡ ಪೊಲೀಸರು ಇವತ್ತೂ ಆ್ಯಂಟಿ ರೋಮಿಯೋ ಸ್ಕ್ವಾಡ್ ಮುಂದುವರಿದಿದೆ.
 
 
 
ಪೊಲೀಸರ ಕಾರ್ಯಾಚರಣೆ ಬಗ್ಗೆ ಯುವಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here