ಯುದ್ಧ ಭೀತಿ ಎದುರಾಯ್ತೇ…?

0
802

ವಾರ್ತೆ ಸ್ಪೆಷಲ್‌ ರಿಪೋರ್ಟ್‌

ಯುದ್ಧ…ಯುದ್ಧ…ಯುದ್ಧ…ಇದೀಗ ವಿಶ್ವದ ವಿವಿಧ ರಾಷ್ಟ್ರಗಳ ಒಳಗೆ ʻಕೊರೊನಾʼ ಯುದ್ಧ ನಡೆಯುವ ಬೆನ್ನಲ್ಲೇ ಮತ್ತೊಂದು ಭೀಕರ ಯುದ್ಧಕ್ಕೆ ಸಿದ್ಧತೆ ನಡೆಯುತ್ತಿದೆಯೇ? ಎಂಬ ದೊಡ್ಡ ಪ್ರಶ್ನೆ ಉದ್ಭವಿಸಲಾರಂಭಿಸಿದೆ… ಕೊರೊನಾದಿಂದಾಗಿ ಅಕ್ಷರಶಃ ಹಲವು ರಾಷ್ಟ್ರಗಳು ಕುಗ್ಗಿಹೋಗಿವೆ. ಆರ್ಥಿಕ ಸಂಕಷ್ಟಗಳು ತೀವ್ರವಾಗಿ ಎದುರಾಗುತ್ತಿವೆ. ಏತನ್ಮಧ್ಯೆ ಮತ್ತೊಂದು ಗಂಢಾಂತರ ಎದುರಿಸಲು ಅಕ್ಷರಶಃ ಸಿದ್ದರಾಗಲೇ ಬೇಕೆಂಬ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.


೨೦೨೪ಕ್ಕೆ ಮತ್ತೊಮ್ಮೆ ದೊಡ್ಡ ಸಮಸ್ಯೆ ಎದುರಾಗುವ ಬಗ್ಗೆ ಈಗಾಗಲೇ ಮಾಹಿತಿ ಲಭ್ಯವಾಗಿದೆ. ಭಾರತವೂ ಸೇರಿದಂತೆ ೧೩ರಾಷ್ಟ್ರಗಳಿಗೆ ಭೀಕರ ದುಂಬಿ ಕಾಟ ಆಗಲಿದೆಯಂತೆ. ಈ ಮಳೆಗಾಲದಲ್ಲಂತೂ ಭೀಕರ ಪ್ರವಾಹ, ಪ್ರಕೋಪಗಳು ಉಂಟಾಗಿ ತೀವ್ರ ಸಮಸ್ಯೆಗಳು ತಲೆದೋರಲಿದೆ. ಇದಲ್ಲದೆ ಇನ್ನೊಂದು ಸಮಸ್ಯೆಯನ್ನು ವಿಶ್ವ ಎದುರಿಸುವ ಸ್ಥಿತಿ ಇದೀಗ ನಿರ್ಮಾಣ ವಾಗಿದೆಯಂತೆ!
ಹಾಗಾದರೆ ಅದೇನು? ಅಂತಹ ಸಮಸ್ಯೆ ಎಲ್ಲಾಗುತ್ತದೆ? ಅದಕ್ಕೆ ಕಾರಣಗಳೇನು ಎಂಬ ಪ್ರಶ್ನೆ ಉದ್ಭವಿಸತೊಡಗಿದೆ.


ಜ್ಯೋತಿಷ್ಯ ಶಾಸ್ತ್ರವು ಇದು ಹೌದು ಎಂಬುದನ್ನು ಪ್ರಭಲವಾಗಿ ಹೇಳುತ್ತಿದೆ. ಪ್ರಖ್ಯಾತ ಜ್ಯೋತಿಷಿ ಕೆ.ವಿ.ಗಣೇಶ್‌ ಭಟ್‌ ಕೆಲವೇ ದಿನಗಳಲ್ಲಿ ದೊಡ್ಡ ಯುದ್ಧ ನಡೆಯುವ ಭವಿಷ್ಯ ನುಡಿದಿದ್ದಾರೆ. ಏಪ್ರಿಲ್‌ ೧೪ರಿಂದ ಜೂನ್‌ ೧೬ ರ ಒಳಗೆ ಹೊರ ದೇಶಗಳಲ್ಲಿ ಯುದ್ಧ ಸಂಭವಿಸಿಯೇ ಸಂಭವಿಸುತ್ತದೆ ಎನ್ನುತ್ತಾರೆ ಅವರು. ೩ ದೇಶಗಳು ಸೇರಿಕೊಂಡು ಈ ಯುದ್ಧ ನಡೆಯುತ್ತದೆ ಎಂದವರು ವ್ಯಾಖ್ಯಾನಿಸುತ್ತಿದ್ದಾರೆ. ಒಂದೊಮ್ಮೆ ಯುದ್ಧ ಸಂಭವಿಸಿದ್ದೇ ಆದಲ್ಲಿ ಇನ್ನೊಂದು ಆರ್ಥಿಕ ಸಂಕಷ್ಟ ಎದುರಾಗುವುದರಲ್ಲಿ ಸಂದೇಹವಿಲ್ಲ. ಅನೇಕಾನೇಕ ತೊಂದರೆಗಳನ್ನು ಮತ್ತೊಮ್ಮೆ ಜನ ಎದುರಿಸುವ ಸ್ಥಿತಿ ಬರುವುದಂತೂ ಸತ್ಯ.

Advertisement

LEAVE A REPLY

Please enter your comment!
Please enter your name here