ಯಾವುದು ನಿನಗೆ ಹಿಂಸೆಯೊ ಅದನ್ನು ಬೇರೆಯವರಿಗೆ ಮಾಡಬೇಡ

0
265

 
ಬೆಂಗಳೂರು ಪ್ರತಿನಿಧಿ ವರದಿ
ಸರ್ವ ಕಾಲ, ಸರ್ವ ದೇಶ, ಸರ್ವ ಸಮಯ, ಸರ್ವ ಜನಾಂಗಗಳಲ್ಲಿಯೂ ಸಲ್ಲುವಂತಹ ನಿಯಮಗಳು ಇರುತ್ತವೆ, ಅವುಗಳಲ್ಲಿ ಒಂದು ‘ಯಾವುದು ನಿನಗೆ ಹಿಂಸೆಯೊ ಅದನ್ನು ಬೇರೆಯವರಿಗೆ ಮಾಡಬೇಡ’. ಈ ನಿಯಮವನ್ನು ಎಲ್ಲರೂ ಪಾಲಿಸಲಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
 
mata_chaturmasya11
 
ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಭಾರತದ ದೇಸಿ ತಳಿಗಳು ಉಚ್ಛ ಗುಣಮಟ್ಟದ್ದಲ್ಲ ಅಂತ ಹೇಳಿ ವಿದೇಶೀ ತಳಿಗಳನ್ನು ತಂದು ಸಂಕರ ಮಾಡಲು ಸರಕಾರ ಹಾಗೂ ವಿಜ್ಞಾನಿಗಳು ಅವಕಾಶ, ಪ್ರೋತ್ಸಾಹ ನೀಡಿದರು. ಹಾಗಂತ ಭಾರತದ ಮನುಷ್ಯರ ಗುಣಮಟ್ಟ ಸರಿ ಇಲ್ಲವೆಂದು, ಮದುವೆ ಮಾಡಿಸದೆ ವಿದೇಶೀ ಸಂತತಿಯನ್ನು ಪ್ರನಾಳಿಸುವ ಮೂಲಕ ಸಂತತಿ ಬೆಳೆಸಲು ಸಾಧ್ಯವೇ? ಗೋವಿಗೆ ನಾವು ಏನು ಮಾಡುತ್ತಿದ್ದೆವೆಯೋ, ಅದನ್ನ ನಮಗೆ ಮಾಡಿದ್ರೆ ಒಪ್ಪಿಗೆಯೇ? ಎಂದು ಪ್ರಶ್ನಿಸಿದರು.
 
mata_chaturmasya112
 
ಒಮ್ಮೆ ಗೋವಿನ ಸ್ಥಾನದಲ್ಲಿ ನಿಂತು ಯೋಚಿಸಿ, ಅದನ್ನು ಬಡಿದು ಕಸಾಯಿಖಾನೆಗೆ ತುಂಬಿಕೊಂಡು ಹೋಗುವ ಸ್ಥಿತಿ, ಜೀವಂತ ಕರುವಿನ ಚರ್ಮವನ್ನು ಸುಲಿಯುವುದನ್ನು ಗಮನಿಸಿ, ಅಂತಹ ಹಿಂಸೆಯನ್ನು ನಾವು ಒಪ್ಪಲಾಗದು. ಹಾಗಾಗಿ ನಾವು ಗೋವಿಗೆ ಹಿಂಸೆಯನ್ನು ನೀಡದೆ ಸಂರಕ್ಷಿಸೋಣ. ಗೋವಿನ ಮೂಲಕ ಒಟ್ಟಿಗೆ ಸಮಾಜವನ್ನು ಕಟ್ಟೋಣ ಎಂದು ಕರೆನೀಡಿದರು.
 
mata_chaturmasya113
 
ಬೆಂಗಳೂರು, ರಾಜರಾಜೇಶ್ವರಿನಗರ, ಉಪಾಸನಾ ಧ್ಯಾನಮಂದಿರದ ಸದ್ಗುರು ಚಂದನ್ ರಾಮ್‌ಜಿ ತಮ್ಮ ಸಂತ ಸಂದೇಶದಲ್ಲಿ, ಗೋವಿನ ಮಹತ್ವ ಆತ್ಮಕ್ಕಿಂತ ಮೀರಿದ್ದು, ರಮಣ ಮಹರ್ಷಿಗಳು ಜೀವನದಲ್ಲಿ ಕಣ್ಣೀರು ಹಾಕಿದ್ದು ಕೇವಲ ಒಮ್ಮೆ, ಅದು ಅವರ ಗೋಶಾಲೆಯ ಲಕ್ಷ್ಮಿ ಎಂಬ ಗೋವು ದೇಹಾಂತ್ಯವಾದಾಗ ಮಾತ್ರ. ಭಾರತದ ಸಂಸ್ಕೃತಿಯ ಹಾಗೂ ಆಧ್ಯಾತ್ಮಿಕ ರಾಯಭಾರಿ ಯಾವುದಾದರೂ ಆಗಬಹುದು ಅಂದರೆ ಅದು ಗೋವು. ರೈತ ಬೇರೆ ಅಲ್ಲ ಗೋವು ಬೇರೆ ಅಲ್ಲ, ಭಾರತ ಜಗದ್ಗುರುವಾಗಬೇಕಾದರೆ ಅದು ಗೋವು ಮತ್ತು ರೈತರಿಂದ ಮಾತ್ರ ಎಂದರು.
 
mata_chaturmasya114
 
ಹತ್ತು ಸಾವಿರ ಗೋಬರ್ ಗ್ಯಾಸ್ ಘಟಕಗಳನ್ನು ಸ್ಥಾಪಿಸಿ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ವಿ. ಕುಮಾರ್ ಗೌಡ ಹಾಗೂ ಹಳ್ಳಿಯಲ್ಲಿ ಪಾರಂಪರಿಕವಾಗಿ ಗೋ ಸೇವೆ ಮಾಡುತ್ತಿರುವ ಮಂಜುನಾಥ ಆರ್. ಭಟ್ಟ, ಹೆಬ್ಳೇಕೇರಿ ಇವರುಗಳಿಗೆ ಗೋ ಸೇವಾ ಪುರಸ್ಕಾರವನ್ನು ನೀಡಲಾಯಿತು.
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ “ಗೋ-ಸಂಪ್ರದಾಯಗೀತೆ” ಧ್ವನಿಮುದ್ರಿಕೆಯನ್ನು ಸದ್ಗುರು ಚಂದನ್ ರಾಮ್‌ಜಿ ಲೋಕಾರ್ಪಣೆ ಮಾಡಿದರು.
 
 
ಕಾರವಾರ, ಅಂಕೋಲಾ, ಕುಮಟಾ ಹಾಗೂ ಕೆಕ್ಕಾರು ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ರವೀಂದ್ರ ಭಟ್ ಸೂರಿ ಹಾಗೂ ರಮ್ಯಾ ಸುರೇಶ್ ಮಾಬ್ಲಡ್ಕ ನಿರೂಪಿಸಿದರು. ಅನಂತರ ಕೋರಿಕ್ಕಾರ್ ಸಹೋದರಿಯರಾದ ಪೂಜಾ ಮತ್ತು ಪ್ರಿಯಾಂಕ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
 
 
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಗುರುಚರಿತ್ರೆ ಪಾರಾಯಣ, ಮಹಾಮೃತ್ಯುಂಜಯ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
“ಒಮ್ಮೆ ಗೋವಿನ ಸ್ಥಾನದಲ್ಲಿ ನಿಂತು ಯೋಚಿಸಿ, ಅದನ್ನು ಬಡಿದು ಕಸಾಯಿಖಾನೆಗೆ ತುಂಬಿಕೊಂಡು ಹೋಗುವ ಸ್ಥಿತಿ, ಜೀವಂತ ಕರುವಿನ ಚರ್ಮವನ್ನು ಸುಲಿಯುವುದನ್ನು ಗಮನಿಸಿ, ಅಂತಹ ಹಿಂಸೆಯನ್ನು ನಾವು ಒಪ್ಪಲಾಗದು. ಹಾಗಾಗಿ ನಾವು ಗೋವಿಗೆ ಹಿಂಸೆಯನ್ನು ನೀಡದೆ ಸಂರಕ್ಷಿಸೋಣ”.
– ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರಮಠ
 
· ಡಾ. ವಿ. ಕುಮಾರ್ ಗೌಡ ಹಾಗೂ ಮಂಜುನಾಥ ಆರ್. ಭಟ್ಟ, ಹೆಬ್ಳೇಕೇರಿ ಇವರುಗಳಿಗೆ ಗೋ ಸೇವಾ ಪುರಸ್ಕಾರ ಪ್ರದಾನ
· ಶ್ರೀಭಾರತೀಪ್ರಕಾಶನದ “ಗೋ-ಸಂಪ್ರದಾಯಗೀತೆ” ಧ್ವನಿಮುದ್ರಿಕೆ ಲೋಕಾರ್ಪಣೆ
· ಉಪಾಸನಾ ಧ್ಯಾನಮಂದಿರದ ಸದ್ಗುರು ಚಂದನ್ ರಾಮ್‌ಜಿ ಉಪಸ್ಥಿತಿ
 
 
ಇಂದಿನ ಕಾರ್ಯಕ್ರಮ (11.08.2016):
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.30 :
ಗೋಸಂದೇಶ : ಮಹಾನಂದಿ – ಲಕ್ಷ್ಮೀತಾತಾಚಾರ್ಯ ಮೈಸೂರು
ಗೋಆಧಾರಿತ ಕೃಷಿ – ದೇವೇಂದ್ರಪ್ಪ ಹೊನ್ನಾಳಿ
ಲೋಕಾರ್ಪಣೆ : ರಾಜಾ ಕಾಲಸ್ಯ ಕಾರಣಮ್ – ಪುಸ್ತಕ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ :
ಭಾಜನರು – ಲಕ್ಷ್ಮೀತಾತಾಚಾರ್ಯ ಮೈಸೂರು ಮತ್ತು ದೇವೇಂದ್ರಪ್ಪ ಹೊನ್ನಾಳಿ
ಸಂತ ಸಂದೇಶ : ಮ.ನಿ.ಪ್ರ. ಶ್ರೀ ಶ್ರೀ ಹುಚ್ಚೇಶ್ವರ ಮಹಾಸ್ವಾಮೀಜಿ,
ಹುಚ್ಚೇಶ್ವರ ಸಂಸ್ಥಾನಮಠ, ಕಮತಗಿ, ಕೋಟೇಕಲ್, ಬಾಗಲಕೋಟೆ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಗಾಯನ – ದೀಪಿಕಾ ಭಟ್
ಹಾರ್ಮೋನಿಯಂ – ಪ್ರಜ್ಞಾನಲೀಲಾಶುಕ ಉಪಾಧ್ಯಾಯ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
ಸಂಜೆ: 5.00 : ಕಲಾರಾಮ – ಭಜನೆ : ಶ್ರೀಮಾತಾ ಹವ್ಯಕ ಭಜನಾ ಸಂಘ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

LEAVE A REPLY

Please enter your comment!
Please enter your name here