ಯಾತ್ರಾರ್ಥಿಗಳ ಲಗೇಜ್ ನಾಪತ್ತೆ

0
187

ಬೆಂಗಳೂರು ಪ್ರತಿನಿಧಿ ವರದಿ
ಶಿರಡಿಗೆ ಹೋಗಿದ್ದ ಯಾತ್ರಾರ್ಥಿಗಳ ಲಗೇಜ್ ನಾಪತ್ತೆಯಾಗಿದೆ. ಬಸ್ ನಲ್ಲಿದ್ದ 25ಕ್ಕೂ ಹೆಚ್ಚು ಯಾತ್ರಾರ್ಥಿಗಳು ಕಂಗಾಲಾಗಿದ್ದಾರೆ.
 
 
ಇದರಿಂದ ಯಾತ್ರಾರ್ಥಿಗಳು ಯಶವಂತಪುರ ಠಾಣೆಗೆ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. 50 ಮಂದಿ ಯಾತ್ರಾರ್ಥಿಗಳು ಸಿಬರ್ಡ್ ವೋಲ್ವೊ ಬಸ್ ಕೆಎ 01 ಎಬಿ 7425ರಲ್ಲಿ ತೆರಳಿದ್ದರು.
 
ಶಿರಡಿಯಿಂದ ನಿನ್ನೆ ಮಧ್ಯಾಹ್ನ 2 ಗಂಟೆಗೆ ನಿರ್ಗಮನವಾದ ಸೀಬರ್ಡ್ ಬಸ್ ಬೆಂಗಳೂರಿಗೆ ಇಂದು ಬೆಳಗ್ಗೆ 11 ಗಂಟೆಗೆ ತಲುಪಿತ್ತು. ಯಶವಂತಪುರದಲ್ಲಿ ಬಸ್ ನಲ್ಲಿದ್ದ ಓರ್ವ ಯಾತ್ರಿಕ ಇಳಿದಾಗ ನಾಪತ್ತೆಯಾದ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಯಾತ್ರಿಕರು ಕಂಗಾಲಾಗಿದ್ದಾರೆ. ಆನಂತರ ಬೇರೆ ಯಾತ್ರಿಕರೂ ಸಹ ಪರಿಶೀಲನೆ ನಡೆಸಿದ್ದಾರೆ.
 
 
50 ಯಾಂತ್ರಿಕರ ಪೈಕಿ 25ಕ್ಕೂ ಹೆಚ್ಚು ಯಾತ್ರಿಕರ ಲಗೇಜ್ ನಾಪತ್ತೆಯಾಗಿದೆ. ಇದರಿಂದ ಬಸ್ ನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಯಾತ್ರಿಕರು ಗರಂ ಆಗಿದ್ದಾರೆ.
 
 
ಯಾತ್ರಿಕರ ಪೈಕಿ ಯಾರದ್ದೋ ಕೈಚಳಕವೆಂದು ಕಂಗಾಲಾಗಿರುವ ಯಾತ್ರಿಕರಿಗೆ ಬಸ್ ಚಾಲಕ ಮಾಹಿತಿ ನೀಡಿದ್ದಾರೆ. ಬಸ್ ನಲ್ಲಿ ಎರಡು ದ್ವಿಚಕ್ರ ವಾಹನಗಳನ್ನು ಸಾಗಿಸಲಾಗುತ್ತಿತ್ತು. ಲಗೇಜ್ ಸ್ಪೇಸ್ ರೂಂನಲ್ಲಿ ನಿಯಮ ಉಲ್ಲಂಘಿಸಿ ಬುಲೆಟ್ ಹಾಗೂ ಹೋಂಡಾ ಆ್ಯಕ್ಟಿವಾ ವಾಹನಗಳನ್ನು ಸಾಗಾಟ ಮಾಡಲಾಗುತ್ತಿತ್ತು.

LEAVE A REPLY

Please enter your comment!
Please enter your name here