ಯಶ್-ರಾಧಿಕಾ ಮದುವೆ ಕ್ಷಣಗಣನೆ

0
298

ಬೆಂಗಳೂರು ಪ್ರತಿನಿಧಿ ವರದಿ
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ವಿವಾಹ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
 
 
 
ಈಗಾಗಲೇ ಯಶ್ ಅರಶಿಣ ಶಾಸ್ರ್ತ ಮುಗಿಸಿದ್ದಾರೆ. ದಿ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕಲ್ಯಾಣೋತ್ಸವ ನಡೆಯುತ್ತಿದೆ. ಸೋಮನಾಧೇಶ್ವರ ಸೆಟ್ ನಲ್ಲಿ ಮಾಂಗಲ್ಯ ಧಾರಣೆಯಾಗಲಿದೆ. ಒಕ್ಕಲಿಗ ಮತ್ತು ಕೊಂಕಣಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆಯಲಿದೆ. 11.30ರಿಂದ 12.30 ರ ಶುಭ ಮುಹೂರ್ತದಲ್ಲಿ ಯಶ್ ಮತ್ತು ರಾಧಿಕಾ ಸತಿ-ಪತಿ ಆಗಲಿದ್ದಾರೆ. ಗುರು ಹಿರಿಯರು ಮತ್ತು ಆಪ್ತರು ಹಾಗೇನೆ, ಸಿನಿರಂಗದ ಸಮ್ಮಖದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.
 
ಮದುವೆಯಲ್ಲಿ ಕುಟುಂಬಸ್ಥರು, ಬಂಧು-ಬಳಗ ಮತ್ತು ಕೆಲ ಆಪ್ತರು ಭಾಗಿಯಾಗಲಿದ್ಧಾರೆ. ಸೆಟ್ ಅಲಂಕಾರಕ್ಕಾಗಿ ಒಂದು ಸಾವಿರ ತಾವರೆಹೂ ಬಳಕೆ ಮಾಡಲಾಗಿದೆ. ಬಿಳಿ ಬಣ್ಣದ ಸೇವಂತಿಗೆ ಹೂವಿನ ಕಂಬಗಳು ಬಳಕೆ ಮಾಡಲಾಗಿದೆ.
 
 
ನಾಳೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಇಡೀ ಇಂಡಸ್ಟ್ರೀಗೆ ಆಹ್ವಾನ ಕೊಡಲಾಗಿದೆ. ಅಭಿಮಾನಿಗಳು ಮತ್ತು ಗೆಳೆಯರಿಗಾಗಿ ಡಿಸೆಂಬರ್-11 ರಂದು ತ್ರಿಪುರ ವಾಸಿನಿಯಲ್ಲಿಯೇ ಮತ್ತೊಮ್ಮೆ ರೆಸೆಪ್ಷನ್ ಮಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here