ಯಶ್-ರಾಧಿಕಾ ಇನ್ನು ಮಿಸ್ಟರ್&ಮಿಸಸ್

0
226

ಬೆಂಗಳೂರು ಪ್ರತಿನಿಧಿ ವರದಿ
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ವಿವಾಹ ಮಹೋತ್ಸವವು ಅದ್ಧೂರಿಯಾಗಿ ದಿ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಡೆದಿದೆ.
 
 
ಇಂದು ಮಧ್ಯಾಹ್ನ 11.30 ರಿಂದ 12.30 ವರೆಗೆ ಇದ್ದ ಶುಭ ಅಭಿಜಿತ್ ಲಗ್ನದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಹಸೆ ಮಣೆ ಏರಿದರು. 12.30ರ ಸುಮಾರಿಗೆ ರಾಧಿಕಾ ಪಂಡಿತ್ ರವರ ಕೊರಳಿಗೆ ಯಶ್ ಮಾಂಗಲ್ಯಧಾರಣೆ ಮಾಡಿದರು.
 
 
ಯಶ್ 10 ವರ್ಷಗಳಿಂದಲೂ ಆತ್ಮೀಯ ಗೆಳತಿ ಆಗಿರುವ ನಟಿ ರಾಧಿಕಾ ಪಂಡಿತ್ ರವರ ಕೈ ಹಿಡಿದಿದ್ದಾರೆ. ಸೋಮನಾಧೇಶ್ವರ ಸೆಟ್ ನಲ್ಲಿ ಮಾಂಗಲ್ಯ ಧಾರಣೆಯಾಗಿದೆ. ಒಕ್ಕಲಿಗ ಮತ್ತು ಕೊಂಕಣಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದೆ.
 
 
 
ವರ ಯಶ್ ಬಾಸಿಂಗ, ಸಿಂಗಾರದಲ್ಲಿ ಮಿಂಚುತ್ತಿದ್ದರು. ವಧುವಿನ ಅಲಂಕಾರದಲ್ಲಿ ರಾಧಿಕಾ ಪಂಡಿತ್ ಮಿಂಚುತ್ತಿದ್ದರು. ನಾಳೆ ಡಿಸೆಂಬರ್ 9 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ.

LEAVE A REPLY

Please enter your comment!
Please enter your name here