ಯದುವೀರ್ ಮದುವೆಗೆ ಅದ್ದೂರಿ ಸಿದ್ಧತೆ

0
319

 
ಮೈಸೂರು ಪ್ರತಿನಿಧಿ ವರದಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಅರಮನೆ ನಗರಿಯಲ್ಲಿ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರ ಮದುವೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
 
 
 
ರಾಜಸ್ಥಾನದ ಡುಂಗರಾಪುರ ರಾಜಮನೆತನದ ಮಹಾರಾಜ ಹರ್ಷವರ್ಧನ್ ಸಿಂಗ್ -ಮಹೇಶ್ರೀಕುಮಾರಿಯವರ ಸುಪುತ್ರಿ ತ್ರಿಷಿಕಾ ಕುಮಾರಿಯನ್ನು ರಾಜಕುಮಾರ ಯದುವೀರ್ ವರಿಸಲಿದ್ದಾರೆ.
 
 
 
ಮೈಸೂರಿನ ಅರಮನೆಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಆಹ್ವಾನಿತರಿಗೆ ರಾಜಮನೆತನದಿಂದ ವಸ್ತ್ರಸಂಹಿತೆ ಮಾಡಲಾಗಿದೆ. ಬಿಳಿ ಅಥವಾ ಕಪ್ಪು ಬಣ್ಣದ ಕೋಟು ನೀಡಲಾಗುತ್ತಿದೆ. ಪುರುಷರಿಗೆಬಿಳಿ ಅಥವಾ ಕಪ್ಪು ಬಣ್ಣದ ಪ್ಯಾಂಟು, ಶಲ್ಯ ಮತ್ತು ಪೇಟ ನೀಡಲಾಗುತ್ತದೆ. ಆಹ್ವಾನ ಪತ್ರಿಕೆಯಲ್ಲಿ ವಸ್ತ್ರಸಂಹಿತೆ ಬಗ್ಗೆ ಮಾಹಿತಿ ನೀಡಲಾಗಿದೆ. ಲಗ್ನಪತ್ರಿಕೆಯಲ್ಲಿ ಗಂಡಭೇರಯಂಡ ಮುದ್ರಣ ಮಾಡಲಾಗಿದೆ.
 
 
ಈಗಾಗಲೇ ಮಗನ ಮದುವೆಗೆ ಬನ್ನಿ ಎಂದು ರಾಜಮಾತೆ ಪ್ರಮೋದಾದೇವಿ ಅವರು ಗಣ್ಯರಿಗೆ, ಸ್ನೇಹಿತರಿಗೆ ಮದುವೆಯ ಆಹ್ವಾನಪತ್ರಿಕೆ ರವಾನೆಯಾಗಿದೆ. ಅರಮನೆ ಜಯರಾಮ ದ್ವಾರದಿಂದ ಆಹ್ವಾನಿತರಿಗೆ ಪ್ರವೇಶ ಕಲ್ಪಿಸಲಾಗಿದೆ.
 
 
 
ಜೂನ್ 28ರಂದು ಅರಮನೆ ದರ್ಬಾರ್ ಹಾಲ್ ನಲ್ಲಿ ಮದುಮಕ್ಕಳ ಅರತಕ್ಷತೆ ಸಮಾರಂಭ ನಡೆಯಲಿದೆ. ಅರಮನೆ ಅವರಣದಲ್ಲಿ ಆಹ್ವಾನಿತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಜೂನ್ 27ರಂದು ಯದುವೀರ ಒಡೆಯರ್ ಕಲ್ಯಾಣ ನಡೆಯಲಿದೆ. ಬೆಳಗ್ಗೆ 9.05 ರಿಂದ 9.35ರ ಶುಭ ಲಗ್ನದಲ್ಲಿ ವಿವಾಹ ಸಮಾರಂಭದಲ್ಲಿ ನಡೆಯಲಿದೆ. ಸಂಜೆ 7.30ಕ್ಕೆ ದರ್ಬಾರ್ ಹಾಲ್ ನಲ್ಲಿ ಉಯ್ಯಾಲೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
 
 
ಅರಮನೆ ಪ್ರವೇಶಕ್ಕೆ ನಿರ್ಬಂಧ
ಯದುವೀರ ಅವರ ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ನಾಗರಿಕರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ರಾಜಮಾತೆ ಪ್ರಮೋದಾದೇವಿ ಅವರು ಮೈಸೂರು ಜಿಲ್ಲಾಧಿಕಾರಿ ಸಿ ಸಿಖಾ ಅವರಿಗೆ ಮನವಿ ಮಾಡಿದ್ದಾರೆ.
ಆರ್ ಎಂಟು ದಿನ ಅಂದರೆ ಜೂನ್ 23ರಿಂದ 28ರವರೆಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸುವಂತೆ ಮನವಿ ಮಾಡಲಾಗಿದೆ. ಡಿಸಿ ಪ್ರಸ್ತಾವನೆ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಲಿದ್ದು, ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.

LEAVE A REPLY

Please enter your comment!
Please enter your name here