ಯದುವಂಶದಲ್ಲಿ ವಿವಾಹಕ್ಕೆ ಭರ್ಜರಿ ಸಿದ್ಧತೆ

0
194

 
ಮೈಸೂರು ಪ್ರತಿನಿಧಿ ವರದಿ
ಯದುವಂಶದಲ್ಲಿ ಮಹಾರಾಜನ ವಿವಾಹಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಾಹಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
 
 
 
ಇಂದು ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಲಗ್ನಕಟ್ಟುವ ಕಾರ್ಯ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜಪುರೋಹಿತರು, ರಾಜವಂಶದ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಗಣಪತಿ ಹೋಮ, ಮದುವೆ ಮುಹೂರ್ತ, ಜಾತಕ ವೀಕ್ಷಣೆ ಸೇರಿದಂತೆ ವಿವಿಧ ಶಾಸ್ತ್ರಗಳಿಗೆ ಭರದ ಸಿದ್ಧತೆ ನಡೆದಿದೆ. ಬಳಿಕ ಮದುವೆಯ ಲಗ್ನಪತ್ರಿಕೆ ಬರೆಸುವ ಕಾರ್ಯ ನಡೆಯಲಿದೆ. ಮೊದಲ ಲಗ್ನಪತ್ರಿಕೆ ಕುಲದೇವತೆ ಚಾಮುಂಡಿ ಸನ್ನಿಧಾನಕ್ಕೆ ನೀಡಲಿದ್ದಾರೆ. ನಂತರ ರಾಜಗುರು ಪರಕಾಲ ವಾಗೀಶ ಶ್ರೀಗಳಿಗೆ ಲಗ್ನಪತ್ರಿಕೆ ನೀಡಲಿದ್ದಾರೆ.
 
 
ಅಂಬಾವಿಲಾಸ ಅರಮನೆಯಲ್ಲಿ ಮೈಸೂರು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ರಾಜಸ್ಥಾನದ ರಾಜವಂಶದ ರಾಜಕುಮಾರಿ ತ್ರಿಷಿಕಾಕುಮಾರಿ ಸಿಂಗ್ ಅವರ ವಿವಾಹ ಜೂನ್ 24ರಿಂದ 28ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮೈಸೂರು ಅರಮನೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
ಈ ಹಿಂದೆ ಮೇ 8ಕ್ಕೆ ನಿಗದಿಯಾಗಿತ್ತು.

LEAVE A REPLY

Please enter your comment!
Please enter your name here