ಯಡ್ಡಿ ವಿರುದ್ಧ ತಿರುಗಿ ಬಿದ್ದರಾ ಸದಾನಂದ ಗೌಡ್ರು?

0
1639

ನವದೆಹಲಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ದೆಹಲಿಯಲ್ಲಿ ಲಿಂಗಾಯತ ಧರ್ಮ ಸಭಾ ರೂಪಿಸಿರುವ ಮೂರು ದಿನಗಳ ಸಮಾವೇಶವನ್ನ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಉದ್ಘಾಟಿಸಲಿದ್ದಾರೆ, ಸದಾನಂದ ಗೌಡರ ಈ ನಡೆ ರಾಜಕೀಯ ಪಾಳಯದಲ್ಲಿ ಹಲವಾರು ಪ್ರಶ್ನೆಗಳನ್ನ ಮೂಡಿಸಿರುವುದು ಖಚಿತ, ಇಷ್ಟು ದಿನ ಪ್ರತ್ಯೇಕ ಲಿಂಗಾಯತ ಧರ್ಮವನ್ನ ವಿರೋಧಿಸಿದ್ದ ಬಿ.ಜೆ.ಪಿ ಪಕ್ಷದವರೇ ಇದೀಗ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೇಡಿಕೆಯಿಡುವ ಸಭೆಯನ್ನ ಉದ್ಘಾಟನೆ ಮಾಡಲು ಮುಂದಾಗಿರುವುದು ತೀವ್ರ ಕುತೂಹಲ ಹಾಗೂ ವಿರೋಧಕ್ಕೆ ಕಾತಣವಾಗಿದೆ. ಮಾಜಿ ಸಿ.ಎಂ ಸದಾನಂದ ಗೌಡರು ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದಾರೆ ಎಂಬೆಲ್ಲ ಗಾಳಿಸುದ್ದಿ ಸದ್ಯ ಬಿ.ಜೆ.ಪಿ ಪಾಳಯದಲ್ಲಿ ಕೇಳಿಸಿಕೊಳ್ಳುತ್ತಿದೆ.

LEAVE A REPLY

Please enter your comment!
Please enter your name here