ಯಕ್ಷತೂಣೀರ ಸಂಪ್ರತಿಷ್ಥಾನ – ಶಾಲಾ ಮಕ್ಕಳಿಗಾಗಿ ಸ್ಪರ್ಧೆ

0
141

ವರದಿ: ಗೋವಿಂದ ಬಳ್ಳಮೂಲೆ
ಯಕ್ಷತೂಣೀರ ಸಂಪ್ರತಿಷ್ಥಾನ (ರಿ.) ಕೋಟೂರು ಕಾಸರಗೋಡು, ಇವರ ನೇತೃತ್ವದಲ್ಲಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಶಾಲಾ ಮಕ್ಕಳಿಗಾಗಿ ಜಾನಪದ ಹಾಡು, ಏಕಪಾತ್ರಾಭಿನಯ, ಆಶುಭಾಷಣ ಮೊದಲಾದ ವಿವಿಧ ಸ್ಪರ್ಧೆಗಳು ಜರಗಿದವು.
 
 
ಪೂರ್ವಾಹ್ನ ಜರಗಿದ ಸಭಾ ಕಾರ್ಯಕ್ರಮದಲ್ಲಿ ಗೋವಿಂದ ಬಳ್ಳಮೂಲೆ ಇವರು ಅಧ್ಯಕ್ಷಸ್ಥಾನ ವಹಿಸಿದರು. ನರಸಿಂಹ ಭಟ್ ಪಾತನಡ್ಕ್ಕ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸುಭಾಶಂಸನೆಯಿತ್ತರು. ಸೀತಾರಾಮ ಬಳ್ಳುಳ್ಳಾಯ ಇವರು ಕಾರ್ಯಕ್ರಮದ ಮುಖ್ಯಾಥಿತಿಗಳಾಗಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನಿತ್ತರು.
 
 
ಅನಂತಪದ್ಮನಾಭ ಮಯ್ಯ ಅವರು ದೀಪಜ್ವಲನಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಡ್ಕ ಕೃಷ್ಣ ಭಟ್ ಸ್ವಾಗತಿಸಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಧನ್ಯವಾದವಿತ್ತರು. ಡಾ. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. ನಾ ಕಾರಂತ ಪೆರಾಜೆ, ಪೂರ್ಣಿಮಾ ಗಣಪತಿ ಭಟ್, ರಾಮಚಂದ್ರ ಭಟ್ ಬಣ್ಪತ್ತಡ್ಕ ನಿರ್ಣಾಯಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here