ಯಕ್ಷಗಾನ ರಂಗದ ಪುಟಾಣಿ ಪ್ರತಿಭೆ ಅಭಿನವಿ ಹೊಳ್ಳ

0
478

 
ವರದಿ: ಸುದೇಶ್ ಜೈನ್ ಮಕ್ಕಿ ಮನೆ
ಕರಾವಳಿ ಪ್ರದೇಶದಲ್ಲಿ ಜನರ ಜೀವನದ ಒಂದು ಭಾಗವೇ ಯಕ್ಷಗಾನ .ಯಕ್ಷಗಾನವನ್ನು ಹೊರತು ಪಡಿಸಿದ ಈ ಭಾಗದ ಜನರನ್ನು ಊಹಿಸುವುದಕ್ಕೂ ಕಷ್ಟ.ಎಕೆಂದರೆ ಯಕ್ಷಗಾನವಂಬುವುದು ಜೀವನೋತ್ಸಾಹದ ಜಿಲುಮೆ.ಯಕ್ಷಗಾನ ಈ ರೀತಿಯಲ್ಲಿ ಜನಾಕರ್ಷಣೆ ಹೊಂದಲು ಹಲವು ಕಾರಣಗಳಿವೆ.ಇದು ಸರ್ವಂಗ ಸುಂದರವಾದ ಒಂದು ಪರಿಪೂರ್ಣ ಕಲಾಸ್ವರೂಪವಾಗಿದೆ.ಮತ್ತು ವೈವಿಧ್ಯಮಯವಾದ ಕಲೆಗಳ ಸಂಗಮ ಇದಾಗಿದೆ .ನಾನಾ ಬಗೆಯ ಅಭಿರುಚಿ ಯುಳ್ಳವರಿಗೆ ಒಂದಲ್ಲ ಒಂದು ಆಕರ್ಷಣೆ ಇದರೊಳಗಿದೆ .
 
mng_abhinav-holla1
ಹೀಗೆ ಯಕ್ಷಗಾನ ಕ್ಷೇತ್ರಕೆ ಎಳೆಯ ಪ್ರಾಯದಲ್ಲೇ ಆಕರ್ಷಿತರದವರು ಅಭಿನವಿ .ಹೊಳ್ಳ ಇವರು ಮಂಗಳೂರಿನ ಕುಡುಂಬೂರಿನ ನಿವಾಸಿ ದಿನಸಿ ವ್ಯಾಪಾರಿ ರವಿ ಹೊಳ್ಳ ,ಪಾವನ ಹೊಳ್ಳ ದಂಪತಿಯ ಪುತ್ರಿ .ಈಕೆ ಕುಳಾಯಿ ಅಂಕುರ್ ಪ್ರೈಮರಿ ಸ್ಕೂಲ್ ನಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
 
 
 
ಈ ಬಾಲೆ ತನ್ನ 5ನೇ ವಯಸ್ಸಿನಲ್ಲಿ ಯಕ್ಷಗಾನ ವನ್ನು ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಲ್ಲಿ ಕಲಿಯಲು ಪ್ರಾರಂಭಿಸಿದಳು .ಯಕ್ಷನಾಟ್ಯ ಕಲಿತ ಆರು ತಿಂಗಳಲ್ಲಿಯೇ ಸರಯೂ ಯಕ್ಷವೃಂದದ ದಶಮ ಸಂಭ್ರಮದಲ್ಲಿ ‘ಧಕ್ಷಾಧ್ವರ”ಪ್ರಸಂಗದಲ್ಲಿ ದೇವೇಂದ್ರ ಬಲ ‘ಅಗ್ನಿ’ಯಾಗಿ ಪ್ರಥಮ ಬಾರಿಗೆ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ರಂಗಯೇರಿದ ಅಭಿನವಿ ಅವತೆ ಎಲ್ಲರ ಪ್ರಶಂಸೆಗೆ ಪಾತ್ರರಾದಳು.ಅಂದಿನಿಂದ ಹಿಂತಿರುಗಿ ನೋಡಲೆ ಇಲ್ಲ ಅತಿ ಕಿರಿಯ ವಯಸ್ಸಿನಲ್ಲಿಯೇ ಹಲವಾರು ವೇದಿಕೆ ಏರಿ ಬಹುಮಾನಗಳನ್ನು ಪಡೆಯುತ್ತಲೇ ಬಂದಳು.
 
 
 
* ಪಣಂಬೂರು ಸಂಕ್ರಾತಿ ಉತ್ಸವ ದಲ್ಲಿ ಪೌರಾಣಿಕ ವೇಷ ಸ್ವರ್ಥೆಯಲ್ಲಿ 4 ಬಾರಿಯೂ ಪ್ರಥಮ ಬಹುಮಾನ .
*2013ರ ಪ್ರತಿಭಾ ಕಾರಂಜಿಯಲ್ಲಿ ಕಿರಿಯರ ವಿಭಾಗದ ಯಕ್ಷಗಾನ ವೇಷ ಸ್ವರ್ಧೆಯಲ್ಲಿ ವಲಯ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ
*2014 ರ ಪ್ರತಿಭಾ ಕಾರಂಜಿಯಲ್ಲಿ ವಲಯ ಮಟ್ಟ,ಕಟೀಲಿನಲ್ಲಿ ನಡೆದ ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ಆಳ್ವಾಸ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸ್ಥಾನ
*2015 ರ ಪ್ರತಿಭಾ ಕಾರಂಜಿಯಲ್ಲಿಯೂ ವಲಯ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ
2016 ರ ಪ್ರತಿಭಾ ಕಾರಂಜಿಯಲ್ಲಿಯೂ ಸಹಾ ವಲಯ ಮತ್ತು ತಾಲೂಕು ಮಟ್ಟಗಳಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.
*2014 ರಲ್ಲಿ ಕದ್ರಿ ಕಲ್ಕೂರ ಪ್ರತಿಷ್ಟಾನ ನಡೆಸುವ ‘ರಾಷ್ಟ್ರೀಯ ಮಕ್ಕಳ ಉತ್ಸವ ‘ಕೃಷ್ಣ ವೇಷ ಸ್ವರ್ಧೆಯಲ್ಲಿ ಪ್ರ ಸ್ಥಾನ ಹಾಗೂ ಇನ್ನು ಬೇರೆ ಬೇರೆ ಕಡೆ ಗಳಲಿ ನಡೆಯೂವ ಕೃಷ್ಣ ವೇಷ ಸ್ವರ್ಧೆಗಳಲ್ಲಿ ಹಲವಾರು ಬಾರಿ ಪ್ರಥಮ ಸ್ಥಾನ.
 
 
ಪುಟಾಣಿ ಅಭಿನವಿ ಮಾಡಿರುವ ಪಾತ್ರಗಳು:
ದೇವೇಂದ್ರ ಬಲ ಪಾತ್ರವನ್ನು 50 ಕ್ಕೂ ಮಿಕ್ಕಿಸಲ ವೂಡಿರುತ್ತಳೆ. ಸಖಿ,ಯಾಧವರು,ಸೇನಾನಿ, ನಳ-ನೀಲ , ಗಿರಿಜಾ ಕಲ್ಯಾಣದ ಷಣ್ಮುಖ, ಕಾಳಿಂಗ ಮರ್ದನದ ಕೃಷ್ಣ, ಕಟೀಲು ಐದನೇ ಮೇಳದಲ್ಲಿ ಪೂತನಿ ಸಂಹಾರದ ಕೃಷ್ಣ,ಗಿರಿಜಾ ಕಲ್ಯಾಣ ದ ಷಣ್ಮಖ, ಕುವೂರ ವಿಜಯದ ಷಣ್ಮಖ, ವೂನಿಷಾದ ಪ್ರಸಂಗದ ಬಾಲ ರೂಕ್ಷ, ಮಹಿಷಮರ್ಧಿನಿ ಪ್ರಸಂಗದ ಯಕ್ಷ, ಈಶ್ವರ,ದೇವಿ ಮಹಾತ್ಮೆಯಲ್ಲಿ ವಿಷ್ಣು, ಸಪ್ತವೂತೃಕೆ ,ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕದಿರೆಯ ದೈವ ಪಾತ್ರವನ್ನು ವೂಡಿರುತ್ತಾಳೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವೆಯಟದಲ್ಲಿ ಶ್ರೀ ಕ್ಷೇತ್ರದಲ್ಲಿಯೇ ನಾಲ್ಕು ಬಾರೀ ಗೆಜ್ಜೆಕಟ್ಟಿ ಪಾತ್ರ ನಿರ್ವಹಿಸಿರುತ್ತಾಳೆ. ಮತ್ತು ಶ್ರೀ ಕಟೀಲು ಮೇಳಗಳಲ್ಲಿ ವೃತಿಪರರ ಕಲಾವಿದರ ಜೊತೆ ಪಾತ್ರನಿರ್ವಹಿಸಿ ಹಿರಿಯ ಕಲಾವಿದರ ಬಾಯಿಯಿಂದ ‘ಭೇಷ್’ಎನಿಸಿಕೊಂಡಳು.ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ವತಿಯಿಂದ ಮೈಸೂರಿನ ಅರಮನೆ ಯಲ್ಲಿ ನಡೆದ ಸತ್ಯಹರಿಶ್ಚಂದ್ರ ಪ್ರಸಂಗದಲ್ಲಿ ಲೋಹಿತಾಶ್ವ ಪಾತ್ರ ಮಡಿರುತ್ತಾಳೆ.ಪ್ರಸ್ತುತ ಈ ಬಾಲೆ ಯಕ್ಷಗಾನ ವನ್ನು ಉರ್ವಸ್ಟೋರ್ . ಶಾರದಾ ಯಕ್ಷಗಾನ ಕೇಂದ್ರದಲ್ಲಿ ಕಲಿಯುತ್ತಿದ್ದಾಳೆ.ಮತ್ತು ಯಕ್ಷ ಗಾನದೊಂದಿಗೆ ಯೋಗ , ಭರತನಾಟ್ಯ,ಜಾನಪದನೃತ್ಯ,ಸಂಗೀತ ಕಲಿಯಲು ಶುರು ಮಾಡಿರುತ್ತಾಳೆ.
ಈ ಮಗು ಇದೇ ರೀತಿಯಲ್ಲಿ ಮಿಂಚಿ ಕರಾವಳಿ ಹೆಸರನ್ನು ರಾಜ್ಯ,ರಾಷ್ಟ್ರಮಟ್ಟ ದಲ್ಲಿ ಎತ್ತಿ ತೋರಿಸಲಿ ಎಂದು ಹಾರೈಸೊಣ..

LEAVE A REPLY

Please enter your comment!
Please enter your name here