ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ

0
108

 
ವರದಿ: ಗೋವಿಂದ ಬಿಜಿ
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಿರೆ ಗೌರವಾರ್ಪಣೆ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಸಂಪನ್ನಗೊಂಡಿತು.
 
 
 
ಗೋವಿಂದ ಬಳ್ಳಮೂಲೆ ಉಪಾದ್ಯಕ್ಷರು,ಶ್ರೀಕ್ಷೇತ್ರ ಸೇವಾ ಸಮಿತಿ ಅವರು ಕಾರ್ಯಕ್ರಮಕ್ಕೆ ಪ್ರಾರ್ಥನೆ ಹಾಡಿ ಸ್ವಾಗತವನ್ನಿತ್ತರು. ಏನ್ ಸುಬ್ರಾಯ ಬಳ್ಳುಳ್ಳಾಯ ಪಾರಂಪರ್ಯ ಆಡಳಿತ ಮೊಕ್ತೆಸರರು ಕಾರ್ಯಕ್ರಮದ ಅಧ್ಯಕ್ಷಸ್ಥಾನವಹಿಸಿ ಶುಭಹಾರೈಸಿದರು. ಶ್ರೀಕ್ಷೇತ್ರ ಅರ್ಚಕರಾದ ಅನಂತ ಪದ್ಮನಾಭ ಮಯ್ಯ ಅವರು ಕಾರ್ಯಕ್ರಮವನ್ನು ದೀಪ ಜ್ವಲನ ಮಾಡಿ ಉದ್ಘಾಟಿಸಿದರು.
 
 
 
ಜಯರಾಮ ಮುಂಜತ್ತಾಯ ಎಡನೀರು, ಅಧ್ಯಕ್ಷರು, ಪಾರ್ಥಿಸುಬ್ಬ ಯಕ್ಷಗಾನ ಕಲಾಕ್ಷೇತ್ರ, ಕೇರಳ ಸರಕಾರ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭಾಶಮ್ಸನೆಯಿತ್ತರು. ಸಮಾರಂಭದಲ್ಲಿ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ಜಬ್ಬರ್ ಸಮೋ, ಸುನ್ನಂಬಳ ವಿಶ್ವೇಶ್ವರ ಭಟ್, ರಾಮ ಜೋಯಿಶ ಬೆಳ್ಲಾರೆ , ಅಡೂರು ಗಣೇಶ್ ರಾವ್, ಅಡೂರು ಲಕ್ಷ್ಮೀನಾರಾಯಣ ರಾವ್ , ಇವರನ್ನು ಹೂ ಗೊಚ್ಚ ನೀಡಿ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು.
 
 
ಕಾರ್ಯಕ್ರಮಕ್ಕೆ ಗಣೇಶ ಮಜಕ್ಕಾರು, ಮೆಂಬರ್ ಮುಲಿಯಾರು ಗ್ರಾಮ ಪಂಚಾಯತ್, ಅಡ್ಕ ಗೋಪಾಲಕೃಷ್ಣ ಭಟ್, ಮಾಜಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಕೆ ಪಿ ಕುಮಾರನ ನಾಯರ್ , ವೇಣುಗೋಪಾಲ ತತ್ವಮಸಿ ಇವರು ಸಮಾರಂಭದಲ್ಲಿ ಶುಭಾಶಂಸನಾ ನುಡಿಗಳನ್ನಾಡಿದರು. ಪೆರಡಂಜಿ ಗೋಪಾಲಕೃಷ್ಣ ಭಟ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕುಂಜಿರಾಮನ್ ಅವರು ಧನ್ಯವಾದವಿತ್ತರು. ಸೀತಾರಾಮ ಬಳ್ಳುಳ್ಳಾಯ ಅವರು ಸಮಾರಂಭ ಸಂಯೋಜನೆ ಮಾಡಿದರು. ಬಳಿಕ ಸುಪ್ರಸಿದ್ಧ ಕಲಾವಿದರಿಂದ ” ಶ್ರೀಕೃಷ್ಣ ಸಂಧಾನ ” ಯಕ್ಷಗಾನ ತಾಳಮದ್ದಳೆ ಜರಗಿತು.

LEAVE A REPLY

Please enter your comment!
Please enter your name here