ಮೌಲ್ಯಯುತ ಜೀವನಕ್ಕೆ ಸಾಹಿತ್ಯ ಅತ್ಯಗತ್ಯ

0
425

 
ಸಾಹಿತ್ಯವು ಒಂದುಕಲೆ. ಕಲೆಯು ಕಲಾವಿದನಿಗಾಗಿ ಇರುವಂಥದ್ದು. ಸಾಹಿತ್ಯದಿಂದ ತೃಪ್ತಿ ಹಾಗೂ ಆನಂದವು ಸಿಗುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಸರಸ್ವತೀ ಹೇಳಿದರು.
 
 
ಎಸ್.ಡಿ.ಎಂ ಪದವಿ ಕಾಲೇಜಿನ ಬಿಎಡ್ ಸಭಾಂಗಣದಲ್ಲಿ ಶನಿವಾರ ನಡೆದ ಆಂಗ್ಲ ಸಾಹಿತ್ಯ ಸಂಘವನ್ನು ಉದ್ಘಾಟಿಸಿದ ಅವರು ’ರಿಲವೆನ್ಸ್ಅಫ್ಇಂಗ್ಲೀಷ್ಲಿಟ್ರೇಚರ್” ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
 
 
 
ಸಾಹಿತ್ಯದ ತಿಳುವಳಿಕೆಯುಳ್ಳವರು ಮಾನವೀಯ ಮೌಲ್ಯಗಳನ್ನು ಚೆನ್ನಾಗಿ ಅರಿತುಕೊಂಡು ಉತ್ತಮ ಜೀವನವನ್ನು ನಡೆಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷೀಯ ಭಾಷಣ ಮಾಡಿದ ಆಂಗ್ಲಭಾಷಾ ಮುಖ್ಯಸ್ಥ ಶಂಕರನಾರಾಯಣ್ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಸಾಹಿತ್ಯ ಸಂಘದ ಎಲ್ಲಾ ಸದಸ್ಯರು ಆಸಕ್ತಿ ವಹಿಸಿ ಮುಂದೆ ಕಾಲೇಜಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಸಫಲಗೊಳಿಸಬೇಕೆಂದು ಕೇಳಿಕೊಂಡರು.
 
 
ಅಂತಿಮ ವರ್ಷದ ವಿದ್ಯಾರ್ಥಿನಿ ವೈಷ್ಣವಿ ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಸುವರ್ಚಲಾ ನಿರೂಪಿಸಿದರು. ರೋಹಿತ್ ಸ್ವಾಗತಿಸಿದರು. ಲಾವಣ್ಯ ವಂದಿಸಿದರು. ಆಂಗ್ಲಭಾಷಾ ವಿಭಾಗದ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಚಿತ್ರ: ಪ್ರಜ್ಞಾ ಹೆಬ್ಬಾರ್

LEAVE A REPLY

Please enter your comment!
Please enter your name here