ಬೆಂಗಳೂರು ಪ್ರತಿನಿಧಿ ವರದಿ
ಕೊನೆಗೂ ದ್ವಿತೀಯ ಪಿಯು ಪರೀಕ್ಷೆ ಮೌಲ್ಯಮಾಪನ ಶುರುವಾಗಲಿದೆ. ಖಾಸಗಿ ಉಪನ್ಯಾಸಕರಿಂದಲೇ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ ಎಂದು ಪಿಯು ಬೋರ್ಡ್ ನಿರ್ದೇಶಕ ಡಾ.ರಾಮೇಗೌಡ ಪರ್ಯಾಯ ವ್ಯವಸ್ಥೆ ಬಗ್ಗೆ ತಿಳಿಸಿದ್ದಾರೆ.
ಖಾಸಗಿ ಉಪನ್ಯಾಸಕರೆಲ್ಲಾ ಮೌಲ್ಯಮಾಪನಕ್ಕೆ ಸಿದ್ಧರಾಗಿದ್ದಾರೆ. ಕೋಡಿಂಗ್ ಪ್ರಕ್ರಿಯೆಗೆ ಡಿಸಿಇಆರ್ ಟಿ, ಪಿಯು ಬೋರ್ಡ್ ಸಿಬ್ಬಂದಿಯನ್ನು ಬಳಕೆ ಮಾಡಲಾಗಿದೆ.
ತಲಾ 10 ಮಂದಿಯ ತಂಡಗಳನ್ನು ಸಿದ್ಧಮಾಡಿದ್ದೇವೆ. ಕೋಡಿಂಗ್ ಬಗ್ಗೆ ಎಲ್ಲಾ ಸಿಬ್ಬಂದಿಗೂ ತರಬೇತಿ ನೀಡಿದ್ದೇವೆ. ಕೋಡಿಂಗ್ ಬಗ್ಗೆಯೂ ತರಬೇತಿಗೆ ಮೌಲ್ಯಮಾಪಕರು ಸಿದ್ಧರಾಗಿದ್ದಾರೆ. ಒಟ್ಟು 7000 ಮೌಲ್ಯಮಾಪಕರು ತರಬೇತಿಗೆ ಸಿದ್ಧರಾಗಿದ್ದಾರೆ. ಕೋಡಿಂಗ್ ಮುಗಿದ ತಕ್ಷಣವೇ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಪಿಯು ಬೋರ್ಡ್ ಸಿಬ್ಬಂದಿಗೂ ಮೌಲ್ಯಮಾಪನ ಅನುಭವವಿದ್ದು, ಸಿಬ್ಬಂದಿಯನ್ನು ಬಳಸಿಕೊಂಡೇ ಮೌಲ್ಯಮಾಪನ ಆರಂಭವಾಗಲಿದೆ. ನಿಗದಿತ ಅವಧಿಯೊಳಗೆ ಫಲಿತಾಂಶ ನೀಡುವ ವಿಶ್ವಾಸವಿದೆ ಎಂದು ಬೋರ್ಡ್ ನಿರ್ದೇಶಕರು ತಿಳಿಸಿದ್ದಾರೆ.