ಮೋರ್ ಮಳಿಗೆಗಳ ಮೇಲೆ ದಾಳಿ

0
228

 
ಬೆಂಗಳೂರು ಪ್ರತಿನಿಧಿ ವರದಿ
ಇಂದು ಬೆಂಗಳೂರಿನಾದ್ಯಂತ ‘ಮೋರ್’ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಆಹಾರ-ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ನಿರ್ದೇಶನ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
 
 
 
ಮೋರ್ ನಲ್ಲಿ ತೊಗರಿಬೇಳೆಗೆ ದುಪ್ಪಟ್ಟು ಬೆಲೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ದುಪ್ಪಟ್ಟು ಬೆಲೆಯಲ್ಲಿ ಮಾರುತ್ತಿದ್ದದ್ದು ಬೆಳಕಿಗೆ ಬಂದಿದೆ.
 
ಮಾರುಕಟ್ಟೆಯಲ್ಲಿ ಫಸ್ಟ್ ಗ್ರೇಡ್ ತೊಗರಿಬೇಳೆ ಬೆಲೆ 145 ರೂ.ಇದೆ. ಸೆಕೆಂಡ್ ಗ್ರೇಡ್ ತೊಗರಿಬೇಳೆ ಬೆಲೆ 135 ರೂ. ಇದೆ. ಆದರೆ ಮೋರ್ ನಲ್ಲಿ 1 ಕೆಜಿ ತೊಗರಿಬೇಳೆ ಬೆಲೆ 290 ರೂ. ಆಗಿದ್ದು, ರಿಯಾಯಿತಿ ಎಂದು ಹೇಳಿ 180 ರೂ.ಗೆ ಮಾರುತ್ತಿದ್ದರು.
 
 
ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯಿಂದ ಮೋರ್ ಮಳಿಗೆಗಳಿಗೆ ನೋಟಿಸ್ ಜಾರಿಯಾಗಿದೆ.

LEAVE A REPLY

Please enter your comment!
Please enter your name here