ಮೋದಿ ಸರಕಾರದ ಜನಪರ ಬಜೆಟ್

0
691

2017-18ನೇ ಸಾಲಿನ ಕೇಂದ್ರ ಬಜೆಟ್
ನವದೆಹಲಿ ಪ್ರತಿನಿಧಿ ವರದಿ
ಲೋಕಸಭೆ ಕಲಾಪ ಆರಂಭವಾಗಿದೆ. 2017-18ನೇ ಸಾಲಿನ ಬಜೆಟ್ ಶುರುವಾಗಿದೆ. ಸಂಸತ್ ನಲ್ಲಿಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಓದಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ನಾಲ್ಕನೇ ಬಜೆಟ್ ಮಂಡಿಸುತ್ತಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಫೆಬ್ರವರಿಯಲ್ಲಿ ಬಜೆಟ್ ಮಂಡನೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಸಾಮಾನ್ಯ ಬಜೆಟ್ ನಲ್ಲಿ ರೇಲ್ವೆ ಬಜೆಟ್ ವಿಲೀನವಾಗಿದೆ.
 
2017-18ನೇ ಸಾಲಿನ ಕೇಂದ್ರ ಬಜೆಟ್ ಪ್ರಮುಖ ಅಂಶಗಳು:

 • ನಮ್ಮ ಅವಧಿಯಲ್ಲಿ ಎರಡಂಕಿಯ ಹಣದುಬ್ಬರ ನಿಯಂತ್ರಣ
 • ಸಾರ್ವಜನಿಕ ಹಣವನ್ನು ಸದುಪಯೋಗಪಡಿಸಲು ಕ್ರಮ
 • ಉದ್ಯೋಗ ಕ್ಷೇತ್ರದಲ್ಲಿ ಯುವಶಕ್ತಿ ಬಲವರ್ಧನೆಗೆ ಕ್ರಮ
 •  ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿಯಲ್ಲಿದೆ ಭಾರತ
 •   ಆರ್ಥಿಕವಾಗಿ ಅತೀ ವೇಗವಾಗಿ ಭಾರತ ಬೆಳೆಯುತ್ತಿದೆ ಎಂದು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
 • ನೋಟು ಅಮಾನ್ಯೀಕರಣ ನಡೆಯ ಬಗ್ಗೆ ಜೇಟ್ಲಿ ಉಲ್ಲೇಖ ಮಾಡಿದ್ದಾರೆ. ನೋಟ್ ಬ್ಯಾನ್ ನಂತರ ಅರ್ಥವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯಾಗಿದೆ. ಇದರಿಂದ ಭಾರತದ ಅರ್ಥವ್ಯವಸ್ಥೆಗೆ ಸಹಕಾರಿಯಾಗಿದೆ.
 • ಅಮಾನ್ಯೀಕರಣ ಲಾಭವನ್ನು ಬಡ ಜನತೆಗೆ ವರ್ಗಾವಣೆಗೆ ನಿರ್ಧಾರ
 • ನೋಟ್ ಬ್ಯಾನ್ ನಿರ್ಧಾರದಿಂದ ಬ್ಯಾಂಕ್ ಸಾಲ ಕಡಿಮೆಯಾಗಿದೆ.
  ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಭಾರತ ಹೊಸ ಅಶಾಕಿರಣವಾಗಿದೆ.
 • ವಿದೇಶಿ ಹೂಡಿಕೆಯ ಪ್ರಮಾಣವೂ ಸಹಾ ಹೆಚ್ಚಳವಾಗಿದೆ. ವಿದೇಶಿ ವಿನಿಮಯ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ.
 • 2017-18ನೇ ಸಾಲಿನ ಬಜೆಟ್ ನಲ್ಲಿ 3 ಪ್ರಮುಖ ಸುಧಾರಣೆಯಾಗಿದೆ:
 • ಫೆಬ್ರವರಿ ತಿಂಗಳಿನ ಮೊದಲನೇ ದಿನವೇ ಮಂಡನೆಯಾಗಿದೆ, ಸಾಮಾನ್ಯ ಬಜೆಟ್ ನಲ್ಲೇ ರೇಲ್ವೆ ಬಜೆಟ್ ವಿಲೀನ ನಿರ್ಧಾರವಾಗಿದೆ. ನೋಟ್ ಬ್ಯಾನ್ ನ ಲಾಭ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಸಿಗಲಿದೆ. ಎಫ್ ಡಿಎ ನೀತಿಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
 • 2017ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ 10 ಪ್ರಮುಖ ಗುರಿಗಳಿವೆ:
  ರೈತರ ಪ್ರಗತಿ, ಬಡವರ ಅಭ್ಯುದಯ , ಹಳ್ಳಿಗಳ ಅಭಿವೃದ್ಧಿ, ಯುವಶಕ್ತಿ ಬಲವರ್ಧನೆ, ಮೂಲಸೌಕರ್ಯಕ್ಕೆ ಪ್ರಾಧಾನ್ಯತೆ, ಡಿಜಿಟಲ್ ಇಂಡಿಯಾ, ಸಾರ್ವಜನಿಕ ಸೇವೆಗಳು, ಹಣಕಾಸು ಕ್ಷೇತ್ರದ ಪ್ರಗತಿ, ತೆರಿಗೆ ಸುಧಾರಣೆಯ ದುಂದು ವೆಚ್ಚಕ್ಕೆ ಕಡಿವಾಣ ಸೇರಿ 10 ವಿಚಾರದ ಬಗ್ಗೆ ಗಮನ ನೀಡಿದೆ.
 • ಬಜೆಟ್ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಗುರಿ
 • ಪ್ರಮಾಣಿಕವಾಗಿ ತೆರಿಗೆ ಸುಧಾರಣೆಗೊಳಿಸಲು ಸರ್ಕಾರ ಕ್ರಮ
 • ಪ್ರಸಕ್ತ ವರ್ಷ ರೈತರಿಗೆ 10 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯದ ಗುರಿ
 • ಕೋಆಪರೇಟಿವ್ ಬ್ಯಾಂಕ್ ಗಳಲ್ಲಿ 50 ದಿನದ ಬಗ್ಗೆ ಮನ್ನಾ
 • 2019ರೊಳಗೆ 50 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಬಡತನ ನಿರ್ಮೂಲನೆ
 • ಗ್ರಾಮೀಣ ರಸ್ತೆ ಅಭಿವೃದ್ಧಿಗೆ 27 ಸಾವಿರ ಕೋಟಿ ವಿನಿಯೋಗ
 • 2018ರ ವೇಳೆಗೆ ಹಳ್ಳಿಹಳ್ಳಿಗಳಿಗೂ ವಿದ್ಯುತ್ ಯೋಜನೆ ಗುರಿ
 • ಗ್ರಾಮೀಣ ಪ್ರದೇಶದಲ್ಲಿ 1 ಕೋಟಿ ಮನೆ ನಿರ್ಮಾಣದ ಗುರಿ
 • ಗ್ರಾಮೀಣ ಭಾಗದಲ್ಲಿ ಸಂಶೋಧನಾ ಪ್ರತಿಭೆಗಳಿಗೆ ಅವಕಾಶ
 • ಹಳ್ಳಿಗಳಲ್ಲಿ 10 ಲಕ್ಷ ಕೆರೆಗಳ ನಿರ್ಮಾಣ ಯೋಜನೆ
 • ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಯೋಜನೆ
 • ಗ್ರಾಮೀಣಾಭಿವೃದ್ಧಿಗೆ ಒಟ್ಟು 1 ಲಕ್ಷ 87 ಸಾವಿರ 223 ಕೋಟಿ ರೂ. ನಿಗದಿ
 • ರಾಷ್ಟ್ರೀಯ ಗುಣಮಟ್ಟ ಅಕಾಡೆಮಿ ಸ್ಥಾಪನೆ ಯೋಜನೆ
 • ಅನ್ ಲೈನ್ ಶಿಕ್ಷಣಕ್ಕೆ ಒತ್ತು, 350 ಹೊಸ ಕೋರ್ಸ್ ಗಳು ಆರಂಭ
 • ಮಣ್ಣಿನ ಗುಣಮಟ್ಟ ಪರೀಕ್ಷಾ ಕೇಂದ್ರಗಳ ಸ್ಥಾಪನೆ
 • ಪ್ರಧಾನಮಂತ್ರಿ ಅವಾಸ್ ಯೋಜನೆಗೆ 28 ಸಾವಿರ ಕೋಟಿ ರೂ. ಮೀಸಲು
 • ಶಾಲೆಗಳಲ್ಲಿ ಕಲಿಕೆಗೆ ಹೊಸ ಸುಧಾರಿತ ವ್ಯವಸ್ಥೆ
 • ಹೆಚ್ಚು ಕಾಲೇಜುಗಳಿಗೆ ಸ್ವಾಯುತ್ತತೆ ನೀಡಲು ನಿರ್ಧಾರ
 • 5 ಸಾವಿರ ಸ್ನಾತಕೋತ್ತರ ವೃದ್ಯಕೀಯ ಸೀಟುಗಳ ಹೆಚ್ಚಳ
 • 2025ರವರೆಗೆ ಟಿಬಿ ಮುಕ್ತ ನಿರ್ಮಾಣ
 • ರೇಲ್ವೆ ಸುರಕ್ಷತೆಗಾಗಿ 1 ಲಕ್ಷ ಕೋಟಿ ರೂ ಫಂಡ್
 • 600 ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ
 • ಟೆಕ್ಸ್ ಟೈಲ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಗೆ ಯೋಜನೆಗಳು
 • ಜವಳಿಯಂತೆ ಚರ್ಮೋದ್ಯಮ ವಲಯದಲ್ಲೂ ಉದ್ಯೋಗ ಸೃಷ್ಠಿಗೆ ಒತ್ತು
 • ಸಿಬಿಎಸ್ ಸಿ ಪ್ರವೇಶ ಪರೀಕ್ಷೆ ಕ್ಯಾನ್ಸಲ್
 • ಗ್ರಾಮೀಣ ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಒತ್ತು
 • ದೀನದ ದಯಾಳ್ ಉಪಾಧ್ಯಾಯ ಯೋಜನೆಯಡಿ 418 ಕೋಟಿ ಮಂಜೂರು
 • ಹಿರಿಯ ನಾಗರಿಕೆಇಗೆ ಆರೋಗ್ಯ ಕಾರ್ಡ್ ಗಳ ವಿತರಣೆ-ಆಧಾರ್ ಯೋಜನೆ ಆಧಾರದಲ್ಲಿ ಆರೋಗ್ಯ ಕಾರ್ಡ್ ಗಳು-ಹಿರಿಯ ನಾಗರಿಕರಿಗೆ ವಿಶೇಷ ಎಲ್ ಐಸಿ ಪಾಲಿಸಿ
 • ಜಾರ್ಖಂಡ್, ಗುಜರಾತ್ ನಲ್ಲಿ ಏಮ್ಸ್ ಸ್ಥಾಪನೆ
 • 1.50 ಲಕ್ಷ ಉಪ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಕೆ
 • 1 ಕೋಟಿ ಕುಟುಂಬಗಳಿಗೆ ಅಂತ್ಯೋದಯ ಯೋಜನೆ, 2018ರೊಳಗೆ ಶೇ.100ರಷ್ಟು ವಿದ್ಯುತ್ ಪೂರೈಕೆ
 • ಪರಿಶಿಷ್ಟ ಜಾತಿಗೆ ಶೇ.35ರಷ್ಟು ಹೆಚ್ಚಿನ ಬಜೆಟ್
 • ಎಲ್ಲಾ ಪ್ರವೇಶ ಪರೀಕ್ಷಗಳಿಗೆ ಒಂದೇ ಒಂದು ಪ್ರಾಧಿಕಾರ
 • ದೇಶದ 5 ಕಡೆ ಪ್ರವಾಸೋದ್ಯಮ ವಲಯ ಸ್ಥಾಪನೆ
 • ಬಂಡವಾಳ ಹೂಡಿಕೆ, ಸುರಕ್ಷತೆಗೆ ಒತ್ತು
 • ಎಫ್ ಡಿಎ ಖಾತೆ ನೀತಿ ಸರಳೀಕರಣ
 • ಪ್ರತಿ ಗರ್ಭಿಣಿಯರಿಗೆ 6 ಸಾವಿರ ರೂಪಾಯಿ ಅನುದಾನ-ನೇರವಾಗಿ ಗರ್ಭಿಣಿಯರ ಖಾತೆಗೆ ಹಣ ಜಮಾವಣೆಯಾಗುತ್ತದೆ.
 • ಅಕ್ರಮ ಹೂಡಿಕೆ ನಿಗ್ರಹಕ್ಕೆ ವಿಧೇಯಕ ಜಾರಿ
 • ಅಕ್ರಮ ಚಿಟ್ ಫಂಡ್ ಗಳಿಗೆ ಕಡಿವಾಣ ಹಾಕಲು ದಿಟ್ಟ ಕ್ರಮ
 • ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲೂ ಡಿಜಿಟಲ್ ಪಾವತಿ ಕಡ್ಡಾಯ-ಸರ್ಕಾರಿ ಇಲಾಖೆ ಸಂಪೂರ್ಣ ಡಿಜಿಟಲ್
 • ಡಿಜಿಟಲ್ ಕ್ರಾಂತಿ 10 ಲಕ್ಷ ಪಿಓಎಸ್ ಗಳ ಸ್ಥಾಪನೆ
 • ಗ್ರಾಮೀಣ ಪ್ರದೇಶಗಳಲ್ಲಿ ಪಿಓಎಸ್ ಗಳ ಸ್ಥಾಪನೆ
 • ಭೀಮಾ ಆ್ಯಪ್ ಬಳಕೆದಾರರಿಗೆ ಬೋನಸ್ ಘೋಷಣೆ
 • 1 ಕೋಟಿ 50 ಲಕ್ಷ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಯೋಜನೆ
 • ಸಾಲ ಮಾಡಿ ಓಡಿ ಹೋದವರ ಆಸ್ತಿ ಸಂಪೂರ್ಣ ಜಪ್ತಿ- ಉದ್ಯಮಿ ವಿಜಯ್ ಮಲ್ಯ ಪರಾರಿ ಹಿನ್ನೆಲೆಯಲ್ಲಿ ಬಜೆಟ್ ನಲ್ಲಿ ಶಾಕ್
 • ಆರ್ಥಿಕ ಅಪರಾಧಗಳ ದಂಡನೆಗೆ ಹೊಸ ಕಾನೂನು ಜಾರಿ
 • ನೋಟ್ ಬ್ಯಾನ್ ನಂತರ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಆದರೆ ಈಗ ತೆರಿಗೆ ಸಂಗ್ರಹ ಭಾರಿ ಪ್ರಮಾಣದಲ್ಲಿ ಕಡಿಮೆಯಿದೆ.
 • 1.7 ಕೋಟಿ ವೇತನದಾರರಿಗೆ ಮಾತ್ರ ತೆರಿಗೆ ಸಲ್ಲಿಕೆಯಾಗಿದೆ.
 • ಮುಖ್ಯ ಅಂಚೆಕಚೇರಿಗಳಲ್ಲಿ ಪಾಸ್ ಪೋರ್ಟ್ ಸೌಲಭ್ಯ
 • ಪೇಮೆಂಟ್ ನಿಯಂತ್ರಣ ಮಂಡಳಿ ಸ್ಥಾಪನೆ
 • ರಕ್ಷಣಾ ವಲಯಕ್ಕೆ 2,37,814 ಕೋಟಿ ಮೀಸಲು
 • ಐಆರ್ ಸಿಟಿಸಿ ಸೇರಿದಂತೆ ಹಲವು ಸಾರ್ವಜಜಿಕ ಉದ್ದಿಮೆಗಳು ಷೇರುಮಾರುಕಟ್ಟೆಗೆ
 • ಡಿಜಿಟಲ್ ವ್ಯವಹಾರ ಹೆಚ್ಚಿಸಲು ಭೀಮ್ ಆ್ಯಪ್ ಯೋಜನೆಯಡಿ ಎರಡು ಹೊಸ ಸ್ಕೀಂ- ಕ್ರೆಡುಟ್ ಕಾರ್ಟ್, ಡೆಬಿಟ್ ಕಾರ್ಡ್ ಇಲ್ಲದವರಿಗೆ ಆಧಾರ್ ಕಾರ್ಡ್ ಮೂಲಕ ವ್ಯವಹಾರ
 • 2020ರೊಳಗೆ 20ಲಕ್ಷ ಆಧಾರ್ ಕಾರ್ಡ್ ಆಧಾರಿಯ ಸ್ವೈಪ್ ಮಷಿನ್
 • 2016-17ನೇ ಸಾಲಿನಲ್ಲಿ ಆದಾಯ ತೆರಿಗೆ ಘೋಷಿತರ ವಿವರ:
 • 2.5 ಲಕ್ಷಕ್ಕಿಂತ ಕಡಿಮೆ ಆದಾಯ-99 ಲಕ್ಷ ಜನ ಘೋಷಣೆ
 • 50 ಲಕ್ಷಕ್ಕಿಂತ ಹೆಚ್ಚು ಆದಾಯ-1.8 ಲಕ್ಷ ಜನ ಘೋಷಣೆ
 • ದೇಶದಲ್ಲಿ ಒಟ್ಟು 13.97 ಲಕ್ಷ ನೋಂದಾಯಿತ ಕಂಪನಿಗಳಿದ್ದು, ಅದರಲ್ಲಿ 5.97 ಕಂಪನಿಗಳು ಮಾತ್ರ ತೆರಿಗೆ ಹಣ ಪಾವತಿ ಮಾಡಿದೆ.
 • ಹೊಸ ರಾಜ್ಯ ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ ಲಭ್ಯವಾಗಿದೆ:
 • ಆಂಧ್ರಪ್ರದೇಶಕ್ಕೆ ತೆರಿಗೆ ವಿನಾಯಿತಿ ಘೋಷಣೆ
 • ರಾಜಧಾನಿ ಅಮರಾವತಿ ಅಭಿವೃದ್ಧಿಗೆ ಅನುದಾನ ಘೋಷಣೆಯಾಗಿದೆ-ಅಮರಾವತಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ
 • ಅಮರಾವತಿ 3 ವರ್ಷದವರೆಗೆ ತೆರಿಗೆ ರಿಯಾಯಿತಿ ಘೋಷಣೆ
 • ಮೂರು ಲಕ್ಷಕ್ಕಿಂತ ಅಧಿಕ ನಗದು ವ್ಯವಹಾರಕ್ಕೆ ತಡೆ: ಲಕ್ಷದ ಒಳಗಿನ ನಗದು ವ್ಯವಹಾರಕ್ಕೆ ಮಾತ್ರ ಅವಕಾಶ-ಮೂರು ಲಕ್ಷಕ್ಕಿಂತ ಮೇಲ್ಪಟ್ಟ ವ್ಯವಹಾರ ಬ್ಯಾಂಕ್ ಮೂಲಕವೇ ಆಗಬೇಕು.ಇದರಿಂದ ರಾಜಕೀಯ ಪಕ್ಷಗಳಿಗೆ ಕಪ್ಪುಹಣ ತಡೆಯಲು ಬಜೆಟ್ ಶಾಕ್ ಟ್ರೀಟ್ ಮೆಂಟ್ ನೀಡಿದೆ. ಷರತ್ತುಗಳನ್ನು ಪಾಲಿಸಿದರೆ ಮಾತ್ರ ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯಿತಿ ಇದೆ.ಈ ಮೊದಲು 20 ಸಾವಿರ ನಗದು ಸ್ವೀಕಾರಕ್ಕೆ ಅವಕಾಶವಿತ್ತು.
 • ರಾಜಕೀಯ ಪಕ್ಷಗಳಿಗೆ 2 ಸಾವಿರಕ್ಕಿಂತ ಹೆಚ್ಚು ದೇಣಿಗೆ ಪಡೆದರೆ ದಾಖಲೆ ನೀಡಬೇಕು. ಪಕ್ಷಗಳಿಗೆ ದೇಣಿಗೆ ಕೊಟ್ಟವರ ಮಾಹಿತಿ ಕಡ್ಡಾಯವಾಗಿದೆ.
 • ಸಣ್ಣ ಕಂಪನಿಗಳಿಗೆ ತೆರಿಗೆ ವಿನಾಯಿತಿ-ಶೇ.30ರಿಂದ ಶೇ.25ಕ್ಕೆ ಇಳಿಕೆ
 • ಎಲ್ ಎನ್ ಜಿ ಮೇಲಿನ ಸುಂಕ ಶೇ.2.5ಕ್ಕೆ ಇಳಿಕೆ
 • ಆದಾಯ ತೆರಿಗೆ ಯಥಾಸ್ಥಿತಿಯಲ್ಲಿದೆ. 2.5ರಿಂದ 5 ಲಕ್ಷ ಆದಾಯಕ್ಕೆ ಶೇ.5ರಷ್ಟು ತೆರಿಗೆ ಇದೆ.
 • ಸಾಮಾನ್ಯ ತೆರಿಗೆದಾರರಿಗೆ ಬಂಪರ್ ಕೊಡುಗೆ-ತೆರಿಗೆಯಲ್ಲಿ ಶೇ.10ರಿಂದ ಶೇ.5ಕ್ಕೆ ಇಳಿಕೆಯಾಗಿದೆ.
 • ತಂಬಾಕು ಉತ್ಪನ್ನಗಳು ದುಬಾರಿ:
  ತಂಬಾಕು ಉತ್ಪನ್ನಗಳು ಮತ್ತು ಸಿಗರೇಟ್, ಪಾನ್ ಮಸಾಲ, ಜರ್ದಾ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಏರಿಸಿದೆ. ಪಾನ್ ಮಸಾಲ ಮೇಲಿನ ತೆರಿಗೆ ಶೇ.6ರಿಂದ 9ಕ್ಕೆ ಏರಿಕೆಯಾಗಿದೆ. ಹೊಗೆಸೊಪ್ಪಿನ ಮೇಲಿನ ತೆರಿಗೆ ಶೇ.4.2ರಿಂದ 8.3ಕ್ಕೆ ಏರಿಕೆಯಾಗಿದೆ.

 
ರೇಲ್ವೆಗೆ ಸಿಕ್ಕಿದ್ದು:

 • ತೀರ್ಥಯಾತ್ರೆಗೆ ವಿಶೇಷ ರೈಲುಗಳ ಯೋಜನೆ
 • 2 ಸಾವಿರ ರೇಲ್ವೆ ಸ್ಟೇಷನ್ ಗಳಲ್ಲಿ ಸೋಲಾರ್ ವ್ಯವಸ್ಥೆ
 • ರೇಲ್ವೆ ವೆಬ್ ಸೈಟ್ ಗಳಲ್ಲಿ ಟಿಕೆಟ್ ಬುಕ್ ಮಾಡಿದರೆ ಸರ್ವಿಸ್ ಚಾರ್ಜ್ ಇಲ್ಲ
 • 2020ರೊಳಗೆ ಸಂಪೂರ್ಣ ಮಾನವ ರಹಿತ ರೇಲ್ವೆ ಕ್ರಾಸಿಂಗ್
 • ಪ್ರಯಾಣಿಕರ ರಕ್ಷಾ ಕೋಶ-1ಲಕ್ಷ ಕೋಟಿ ಅನುದಾನ
 • ಸರಕು ಸಾಗಾಣಿಕೆ ಖಾಸಗೀಕರಣಿಗೆ ನಿರ್ಧಾರ
 • 4 ಪ್ರಮುಖ ಉದ್ದೇಶಗಳೊಂದಿಗೆ ರೇಲ್ವೆ ಕ್ಷೇತ್ರ ಅಭಿವೃದ್ಧಿ
 • ಎಲ್ಲಾ ರೈಲುಗಳ ಎಲ್ಲಾ ಕೋಚ್ ಗಳಲ್ಲಿ ಬಯೋ ಟಾಯ್ಲೆಟ್ಸ್
 • 3500 ಕಿ.ಮೀ ಹೊಸ ರೇಲ್ವೆ ಹಳಿಗಳಿಗೆ ಯೋಜನೆ

 
ಸಾರಿಗೆ:

 • ರಸ್ತೆಗಳ ಅಭಿವೃದ್ಧಿಗೆ 44 ಸಾವಿರ ಕೋಟಿ ರೂ, ಅನುದಾನ
 • ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ನಿಧಿ-64 ಸಾವಿರ ಕೋಟಿ ರೂ.ಗೆ ಹೆಚ್ಚಳ
 • ಕರಾವಳಿ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ
 • ಕರಾವಳಿ ಹೈವೇಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
 • ಸಾರಿಗೆ ಕ್ಷೇತ್ರಕ್ಕೆ 2.4ಕೋಟಿ ಅನುದಾನ
 • ಸಣ್ಣ ನಗರದಲ್ಲೂ ವಿಮಾನ ನಿಲ್ದಾಣಗಳ ಸ್ಥಾಪನೆ
 • ವಿಮಾನ ನಿಲ್ದಾಣಗಳ ಜಾಗ ವಾಣಿಜ್ಯ ಉದ್ದೇಶಗಳಿಗೆ ಬಳಕೆ

 
ರೈತರಿಗೆ ಬಂಪರ್:

 • ಕೃಷಿ ಕ್ಷೇತ್ರದಲ್ಲಿ ಶೇ.4.1ರಷ್ಟು ಬೆಳವಣಿಗೆ ಸಾಧಿಸಿದ್ದೇವೆ.
 • ಮೂರು ವರ್ಷಗಳ ಕಾಲ ಸಹಕಾರಿ ಸಂಘಗಳಿಗೆ ಸಾಲ
 • ಕೃಷಿ ಸಾಲಕ್ಕೆ 10ಲಕ್ಷ ಕೋಟಿ ರೂ. ಮೀಸಲು
 •  ಕೃಷಿ ಸಾಲ ಮೀಸಲು ಮೊತ್ತ ಹೆಚ್ಚಳ
 • ಹಾಲು ಉತ್ಪಾದನೆಗೆ 8 ಸಾವಿರ ಕೋಟಿ ರೂ, ನಿಧಿ ಸ್ಥಾಪನೆ
 • ರೈತರಿಗೆ ಇನ್ನೂ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಅದಕ್ಕಾಗಿ ರೈತರ ಫಸಲಿಗೆ ಸೂಕ್ತ ಬೆಲೆ ದೊರಕುವಂತೆ ಮಾಡುವುದು ನಮ್ಮ ಗುರಿ

 
 

Advertisement

LEAVE A REPLY

Please enter your comment!
Please enter your name here