ಮೋದಿ ಸಂಪುಟಕ್ಕೆ ನೂತನ ಸಚಿವರ ಪದಗ್ರಹಣ

0
185

ನವದೆಹಲಿ ಪ್ರತಿನಿಧಿ ವರದಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮೋದಿ ಸಂಪುಟಕ್ಕೆ 19 ಸಚಿವರು ಸೇರ್ಪಡೆಯಾಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಸಂಪುಟ ದರ್ಜೆ ಸಚಿವರಾಗಿ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೂತ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು. ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದೆ.
 
 
ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಂತಿದೆ.
1. ಅರ್ಜುನ್ ರಾಮ್ ಮೇಘ್ವಾಲ್ (ಬಿಜೆಪಿ ಸಂಸದ, ರಾಜಸ್ತಾನ)
2. ರಮೇಶ್ ಜಿಗಜಿಣಗಿ (ಬಿಜೆಪಿ ಸಂಸದ, ಕರ್ನಾಟಕ)
3. ಪಿಪಿ ಚೌದರಿ (ಬಿಜೆಪಿ ಸಂಸದ, ರಾಜಸ್ತಾನ)
4. ಸುಭಾಷ್ ರಾಮ್ ರಾವ್ ಭಮ್ರೆ (ಬಿಜೆಪಿ ಸಂಸದ, ಮಹಾರಾಷ್ಟ್ರ)
5. ಎಂಜೆ ಅಕ್ಬರ್ (ಬಿಜೆಪಿ ಸಂಸದ, ಮಧ್ಯ ಪ್ರದೇಶ)
6. ಅನಿಲ್ ಮಾಧವ್ ಡಾವೆ (ರಾಜ್ಯಸಭಾ ಸದಸ್ಯ, ಮಧ್ಯ ಪ್ರದೇಶ)
7. ಫಗ್ಗಾನ್ ಸಿಂಗ್ ಕುಲಸ್ಟೆ (ಬಿಜೆಪಿ ಸಂಸದ, ಮಧ್ಯ ಪ್ರದೇಶ)
8. ವಿಜಯ್ ಗೋಯೆಲ್ (ಬಿಜೆಪಿ ರಾಜ್ಯಸಭಾ ಸದಸ್ಯ, ರಾಜಸ್ತಾನ)
9. ಪುರುಷೋತ್ತಮ ರೂಪಾಲ (ಬಿಜೆಪಿ ಉಪಾಧ್ಯಕ್ಷ)
10. ಜಸ್ವಂತ್ ಸಿಂಗ್ ಭಬೋರ್ (ಬಿಜೆಪಿ ಸಂಸದ, ಗುಜರಾತ್)
11. ಮಹೇಂದ್ ನಾಥ್ ಪಾಂಡೆ (ಬಿಜೆಪಿ ಸಂಸದ, ಉತ್ತರ ಪ್ರದೇಶ)
12. ಅನುಪ್ರಿಯಾ ಪಟೇಲ್ (ಅಪ್ನಾದಳ್ ಎಂಪಿ, ಉತ್ತರ ಪ್ರದೇಶ)
13. ಮನ್ಸುಖ್ ಮಾಂಡವಿಯಾ (ಬಿಜೆಪಿ ಸಂಸದ, ಗುಜರಾತ್)
14. ಅಜಯ್ ತಮ್ಟಾ (ಬಿಜೆಪಿ ಎಂಪಿ, ಉತ್ತರಖಂಡ)
15. ರಾಮ್ ದಾಸ್ ಅಥಲ್ವಾಲೆ (ಆರ್ ಪಿಐ ಮುಖಂಡ)
16. ಕೃಷ್ಣ ರಾಜ್ (ಬಿಜೆಪಿ ಸಂಸದೆ, ಉತ್ತರ ಪ್ರದೇಶ)
17. ಸಿ ಆರ್ ಚೌದರಿ (ಬಿಜೆಪಿ ಸಂಸದ, ರಾಜಸ್ತಾನ)
18. ರಾಜನ್ ಗೊಹೆನ್ (ಬಿಜೆಪಿ ಸಂಸದ, ಅಸ್ಸಾಂ)
19. ಎಸ್ ಎಸ್ ಅಹ್ಲುವಾಲಿಯಾ (ರಾಜ್ಯಸಭಾ ಸದಸ್ಯ, ಪಶ್ಚಿಮ ಬಂಗಾಳ)
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿಕೇಂದ್ರ ಸಂಪುಟ ಸಚಿವರು ಸೇರಿ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಆರು ಮಂದಿ ಹಾಲಿ ಸಚಿವರನ್ನು ಸಂಪುಟದಿಂದ ಹೊರಕ್ಕೆ ಹಾಕಲಾಗಿದೆ. ಸದ್ಯ ಕೇಂದ್ರ ಸಂಪುಟದಲ್ಲಿ 64 ಸದಸ್ಯರಿದ್ದಾರೆ. ಸಂಪುಟ ಸರ್ಜರಿ ವೇಳೆ 7 ಸಚಿವರು ಸ್ಥಾನ ಕಳೆದುಕೊಂಡಲ್ಲಿ ಸದಸ್ಯರ ಸಂಖ್ಯೆ 57ಕ್ಕೆ ಕುಸಿಯಲಿದೆ. 19 ಸಂಸದರು ಹೊಸದಾಗಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾದ ನಂತರ ಈ ಸಂಖ್ಯೆ 76ಕ್ಕೆ ಏರಿಕೆಯಾಗಲಿದೆ.

LEAVE A REPLY

Please enter your comment!
Please enter your name here