ಮೋದಿ ಮೇಲೆ ಐಟಿ ದಾಳಿ!?

0
691

ನಮ್ಮ ಪ್ರತಿನಿಧಿ ವರದಿ

ಹೌದು..ಮೋದಿ ಮೇಲೆ ಐಟಿ ದಾಳೀನಾ…? ಇದೂ ನಿಜಾನಾ…? ಐಟಿ ದಾಳಿಗೆ ಕಾರಣವಾದ್ರೂ ಏನು…? ಯಾರು ಇದಕ್ಕೆ ಪ್ರೇರಣೆ…ಹಾಗಾದ್ರೆ ಐಟಿ ದಾಳಿ ಆಗಿದ್ಯಾ…ಆಗುತ್ತಾ…? ಈ ಎಲ್ಲಾ ಅಂಶಗಳು ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ. ದೇಶದ ಪ್ರಧಾನಿ ಮೋದಿ ಅವರ ಮೇಲೆ ಯಾಕೆ ಈ ಮಾತು ಕೇಳುತ್ತಿದೆ ಎಂದು ನಿಮಗನಿಸಿದ್ರೆ ಈ ವಿವರ ನೋಡಿ.

ದೇಶದ ಪ್ರಧಾನಿ ನರೇಂದ್ರ ಮೋದಿ ಸ್ವತಃ ಈ ಮಾತನ್ನು ಹೇಳಿದ್ದಾರೆ ಎಂದರೆ ನಂಬಲು ಸಾಧ್ಯವೇ…? ಒಂದೊಮ್ಮೆ ನಾನೇನಾದ್ರೂ ತಪ್ಪು ಮಾಡಿದ್ದೇ ಆದಲ್ಲಿ ಆದಾಯ ತೆರಿಗೆ ಇಲಾಖೆಯವರು ನನ್ನ ಮನೆಯ ಮೇಲೂ ದಾಳಿ ಮಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮ ವಿಶ್ವಾಸದ ನುಡಿಗಳನ್ನಾಡಿದ್ದಾರೆ. ಈ ಮೂಲಕ ತಮ್ಮ ಮೇಲೆ ಟೀಕೆ ಮಾಡುವ ಪ್ರತಿಪಕ್ಷಕ್ಕೆ ನರೇಂದ್ರ ಮೋದಿಯವರು ಅತ್ಯಂತ ಪ್ರಭಲವಾದ ತಿರುಗೇಟನ್ನೇ ನೀಡಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಸಿಧಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಈ ಬಹಿರಂಗ ಸವಾಲೆಸೆದಿದ್ದಾರೆ.

ದೇಶದ ಕಾನೂನು ಪ್ರತಿಯೊಬ್ಬರಿಗೂ ಒಂದೇ ಆಗಿದೆ. ಅದು ಪ್ರಧಾನಿ ಇರಲಿ, ಜನಸಾಮಾನ್ಯರಿರಲಿ ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಲೇ ಬೇಕು ಎಂದವರು ಹೇಳಿದರು. ಚುನಾವಣಾ ಸಮಯದಲ್ಲಿ ರಾಜಕೀಯ ಮುಖಂಡರ, ಸಂಬಂಧಿಕರ ಮನೆ, ಕಚೇರಿ ಮೇಲೆ ನಡೆದ ಆದಾಯ ತೆರಿಗೆ ದಾಳಿಗೆ ವಿಪಕ್ಷಗಳು ಮೋದಿಯವರನ್ನು ಟೀಕಿಸಿದ್ದು ಅದೆಲ್ಲದಕ್ಕೆ ಮೋದಿ ನೇರ ಉತ್ತರ ನೀಡಿದ್ದಾರೆ.

LEAVE A REPLY

Please enter your comment!
Please enter your name here