ಮೋದಿ ಮಹತ್ವದ ಮಾತು

0
2128

ಪ್ರಧಾನಿ ಮೋದಿಯವರಿಂದ ತುರ್ತು ಭಾಷಣ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿ ಪ್ರಮುಖ ತುರ್ತು ಭಾಷಣ ಆರಂಭಿಸಿದ್ದಾರೆ. ಕೊರೊನಾ ವಿರುದ್ಧ ಮತ್ತೊಮ್ಮೆ ಸಮರ ಸಾರಲು ಸಿದ್ಧರಾಗುವಂತೆ ಕರೆನೀಡಿದ್ದಾರೆ. ದೇಶ ಇಂದು ಅತಿದೊಡ್ಡ ಸಮರವನ್ನೆದುರಿಸುತ್ತಿದೆ. ಕೊರೊನಾದ ಎರಡನೇ ಅಲೆ ಬಿರುಗಾಳಿಯಂತೆ ಅಪ್ಪಳಿಸಿದೆ. ಇದು ಸಂಕಷ್ಟದ ಕಾಲವಾಗಿದೆ. ಈ ಸಂಕಷ್ಟದ ವಿರುದ್ಧ ದೊಡ್ಡ ಹೋರಾಟ ನಡೆಸಬೇಕಾಗಿದೆ ಎಂದರು.
ಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡುತ್ತಿರುವ ಕೊರೊನಾ ವಾರಿಯರ್ಸ್‌ ಬಗ್ಗೆ ಶ್ಲಾಘಿಸಿದ ಮೋದಿಯವರು ಕೊರೊನಾಕ್ಕೆ ತುತ್ತಾದ ಪ್ರತಿಯೊಬ್ಬರ ದುಃಖದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಧೈರ್ಯ ತುಂಬಿದರು.
ಸಂಯಮ ಕಾಪಾಡಿ: ಜನತೆ ಯಾವ ಕಾರಣಕ್ಕೂ ಸಂಯಮ ಕಳೆದುಕೊಳ್ಳದಿರಿ ಎಂದು ಮನವಿ ಮಾಡಿದ ಪ್ರಧಾನಿಯವರು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಈ ಸಮರ ಎದುರಿಸಬೇಕಾಗಿದೆ ಎಂದರು.
ಬೆಡ್‌ಗಳ ಸಂಖ್ಯೆ ಹೆಚ್ಚಳಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇಶದಲ್ಲಿ ವ್ಯಾಕ್ಸಿನ್‌ ಉತ್ಪಾದನೆ , ಆಕ್ಸಿಜನ್‌ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್‌ ರೈಲ್‌ ಆರಂಭವಾಗಿದೆ. ಹೆಚ್ಚು ಔಷಧಿ ಉತ್ಪಾದನೆಯಾಗುತ್ತಿದೆ ಎಂದರು.
ಬೃಹತ್‌ ಕೋವಿಡ್‌ ಆಸ್ಪತ್ರೆ ಆರಂಭವಾಗಲಿದೆ ಎಂದ ಮೋದಿಯವರು ವಿಶ್ವದಲ್ಲೇ ಅತೀ ದೊಡ್ಡ ವ್ಯಾಕ್ಸಿನ್‌ ಅಭಿಯಾನ ನಾವು ನಡೆಸುತ್ತಿದ್ದೇವೆ ಎಂದು ಹೇಳಿದರು. ಅತೀ ಕಡಿಮೆ ಬೆಲೆಗೆ ವ್ಯಾಕ್ಸಿನ್‌ ಸಿಗುವ ವ್ಯವಸ್ಥೆಯಾಗಿದೆ ಎಂದ ಮೋದಿಯವರು ಪ್ರತಿಯೊಬ್ಬರಿಗು ಲಸಿಕೆ ಸಿಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಈಗಾಗಲೇ ಹಿರಿಯ ನಾಗರೀಕರು, ಹೆಲ್ತ್‌ ವರ್ಕರ್ಸ್‌ಗಳಿಗೆ ಲಸಿಕೆ ಪೂರೈಸಿರುವುದಾಗಿ ಹೇಳಿದರು.

ಯಾವುದೇ ಕೆಲಸ ಕಾರ್ಯಗಳು ಬಂದ್‌ ಆಗುವುದಿಲ್ಲ. ಕೊರೊನಾ ನಿಯಂತ್ರಣಕ್ಕಾಗಿ ಕೆಲವೊಂದು ಮಾರ್ಗಸೂಚಿಗಳನ್ನು ಕೈಗೊಂಡಿದ್ದೇವೆ. ಪ್ರತಿಯೊಬ್ಬರ ಜೀವ ಉಳಿಸುವುದೇ ನಮ್ಮ ಗುರಿಯಾಗಿದೆ. ವೈದ್ಯರು ಹೆಚ್ಚು ಹೆಚ್ಚು ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಅತ್ಯಂತ ಕನಿಷ್ಠ ಅವಧಿಯಲ್ಲಿ ಸುಧಾರಣೆಗಳಾಗಿವೆ. ದೇಶದಲ್ಲಿ ಲಾಕ್‌ ಡೌನ್‌ ಅವಶ್ಯಕತೆಯಿಲ್ಲ ಎಂದು ಮೋದಿಯವರು ದೇಶವಾಸಿಗರ ಮನದಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಿದರು.
ಸ್ಥಳೀಯ ಮಟ್ಟದಲ್ಲಿ ಯುವಕರು ಕೆಲಸ ಮಾಡಬೇಕು. ಸದ್ಯಕ್ಕೆ ಲಾಕ್‌ ಡೌನ್‌ ಮಾಡುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟ ಪಡಿಸಿದರು. ಲಾಕ್‌ ಡೌನ್‌ ಏನಿದ್ರೂ ಕೊನೆಯ ಅಸ್ತ್ರ ಎಂದ ಮೋದಿಯವರು ಲಾಕ್‌ ಡೌನ್‌ ಅನ್ನೋದು ಕೊನೆಯ ಭ್ರಹ್ಮಾಸ್ತ್ರ ಎಂದರು

Advertisement

LEAVE A REPLY

Please enter your comment!
Please enter your name here