ಮೋದಿ ನಿರ್ಧಾರಗಳನ್ನು ವಿರೋಧಿಸುವ ಮುನ್ನ!

0
1411

ಸನಾತನ ಸಂಸ್ಕೃತಿ, ಧರ್ಮ ಪರಂಪರೆಯ ಭಾರತ ಇಡೀ ವಿಶ್ವಕ್ಕೆ ಗುರುಸ್ಥಾನದಲ್ಲಿದೆ. ಇಲ್ಲಿನ ಪ್ರತಿಯೊಂದು ವಿಚಾರಗಳೂ ಅಷ್ಟೇ…ಅವೆಲ್ಲವೂ ಇತರರಿಗೆ ಮಾದರಿ ಹಾಗೂ ತಳಪಾಯ ಎಂದರೆ ತಪ್ಪಲ್ಲ. ಒಂದೊಮ್ಮೆ ಅತ್ಯಂತ ವೈಭವಯುತವಾಗಿದ್ದ ಭಾರತದೇಶ, ಇಲ್ಲಿನ ಮೌಲಿಕ ವಿಚಾರಗಳು, ಆಧ್ಯಾತ್ಮಿಕ ಚಿಂತನೆಗಳ ತಳಹದಿ, ಅಗಾಧವಾಗಿದ್ದ ಭವ್ಯ ಪರಂಪರೆಯ ಮೂಲಕ ವಿರಾಟ್ ಸ್ವರೂಪದ ಅನಾವರಣ ಮಾಡಿತ್ತು. ಈ ಕಾರಣಕ್ಕಾಗಿಯೇ ವಿದೇಶಿಯರು ನಮ್ಮ ದೇಶವನ್ನು ಕೊಳ್ಳೆಹೊಡೆಯುವ ಮೂಲಕ ದೇಶದ ಸ್ಥಿತಿ ಅಧೋಗತಿಗೆ ಹೋಗುವಂತೆ ಮಾಡಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಭಾರತ ದೇಶವನ್ನು ಮತ್ತೆ ಇಡೀ ವಿಶ್ವವೇ ಕಣ್ ತೆರೆದು ನೋಡುವಂತೆ ಮಾಡುವ ಮಹತ್ ಕಾರ್ಯಕ್ಕೆ ಕೈಯಿಕ್ಕಿದ್ದಾರೆ. ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಮಹೋನ್ನತ ಕಾರ್ಯವನ್ನು ಮಾಡಲಾರಂಭಿಸಿ ಯಶಗಳಿಸುತ್ತಿದ್ದಾರೆ. `ಪರಂಪರೆ’ಯ ಹೆಸರಿನ ಮೂಲಕ ದೇಶವನ್ನಾಳಿ ದೇಶದ ದುಸ್ಥಿತಿಗೆ ಕಾರಣವಾಗಿರುವ ರಾಷ್ಟ್ರೀಯ ಪಕ್ಷವೊಂದರಲ್ಲಿ ನಲುಗಿ ಹೋಗುತ್ತಿದ್ದ ನಮ್ಮ ಭಾರತ ಕಳೆದ ಲೋಕಸಭಾ ಚುನಾವಣೆಯ ನಂತರ `ಮೈಕೊಡವಿ’ನಿಂತ ಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಮೈ ರೋಮಾಂಚನವಾಗುವುದರಲ್ಲಿ ಯಾವೊಂದು ಸಂದೇಹವೂ ಇಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ `ವಿಶ್ವ’ಮಾನ್ಯವ್ಯಕ್ತಿಯಾಗಿ ಇಂದು ಭಾರತವನ್ನು ಪ್ರತಿನಿಧಿಸುವಂತಾಗಿದೆ. ಸಿಂಹ ನಡೆದದ್ದೇ ದಾರಿ ಎಂಬಂತೆ ಯಾವೊಂದು ಅಡೆತಡೆಗಳಿದ್ದರೂ ಲೆಕ್ಕಿಸದೆ, ನನ್ನ ಧ್ಯೇಯವೊಂದೇ…ಅದು ಭಾರತ ಬೆಳಗಬೇಕೆಂಬ ಏಕ ದೃಷ್ಠಿಯಿಂದ ಒಂದೊಂದು ದಿಟ್ಟ ನಿರ್ಧಾರಗಳನ್ನು ಕೈಗೊಂಡು ಮೋದಿ ದೇಶವನ್ನು ಮುನ್ನಡೆಸುವ ರೀತಿ ಪ್ರತಿಯೊಬ್ಬರನ್ನೂ ಬೆರಗು ಮೂಡಿಸುವಂತೆ ಮಾಡುತ್ತಿದೆ.
ಇಂದು ಭಾರತದೇಶದ ಸ್ಥಿತಿಗತಿಯನ್ನೊಮ್ಮೆ ಅವಲೋಕಿಸಿದರೆ ಹಲವು ಮಹತ್ತರ ಬದಲಾವಣೆಗಳಾಗಿವೆ. ಕಳೆದ ಐವತ್ತು ವರ್ಷಗಳಲ್ಲಿ ಆಗದಂತಹ ಬದಲಾವಣೆಗಳು ಇಂದು ಆಗುತ್ತಿವೆ…ಆಗತೊಡಗಿವೆ. ಇಡೀ ಜಾಗತಿಕ ಮಟ್ಟದಲ್ಲಿ ಅವಲೋಕಿಸಿದರೆ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಮೋದಿಯವರ ದಿಟ್ಟ ನಿಧರ್ಾರಗಳು, ಆಡಳಿತ ವೈಖರಿಗೆ ಇಡೀ ವಿಶ್ವವೇ ಮಾನ್ಯತೆ ನೀಡುತ್ತಿದೆ. ಅಂತಹ ಅದ್ಭುತ ಚಿಂತನೆಗಳು ಹಾಗೂ ಅವುಗಳ ಸಾಕಾರದ ಮೂಲಕ ದೇಶದ ಸ್ಥಿತಿಯನ್ನೇ ಬದಲಾಯಿಸುವ ಮಹತ್ಕಾರ್ಯ ಮೋದಿಯವರ ಮೂಲಕ ಭಾರತಕ್ಕೆ ಲಭಿಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹ ಕಾರ್ಯ.
ಅಚ್ಛೇದಿನ್ ಚಿಂತನೆಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಳ್ಳುತ್ತಿರುವ ಪ್ರತಿಯೊಂದು ಕಾರ್ಯವೂ ಜನತೆಗೆ ನಿಜಾರ್ಥದಲ್ಲಿ ಸಾಥ್ರ್ಯಕ್ಯತೆಯನ್ನು ಪಡೆಯಲು ಸಾಧ್ಯವಾಗುತ್ತಿದೆ. ದೇಶದ ಬಗೆಗಿನ ಅಪಾರ ಒಲವು, ಎಲ್ಲವೂ ದೇಶಕ್ಕಾಗಿ, ದೇಶದ ಪ್ರಜೆಗಳ ಒಳಿತಿಗಾಗಿ ಎಂಬ ಮಹೋನ್ನತ ಚಿಂತನೆಯ ಹೊಂದಿರುವ ಪ್ರಧಾನಿ ಕೈಗೊಳ್ಳುವ ಪ್ರತಿಯೊಂದು ಕಾರ್ಯವೂ ಅಷ್ಟೇ ಪ್ರಮುಖ ಹಾಗೂ ಪ್ರಸಕ್ತ ಸನ್ನಿವೇಶಕ್ಕೆ ಪೂರಕ ಎಂದರೆ ತಪ್ಪಾಗಲಾರದು. ದೇಶ ಪ್ರೇಮ ಹೊಂದಿರುವ ನಿಜಾರ್ಥದ ದೇಶಪ್ರೇಮಿಗಳು ಎಂದಿಗೂ ಮೋದಿಯವರ ಚಿಂತನೆಯನ್ನು ದೂರುತ್ತಿಲ್ಲ. ಬದಲಾಗಿ ಕೇವಲ ರಾಜಕೀಯ ಲಾಲಸೆಗಾಗಿ, ಲಾಭಿಗಾಗಿ, ರಾಜಕೀಯಕ್ಕಾಗಿ ಮೋದಿಯವರ ನಿರ್ಧಾರಗಳನ್ನು ನಿಂದಿಸುವ, ಖಂಡಿಸುವ ಕಾರ್ಯ ಒಂದೆಡೆಯಿಂದ ಆಗುತ್ತಿರುವುದು ನಿಜಕ್ಕೂ ಖೇದಕರ.

ಇದು ಚೋದ್ಯವಲ್ಲವೇ…?
ಕಳೆದ ಕೆಲ ಸಮಯಗಳಿಂದ ಭಾರತದಲ್ಲಿ ತೈಲ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇಂಧನ ಬಳಕೆದಾರರ ಮೊಗದಲ್ಲಿ ಮಂದಹಾಸ ಬೀರುತ್ತಿದೆ. ಹೀಗಿದ್ದರೂ ಮೋದಿಯವರನ್ನು ನಿಂದಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ ಎಂಬುದು ಬೇಸರದ ವಿಚಾರ. ಪೆಟ್ರೋಲ್,ಡೀಸೆಲ್ ಬೆಲೆ ಪೈಸೆಯಷ್ಟು ಏರಿಕೆಯಾದರೆ `ಬ್ರೇಕಿಂಗ್, ಎಕ್ಸ್ ಕ್ಲೂಸಿವ್’ಕೊಡುವ ಮಾಧ್ಯಮಗಳು, ಉದ್ದುದ್ದ ಬರೆಯುವ ಪತ್ರಿಕೆಗಳು, ನವ ಮಾಧ್ಯಮಗಳು ಇಂಧನ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿರುವುದನ್ನು ಆ ಮಟ್ಟಿಗೆ ಪ್ರಚಾರ ಮಾಡದಿದ್ದುದು ಮೋದಿ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. ಏನೇಇರಲಿ ಪ್ರಧಾನಿ ಮೋದಿಯವರ ಮಧ್ಯಸ್ಥಿಕೆ ವಾದದಿಂದಲೇ ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗಲು ಪ್ರಮುಖ ಕಾರಣ ಎಂಬ ಸೌದಿ ಅರೇಬಿಯಾದ ಇಂಧನ ಸಚಿವರ ಹೇಳಿಕೆ ಇನ್ನಾದರೂ ಬಾಯಿಬಡುಕ ವಿಪಕ್ಷಗಳಿಗೆ ಕೇಳಿಸಿದರೆ ಉತ್ತಮವಲ್ಲವೇ?

* ನಾಡೋಡಿ

LEAVE A REPLY

Please enter your comment!
Please enter your name here