ಮೋದಿಯವರ ಕ್ರಾಂತಿಕಾರಿ ಹೆಜ್ಜೆಗೆ ಅಭಿನಂದನೆ

0
333

ಮಂಗಳೂರು ಪ್ರತಿನಿಧಿ ವರದಿ
ಹಲವಾರು ದಶಕಗಳಿಂದ ಭಾರತದಲ್ಲಿ ಕಪ್ಪು ಹಣ ಹಾಗೂ ಭ್ರಷ್ಟಾಚಾರ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಭಾರತವನ್ನು ಆಳ್ವಿಕೆ ಮಾಡಿದ ಇವರೆಗಿನ ಅನೇಕ ಸರಕಾರಗಳು ಕೂಡ ಇವುಗಳನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿರದಿರುವುದು ಈ ಮಣ್ಣಿನ ವಿಪರ್ಯಾಸ, ಸೂಕ್ತವಾದಂತಹ ಕಾನೂನಾತ್ಮಕ ಕ್ರಮಗಳಿಲ್ಲದಿದ್ದರಿಂದ ಖೋಟಾ ನೋಟುಗಳ ಹಾವಳಿ ಭಾರತದಾದ್ಯಂತ ಪಸರಿಸಿಕೊಂಡಿದೆ. ಅಷ್ಟೇ ಅಲ್ಲದೇ ಡ್ರಗ್ ಮಾಫಿಯಾ ಹಾಗೂ ರಿಯಲ್ ಎಸ್ಟೇಟ್ ಮಾಫಿಯಗಳು, ನಗದು ವ್ಯವಹಾರಗಳಿಗೆ ನಿಯಂತ್ರಣವಿಲ್ಲದ ಕಾರಣ ಸಶಕ್ತವಾಗಿ ತಲೆ ಎತ್ತಿವೆ. ರೂ.500 ಹಾಗೂ ರೂ.1000ರದ ನೋಟುಗಳ ಮಾನ್ಯತೆಯನ್ನು ರದ್ದು ಪಡಿಸುವ ಮುಖಾಂತರ ಕೇಂದ್ರ ಸರಕಾರ, ಹಾಗೂ ಮೇಲಿನ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಉತ್ತರವನ್ನು ಕೊಟ್ಟಿರುವುದು ಅತ್ಯಂತ ಸ್ವಾಗತಾರ್ಹ, ಇದಕ್ಕೆ ಕಾರಣಿಭೂತರಾದ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
 
ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಪೂರೈಕೆಯಾಗುತ್ತಿದ್ದದ್ದು ಬಹುತೇಕ ನಗದು ವ್ಯವಹಾರಗಳ ಮೂಲಕ, ಭಾರತದ ಮೇಲೆ ಈ ಹಿಂದೆ ಜರುಗಿದ ಭಯೋತ್ಪಾದಕ ದಾಳಿಗಳಲ್ಲಿ ಇದರ ಬಗ್ಗೆ ಆಧಾರಗಳೂ ಸಿಕ್ಕಿದೆ. ಈ ಯೋಜನೆಯ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಹಣ ಪೂರೈಕೆಗೆ ತೊಡಕುಂಟಾಗಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಇದು ಅತಿ ದೊಡ್ಡ ಹೆಜ್ಜೆ ಆಗಿದೆ. ಡ್ರಗ್ ಮಾಫಿಯಾ ಹಾಗೂ ಭೂಮಾಫಿಯಾಗಳಿಗೂ ಕೂಡ ಈ ಮುಖೇನ ಕಡಿವಾಣ ಬಿದ್ದಿದ್ದು ಬರುವಂತಹ ದಿನಗಳಲ್ಲಿ ಇವುಗಳನ್ನು ನಿಯಂತ್ರಿಸುವ ಕಾರ್ಯ ಸುಲಭವಾಗಲಿದೆ. ಈ ಯೋಜನೆಯ ಮೂಲಕ ಭ್ರಷ್ಟಾಚಾರ ನಿಗ್ರಹವಾಗುವುದಷ್ಟೇ ಅಲ್ಲದೆ ತೆರಿಗೆ ವಂಚಿಸುತ್ತಿದ್ದವರಿಗೆ ಅನಿವಾರ್ಯತೆ ಒದಗಿ ತೆರಿಗೆ ಪಾವತಿ ಹೆಚ್ಚುತ್ತದೆ. ತೆರಿಗೆ ಪಾವತಿ ಹೆಚ್ಚುವುದರಿಂದ ಭಾರತದ ಅಭಿವೃದ್ಧಿಯ ಓಟ ಮತ್ತಷ್ಟು ವೇಗ ಪಡೆದುಕೊಳ್ಳುವುದಷ್ಟೇ ಅಲ್ಲದೆ ಭಾರತದ ಜಿ.ಡಿ.ಪಿ ಕೂಡ ವೃದ್ಧಿಸುತ್ತದೆ. ಭಾರತದ ಅಭಿವೃದ್ಧಿಯ ಪಥದಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದ್ದು ಕೇಂದ್ರ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here