ಮೊಸರನ್ನ

0
415

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
1-1/2 ಅನ್ನ, 1/2 ಕ್ಯಾರೆಟ್ , ಗ್ರೀನ್ ಆಪಲ್ , 2ಹಸಿಮೆಣಸು, ಕರಿಬೇವು,  1 ಇಂಚು ಶುಂಠಿ, 1 / 4 ಚಮಚ ಅರಿಶಿನ, 1 / 4 ಚಮಚ ಮೆಣಸಿನ ಪುಡಿ, ಗೋಡಂಬಿ – ಸ್ವಲ್ಪಉಪ್ಪು, 1 ಬೌಲ್ ಗಟ್ಟಿ ಮೊಸರು
ಒಗ್ಗರಣೆಗೆ: ಎಣ್ಣೆ, ಉದ್ದಿನಬೇಳೆ, ಸಾಸಿವೆ
 
ಮಾಡುವ ವಿಧಾನ:
ಮೊದಲು ಕ್ಯಾರೆಟ್ ತುರಿದುಕೊಳ್ಳಿ. ಸೇಬು ಹಣ್ಣನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರವಿ ತಣ್ಣಗಾಗಲು ಬಿಡಿ. ಒಂದು ಪಾತ್ರೆಯಲ್ಲಿ ಅನ್ನ, ಮೊಸರು, ಜಜ್ಜಿದ ಶುಂಠಿ, ಉಪ್ಪು, ಕ್ಯಾರೆಟ್ ತುರಿ, ಹೆಚ್ಚಿದ ಸೇಬು, ರುಚಿಗೆ ತಕ್ಕಷ್ಟು ಮೆಣಸಿನ ಪುಡಿ ಸೇರಿಸಿ ಕಲಸಿಕೊಳ್ಳಿ. ಬೇಕಿದ್ದರೆ ಕಲಸುವಾಗ ಸ್ವಲ್ಪ ನೀರು ಸೇರಿಸಿ. ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಎಣ್ಣೆ, ಗೋಡಂಬಿ, ಉದ್ದಿನಬೇಳೆ, ಸಾಸಿವೆ, ಅರಿಶಿನ ಹಾಕಿ ಚಟಗುಟ್ಟಿದ ನಂತರ ಹೆಚ್ಚಿದ ಹಸಿಮೆಣಸು, ಕರಿಬೇವು ಸೇರಿಸಿ. ಒಗ್ಗರಣೆಯನ್ನು ಮೊದಲು ತಯಾರಿಸಿಕೊಂಡ ಮೊಸರನ್ನಕ್ಕೆ ಸೇರಿಸಿ ಕಲಸಿ.ಮೊಸರು ಹುಳಿ ಇಲ್ಲದಿದ್ದರೆ ಬೇಕಿದ್ದರೆ ಸ್ವಲ್ಪ ನಿಂಬೆರಸ ಸೇರಿಸಿ ಕಲಸಿದರೆ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here