ಮೊಬೈಲ್ ಕ್ಲಿನಿಕ್ ಪ್ರಾಜೆಕ್ಟ್: ಪರಿಚಯ ಕಾರ್ಯಕ್ರಮ

0
215

 
ನಮ್ಮ ಪ್ರತಿನಿಧಿ ವರದಿ
ಸರಕಾರಿ ಆಸ್ಪತ್ರೆಗಳು ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯದ ಸುಮಾರು 26 ಭಾಗಗಳಲ್ಲಿ ಮೊಬೈಲ್ ಆಂಬುಲೆನ್ಸ್ ಪ್ರಾರಂಭಿಸಲು ಕರ್ನಾಟಕ ಸರಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
 
 
ಅವರು ಶುಕ್ರವಾರ ಸೌದಿ ಅರೇಬಿಯಾದ ಜುಬೈಲ್ ರಾಯಲ್ ಕಮಿಷನ್ ನ ಗೋಲ್ಡನ್ ಫಿಶ್ ರೆಸ್ಟೋರೆಂಟ್ ನಲ್ಲಿ ಎಂ.ಫ್ರೆಂಡ್ಸ್ ಮಂಗಳೂರು ವತಿಯಿಂದ ನಡೆದ ಮೊಬೈಲ್ ಕ್ಲಿನಿಕ್ ಪ್ರಾಜೆಕ್ಟ್ ನ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
 
 
ಸಾಮಾಜಿಕ ತಾಣಗಳು ದುರುಪಯೋಗವಾಗುವ ಪ್ರಸ್ತುತ ಸನ್ನಿವೇಶದಲ್ಲಿ ಎಂ.ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಕರಾವಳಿ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಸಂಚಲನ ಮೂಡಿಸಿದೆ ಎಂದು ಯು.ಟಿ. ಖಾದರ್ ಹೇಳಿದರು.
 
 
 
ಪ್ರಸ್ತಾವನೆ ಮಾಡಿದ ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಮಾತನಾಡಿ ಎಂ.ಫ್ರೆಂಡ್ಸ್ ಮೊಬೈಲ್ ಕ್ಲಿನಿಕ್ 50 ಲಕ್ಷ ರೂ. ಯೋಜನೆಯಾಗಿದ್ದು, ಇದರಲ್ಲಿ ವೈದ್ಯರು, ಸಿಬ್ಬಂದಿ ಅಲ್ಲದೆ ದ.ಕ. ಜಿಲ್ಲೆಯಲ್ಲಿ ತಿಂಗಳಲ್ಲಿ 20 ಗ್ರಾಮಗಳಲ್ಲಿ ಆರೋಗ್ಯ ಶಿಬಿರವನ್ನು ಅರ್ಥಪೂರ್ಣವಾಗಿ ನಡೆಸಲಿದೆ. ಇದರಲ್ಲಿ ಲ್ಯಾಬ್ ವ್ಯವಸ್ಥೆ ಮಾಡಲಾಗುವುದು. ಮೊಬೈಲ್ ಕ್ಲಿನಿಕ್ ಬಸ್ ನ್ನು ಕೊಡುಗೈದಾನಿ ಝಕರಿಯಾ ಬಜ್ಪೆ ಪ್ರಾಯೋಜಿಸಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.
 
 
 
ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದರು. ಅಲ್ ಮುಝೈನ್ ಗ್ರೂಪ್ ನ ಝಹೀರ್ ಝಕರಿಯಾ, ವೃಟ್ ಸ್ಟೋನ್ ಗ್ರೂಪ್ ಸಿಇಓ ಬಿ.ಎಂ. ಶರೀಫ್, ಅಮಾಕೋ ಗ್ರೂಪ್ ಸಿಇಓ ಮಹಮ್ಮದ್ ಆಸಿಫ್, ತಾಲಿಬ್ ಹುಸೈನ್ ಮುಬಾರಕ್ ಅಲ್ ಹಮ್ಮಾಸ್, ರಿಯಲ್ ಟೆಕ್ ಸಿಇಓ ಮಹಮ್ಮದ್ ಇಸ್ಮಾಯಿಲ್ ಉಳ್ಳಾಲ, ದುಬೈ ಅಲ್ ಫಲಾಹ್ ಎಂ.ಡಿ. ಯೂಸುಫ್. ಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ತಾಹಿರ್ ಸಾಲ್ಮರ, ವಿ.ಎಚ್. ಅಶ್ರಫ್, ಝುಬೈರ್ ವಿಟ್ಲ, ಮುಸ್ತಫಾ ಇರುವೈಲ್, ರಿಫಾಯಿ ಕೊಡಿಪ್ಪಾಡಿ ಉಪಸ್ಥಿತರಿದ್ದರು. ಯೂನುಸ್ ರಿಯಾದ್ ಸ್ವಾಗತಿಸಿದರು. ಫಾರೂಕ್ ಪೋರ್ಟ್ ಫೋಲಿಯೋ ವಂದಿಸಿದರು. ಅಬೂಬಕರ್ ನೋಟರಿ ವಿಟ್ಲ ಹಾಗೂ ಇರ್ಶಾದ್ ಬೈರಿಕಟ್ಟೆ ಕಾರ್ಯಕ್ರಮ ನೀರೂಪಿಸಿದರು. ರಶೀದ್ ವಿಟ್ಲ ಪ್ರಸ್ತಾವನೆಗೈದರು.

LEAVE A REPLY

Please enter your comment!
Please enter your name here