ಮೊದಲ ಬಾರಿಗೆ ಅಮೆರಿಕದಲ್ಲಿ…

0
530

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ವಿಂಡೀಸ್ ವಿರುದ್ಧ ಟಿ20 ಆಡಲು ಸಜ್ಜಾಗಿದೆ.
 
 
 
ಈಗಾಗಲೇ ಫ್ಲೋರಿಡಾಗೆ ಬಂದಿಳಿದಿರುವ ಎಂಎಸ್ ಧೋನಿ ನೇತೃತ್ವದ ಪಡೆ ಆಗಸ್ಟ್ 27 ರಂದು ಮೊದಲ ಟಿ-20 ಪಂದ್ಯವನ್ನು ಆಡಲಿದೆ.
 
 
ಸೀಮಿತ ಓವರ್ಸ್ ಕ್ರಿಕೆಟ್ ಟೂರ್ನಿಗೆ ಅಂತಾನೆ ವಿಶೇಷವಾಗಿ ನಿರ್ಮಿಸಿರುವ ಸೆಂಟ್ರಲ್ ಬ್ರವರ್ಡ್ ರಿಜಿನಲ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಲಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯ ನಡೆಯಲಿದೆ.
 
 
ವಿಂಡೀಸ್ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರುವ ಟೀಂ ಇಂಡಿಯಾ ಟಿ-20 ಸರಣಿಯನ್ನು ಗೆಲ್ಲುವ ಆತ್ಮ ವಿಶ್ವಾಸದಲ್ಲಿದೆ. ಐಸಿಸಿ ಅನುಮತಿಯಂತೆ ಕಳೆದ ತಿಂಗಳು ಅಮೇರಿಕ ಕೆರೆಬಿಯನ್ ಪ್ರಿಮಿಯರ್ ಲೀಗ್ ನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.
 
 
ಎರಡು ತಂಡದಲ್ಲಿದ್ದಾರೆ…
ಭಾರ ತಂಡ:
ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಸ್ಟುವರ್ಟ್ ಬಿನ್ನಿ.
 
 
ವೆಸ್ಟ್ ಇಂಡೀಸ್ ತಂಡ:
ಕಾರ್ಲೊಸ್ ಬ್ರಥ್ ವೈಟ್ (ನಾಯಕ), ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಕ್ರಿಸ್ ಗೇಲ್, ಡ್ವಾಯ್ನೆ ಬ್ರಾವೋ, ಇವಿನ್ ಲೂಯಿಸ್, ಜಾಸನ್ ಹೋಲ್ಡರ್, ಜಾನ್ಸನ್ ಚಾರ್ಲ್ಸ್, ಕೀರಾನ್ ಪೊಲ್ಲಾರ್ಡ್, ಲೆಂಡ್ಲ್ ಸಿಮನ್ಸ್, ಮರ್ಲಾನ್ ಸ್ಯಾಮುಯಲ್ಸ್, ಸ್ಯಾಮುಯಲ್ ಬದ್ರಿ, ಸುನಿಲ್ ನರೇನ್.

LEAVE A REPLY

Please enter your comment!
Please enter your name here