ಮೊದಲೇ ಮಾಹಿತಿಯಿತ್ತ…!

0
267

 
 
ಮೈಸೂರು ಪ್ರತಿನಿಧಿ ವರದಿ
ಮೈಸೂರು ಕೋರ್ಟ್ ಶೌಚಾಲಯದಲ್ಲಿ ಸ್ಫೋಟ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ. ಈ ಮೊದಲು ರೈಲ್ವೆ ಪೊಲೀಸರಿಗೆ ಸ್ಫೋಟಕ ಸಾಮಾಗ್ರಿಗಳು ಸಿಕ್ಕಿದ್ದವು. ಸುಮಾರು 10 ದಿನಗಳ ಹಿಂದೆ ಸ್ಫೋಟಕ ಸಾಮಾಗ್ರಿಗಳು ಸಿಕ್ಕಿದ್ದವು ಎಂಬ ಮಾಹಿತಿಗಳು ಲಭ್ಯವಾಗಿದೆ.
 
 
 
ಮೈಸೂರಿಗೆ ತೆರಳುತ್ತಿದ್ದ ಓರ್ವ ವ್ಯಕ್ತಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ. ಈ ಸ್ಫೋಟಕಗಳನ್ನು ಬೆಳಗಾವಿಯಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಜಪ್ತಿ ಮಾಡಲಾಗಿತ್ತು. ಆದರೆ ಸ್ಫೋಟಕ ಸಾಗಿಸುತ್ತಿದ್ದ ವ್ಯಕ್ತಿ ಎಲ್ಲಿ ಹೋದನೆಂದು ಗೊತ್ತಿಲ್ಲ.
 
 
ರೈಲು ನಿಲ್ದಾಣದ ಬಳಿ ಬ್ಯಾಗ್ ನಿಂದ ಪೊಟ್ಟಣ ಕೆಳಗೆ ಬಿದ್ದಿತ್ತು. ಈ ಪೊಟ್ಟಣವನ್ನು ಗಮನಿಸಿದ ಯೋಧ ಆರ್ ಪಿಎಫ್ ಪೊಲೀಸರಿಗೆ ಕೊಟ್ಟಿದ್ದಾನೆ.ನಿಲ್ದಾಣದ ಬಳಿ ಹೋಗುತ್ತಿದ್ದ ವ್ಯಕ್ತಿ ಬ್ಯಾಗ್ ನಲ್ಲಿ ಪೊಟ್ಟಣ ಬಿದ್ದಿತ್ತು. ಪೊಟ್ಟಣ ಬೆಳಗಾವಿ ರೈಲು ನಿಲ್ದಾಣದ ಪ್ರವೇಶದ್ವಾರ ಬಳಿ ಸಿಕ್ಕಿತ್ತು.
 
 
ಬಿದ್ದು ಸಿಕ್ಕಿದ ಶಂಕಿತ ಪೊಟ್ಟಣದಲ್ಲಿ ಜಿಲೆಟಿನ್ ರೀತಿ ಕಡ್ಡಿಗಳು ಮತ್ತು ಎರಡರಿಂದ ಮೂರು ಮೀಟರ್ ವೈರ್ ಸಹ ಪತ್ತೆಯಾಗಿತ್ತು. ಘಟನೆ ನಂತರ ಶಂಕಿತ ವ್ಯಕ್ತಿಯನ್ನು ಹುಡುಕಿದಾಗ ಆತ ನಾಪತ್ತೆಯಾಗಿದ್ದ. ಬೆಳಗಾವಿ ಬಳಿ ರೈಲ್ವೆ ಪೊಲೀಸರು ಪೊಟ್ಟಣ ಜಪ್ತಿ ಮಾಡಿದ್ದರು.

LEAVE A REPLY

Please enter your comment!
Please enter your name here