ಮೊಗವೀರರ ಬದುಕಿಗೆ ಮಾರಕವೇ…?ಎಚ್ಚೆತ್ತುಕೊಳ್ಳಿ…

0
1361

ನಾವು ಕನ್ನಡಿಗರು ವಿಶಾಲ ಹೃದಯಿಗಳು…ಕನ್ನಡ ಭಾಷೆಯಲ್ಲಿ ಅಭಿಮಾನ ಎಷ್ಟರ ಮಟ್ಟಿಗೆ ನಮಗಿದೆ ಎಂಬುದು ಗೊತ್ತೇ ಇದೆ. ಕರಾವಳಿಯ ತುಳುನಾಡಿನ ಜನತೆ ಎಲ್ಲರನ್ನೂ ನಮ್ಮವರೆಂದೇ ಭಾವಿಸುವ ಹೃದಯವೈಶಾಲ್ಯತೆ ಹೊಂದಿದ ಮಂದಿ…ಎಲ್ಲರನ್ನೂ ನಮ್ಮವರೆಂದೇ ನಂಬುವ ಜನತೆ. ಇದೀಗ ಈ ಮನೋಭಾವವೇ ಇಲ್ಲಿಯ ಮಂದಿಗೆ ಮುಳುವಾಗಿದೆಯೇ ಎಂಬ ಭಾವನೆ ಮೂಡುತ್ತಿದೆ. ನಮ್ಮನ್ನು ತುಳಿಯುವ, ನಮ್ಮ ಒಳ್ಳೆಯತನವನ್ನು ದುರಪಯೋಗಮಾಡುವ , ಅವಕಾಶಗಳನ್ನು ಬಾಚಿಕೊಂಡು ಕಬಳಿಕೊಳ್ಳುವ ಮಂದಿ ಹೆಚ್ಚಾಗುತ್ತಿದ್ದಾರೆ. ಇದೀಗ ನಾವು ಏಳುವ ಸಮಯ ಬಂದಿದೆ…ಏಳಿ ಎದ್ದೇಳಿ ಎಂಬ ಧ್ವನಿ ಮೊಳಗಬೇಕಾಗಿದೆ…! 

 


ನಿಮಗೆ ಗೊತ್ತೇ…?  ನಮ್ಮೂರಿನಲ್ಲಿ ತಮಿಳುನಾಡು ಮೂಲದವರು,ಕೇರಳ ಮೂಲದವರು,ಆಂದ್ರ ಮೂಲದವರು,ಉತ್ತರ ಪ್ರದೇಶದವರು,ಮದ್ಯಪ್ರದೇಶದವರು ನಮಗೆ ಗೊತ್ತಿಲ್ಲದೆ ದರ್ಬಾರ್ ಮಾಡುತ್ತಿದ್ದಾರೆ ಅನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ…!

ನಮ್ಮ ನೆಲದಲ್ಲೇ ಇರುವ ಈ ಒಂದು ಸಂಸ್ಥೆ ಇದೀಗ ಮತ್ತೊಂದು ಹುನ್ನಾರಕ್ಕೆ ಮೆಲ್ಲನೆ ಅಡಿಯಿಟ್ಟಿದೆ. ಇನ್ನೂ ನಾವು ಸುಮ್ಮನಿದ್ದರೆ ಅಕ್ಷರಶಃ ನಾವೇ ನಮ್ಮ ವಿನಾಶಕ್ಕೆ ಕಾರಣೀಕರ್ತರಾಗುತ್ತೇವೆ ಎಂಬುದರಲ್ಲಿ ಎರಡು ಮಾತಿಲ್ಲ… ಹಾಗಾದರೆ ಅದೇನು…ಆ ಸಮಸ್ಯೆಯೇನು ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸದೆ ಇರದು… ಈ ಸ್ಟೋರಿ ನಿಮಗೆ ಎಲ್ಲವನ್ನೂ ಹೇಳುತ್ತದೆ…

ಮಂಗಳೂರಿನ ಪ್ರತಿಷ್ಠಿತ ಸಂಸ್ಥೆ ಎಂ.ಆರ್.ಪಿ.ಎಲ್‌ ಈಗಾಗಲೇ ಹಲವು ಕಾರಣಗಳಿಂದ ತುಳುನಾಡಿಗರಿಗೆ ಮಾರಕವಾಗಿದೆ. ಇದೀಗ ಈ ಸಂಸ್ಥೆ ಮತ್ತೊಂದು ಹೊಸ ಯೋಜನೆಯನ್ನು ಸಿದ್ಧಪಡಿಸಿ ತುಳುವರನ್ನು ಸರ್ವ ನಾಶ ಮಾಡ ಹೊರಟಿದೆ ಎಂದರೆ ತಪ್ಪಲ್ಲ!. ಈ ಸಂಸ್ಥೆ ಸಮುದ್ರದಿಂದ ನೀರನ್ನು ಶುದ್ಧೀಕರಿಸಿ ಕೊಂಡು ಹೋಗುವ ಕಾಮಗಾರಿಯನ್ನು ಆರಂಭಿಸಿದೆ. ಇದಕ್ಕಾಗಿ ಚೆನ್ನೈ ಮೂಲದ VA TECH WABAG ltd ಸಂಸ್ಥೆಗೆ ಗುತ್ತಿಗೆ ನೀಡಿದೆ. ಚೆನ್ನೈ ಮೂಲದ ಸಂಸ್ಥೆ ಕಾಮಗಾರಿ ಆರಂಭಿಸಿದೆ. ಇದು ಒಂದು ಕಥೆ. ..

Advertisement

ಇರಲಿ… ಇದಲ್ಲ ಮುಖ್ಯ ವಿಚಾರ… ಈ ಇನ್‌ ಸೈಡ್‌ ಸ್ಟೋರಿಯನ್ನು ನೋಡಿದ್ರೆ ನಿಮ್ಮೆಲ್ಲರ ರಕ್ತ ಕುದಿಯದೆ ಇರದು… ತುಳುನಾಡಿನ ಸ್ಥಳೀಯ ಮೊಗವೀರರ ಬದುಕಿಗೆ ಕೊಳ್ಳಿ ಇಡುವ ಕಾರ್ಯ ಈ ಯೋಜನೆಯಿಂದ ಉಂಟಾಗುತ್ತಿದೆ ಎಂದರೆ ನೀವು ಸುಮ್ಮನಿರುತ್ತೀರೇ…? ಮೊಗವೀರರ ಬದುಕಿಗೆ ಈ ಯೋಜನೆ ಮುಳುವಾಗಲಿದೆ.  ನೋಡಿ ನಾವು ತುಳುವರು… ನಮ್ಮಲ್ಲಿ ಒಗ್ಗಟ್ಟಿರಬೇಕಾಗಿತ್ತು. ಆದರೆ  ಕೆಲವು ಸ್ಥಾಪಿತ ಹಿತಾಸಕ್ತಿ ; ಜನಪ್ರತಿನಿಧಿಗಳಿಂದ ಒಳಗಿಂದೊಳಗೆ  ಕಾಮಗಾರಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ ಎಂಬ ಅಂಶ ಇದೀಗ ಬಯಲಾಗಿದೆ. ನಮ್ಮಲ್ಲಿ ಶಾಸಕರು ಇದ್ದಾರೆ… ಸಂಸದರು ಇದ್ದಾರೆ… ಉಸ್ತುವಾರಿ ಸಚಿವರು ಇದ್ದಾರೆ… ಜಿಲ್ಲಾಧಿಕಾರಿಗಳು ಇದ್ದಾರೆ…ಚುನಾವಣೆ ಬಂತೆಂದರೆ  ಕೋಟಿಗಟ್ಟಲೇ ಚುನಾವಣೆಗಳಿಗೆ ಖರ್ಚು ಮಾಡುತ್ತಾರೆ… ಈ ಬಗ್ಗೆ ಯಾರು ಲೆಕ್ಕ ಕೇಳುವುದಿಲ್ಲ…! ಇರಲಿ…

ಈ ಯೋಜನೆಯ ವಿಚಾರವನ್ನು ನೋಡುವುದಾದರೆ …ಇಲ್ಲಿ  ಸ್ಥಳೀಯರಿಗೆ ಉದ್ಯೋಗ ಭದ್ರತೆಯನ್ನು ನೀಡಬೇಕು . ಅದು ಎಷ್ಟರಮಟ್ಟಿಗೆ ಆಗಿವೆ…?ಅಲ್ಲದೇ ಉಪಗುತ್ತಿಗೆಗಳು ಕೂಡಾ ಒಳೊಪ್ಪಂದದಿಂದಲೇ ನಡೆಯುತ್ತಿದೆ ಎಂದರೆ ಏನರ್ಥ?

ಒಂದು ಕಡೆಯಿಂದ ಕೊಳಚೆ ನೀರು ಸಮುದ್ರಕ್ಕೆ ಬಿಡುತ್ತಿದೆ. ಜೊತೆಗೆ ಶುದ್ಧೀಕರಣದ ನೀರು ಸಮುದ್ರದಿಂದ  ಎಂ.ಆರ್.ಪಿ.ಎಲ್‌ ಸಂಸ್ಥೆಗೆ ಬರುತ್ತದೆ! ಒಟ್ಟಾರೆಯಾಗಿ ನಮ್ಮ ತುಳುನಾಡನ್ನು ನಾಶ ಮಾಡುತ್ತಿದ್ದಾರೆ.ಅದರಲ್ಲೂ ಮೀನಿನ ಸಂತತಿಗಳಿಗೆ ದೊಡ್ಡ ಹೊಡೆತ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ.

ಸಮುದ್ರಕ್ಕೆ ಮಾರಕ ಆಗುವಂತಹ ಯೋಜನೆ ರೂಪಿಸಲಾಗುತ್ತಿದೆ.  ಇದಕ್ಕೆ ಕಾರಣ ಕೂಡಾ ಬಂಡವಾಳ ಶಾಹಿಗಳು .ಬಂಡವಾಳ ಶಾಹಿಗಳೊಂದಿಗೆ ಇರುವ ಕೆಲವು ಸ್ಥಾಪಿತ ಹಿತಾಸಕ್ತಿಗಳಿಂದು ಪರಿಸರ ನಾಶವಾಗುತ್ತಿದೆ.ಈ ಬಗ್ಗೆ ಇಂದಿನಿಂದ ಧ್ವನಿ ಎತ್ತುವುದು ಅನಿವಾರ್ಯ . ಅದೇ ರೀತಿ ಈ ಜಿಲ್ಲೆಯಲ್ಲಿ ಇರುವ ಎಲ್ಲಾ ಭಿನ್ನಾಭಿಪ್ರಾಯ ಮರೆತು ಮೊಗವೀರರ ಸಂರಕ್ಷಣೆಗಾಗಿ,ಕಾರ್ಮಿಕರ ಕಲ್ಯಾಣಕ್ಕಾಗಿ,ಪರಿಸರ ಸಂರಕ್ಷಣೆಗಾಗಿ,ತುಳುನಾಡಿನ ತುಳುವರ ರಕ್ಷಣೆಗಾಗಿ,ಅದೇ ರೀತಿಯಲ್ಲಿ ಸ್ಥಳೀಯರಿಗೆ ಉದ್ಯೋಗ ವೇತನ ಆರೋಗ್ಯ ವಾಸ್ತವ್ಯ ಭದ್ರತೆಯನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಬೇಕಿದೆ.ಹೇಗೆ ಈ ಜಿಲ್ಲೆಯಲ್ಲಿ ಹಿಂದು ಚಳುವಳಿ ನಡೆದಿದೆಯೋ ಹೇಗೆ ಗೋ ಸಂರಕ್ಷಣೆಗಾಗಿ ಚಳುವಳಿ ನಡೆದಿದೆಯೋ ಅದೇ ರೀತಿ ಕಾರ್ಮಿಕ ಚಳುವಳಿ ನಡೆಯಲೇ ಬೇಕು.ಚಳುವಳಿಯಲ್ಲಿ ವ್ಯಕ್ತಿ ಹತ್ಯೆ ವ್ಯಕ್ತಿ ಹಲ್ಲೆ ಸಮರ್ಥನೆ ಮಾಡುವುದಿಲ್ಲ .

ನಮ್ಮತುಳುನಾಡುನಮ್ಮಹೆಮ್ಮೆ…ಇದು ನಮ್ಮ ಧ್ವನಿ
ನಿಮ್ಮದೇ ಶೈಲಿಯಲ್ಲಿ ತುಳುರಾಜ್ಯದ ಸಂರಕ್ಷಣೆಗಾಗಿ ಚಳುವಳಿಯನ್ನು ರೂಪಿಸಿ ಅಹಿಂಸಾತ್ಮಕ ಚಳುವಳಿಯನ್ನು ನಡೆಸಿ…
ನಮ್ಮ ತುಳುನಾಡಿನ ಸಂರಕ್ಷಣೆಗಾಗಿ ಮೊಕದ್ದಮೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಬೇಕು.
ಇಲ್ಲಿ ಹೊರರಾಜ್ಯದ ದರ್ಬಾರ್ ನಡೆಯುತ್ತಿದೆ ಎಂದು ತಮ್ಮ ಗಮನಕ್ಕೆ ತರುತ್ತಿದೆ.ಬೈಕಂಪಾಡಿ ವ್ಯಾಪ್ತಿಯಲ್ಲಿ ಈ ಬಾರಿ ಕಾರ್ಮಿಕದಂಗೆ ನಡೆಯಲೇ ಬೇಕು.ಸ್ಥಳೀಯರನ್ನು ತುಳುವರನ್ನು ನಿರ್ಲಕ್ಷ್ಯ ಮಾಡುವವರನ್ನು ಧಿಕ್ಕರಿಸಿ ತುಳುರಾಜ್ಯದಿಂದಲೇ ಬಹಿಷ್ಕಾರ ಮಾಡೋಣ. 

ಸುದತ್ತ ಜೈನ್‌ ಶಿರ್ತಾಡಿ

LEAVE A REPLY

Please enter your comment!
Please enter your name here