ಮೈಸೂರು ಸಿಲ್ಕ್ ಸಾರಿ ಪ್ರದರ್ಶನಕ್ಕೆ ಚಾಲನೆ

0
626

ಮ0ಗಳೂರು ಪ್ರತಿನಿಧಿ ವರದಿ
ಕರ್ನಾಟಕ ರಾಜ್ಯ ರೇಶ್ಮೆ ಉದ್ಯಮಗಳ ನಿಗಮ (ಕೆ.ಎಸ್.ಐ.ಸಿ) ವತಿಯಿಂದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸೋಮವಾರ ನಗರದ ಲಾಲ್‍ಬಾಗ್ ಹಿಂದಿ ಪ್ರಚಾರ ಸಮಿತಿ ಹಾಲ್‍ನಲ್ಲಿ ಚಾಲನೆ ದೊರೆಯಿತು.
 
 
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಂಪರಿಕವಾಗಿ ದೇಶದಲ್ಲೇ ಖ್ಯಾತಿಯಾಗಿರುವ ಮೈಸೂರು ಸಿಲ್ಕ್ ಸೀರೆಗಳು ಮಹಿಳೆಯರಿಗೆ ಅಚ್ಚು ಮೆಚ್ಚು ತರುವಂತದ್ದು. ಮಂಗಳೂರಿನಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮಂಗಳೂರಿನ ಜನತೆಗೆ ಅಪೂರ್ವ ಅವಕಾಶ ಒದಗಿಸಿದೆ ಎಂದರು.
 
 
 
ಕೆ.ಎಸ್.ಐ.ಸಿ ವ್ಯವಸ್ಥಾಪಕ ಭಾನು ಪ್ರಕಾಶ್ ಮಾತನಾಡಿ, ಮೈಸೂರು ಸಿಲ್ಕ್ ಸೀರೆಗಳು ತನ್ನದೇ ಆದ ಬ್ರಾಂಡ್ ಹೊಂದಿದ್ದು, ಇದರ ನಕಲಿಗೆ ಅವಕಾಶವಿಲ್ಲ. ಮೈಸೂರು ಸಿಲ್ಕ್ ಸೀರೆಗಳು ಕೆ.ಎಸ್.ಐ.ಸಿ ಯ ಮಾರಾಟ ಶಾಖೆಗಳಲ್ಲಿ ಮಾತ್ರ ಲಭ್ಯ. ರಾಜ್ಯದಲ್ಲಿ ಮೈಸೂರು ಸಿಲ್ಕ್ ಸೀರೆಗಳಿಗೆ ವ್ಯಾಪಕ ಬೇಡಿಕೆ ಇದೆ ಎಂದರು.
 
 
ಸಮಾರಂಭದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕ ಹಮೀದ್ ಕಣ್ಣೂರು ಮತ್ತಿತರರು ಇದ್ದರು. ಡಿ 26 ರಿಂದ 29ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ಗಂಟೆಯವರೆಗೆ ನಗರದ ಲಾಲ್‍ಬಾಗ್ ಹಿಂದಿ ಪ್ರಚಾರ ಸಮಿತಿ ಹಾಲ್‍ನಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಎಲ್ಲಾ ಉತ್ಪನ್ನಗಳ ಮೇಲೆ ಶೇಕಡಾ 20ರವರೆಗೆ ರಿಯಾಯಿತಿ ಇರಲಿದೆ.
 
ಸಚಿವ ಖಾದರ್ ಭೇಟಿ: ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಅವರು ಸೋಮವಾರ ಸಂಜೆ ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮೇಳಕ್ಕೆ ಭೇಟಿ ನೀಡಿದರು. ಪ್ರದರ್ಶನ ವೀಕ್ಷಿಸಿದ ಸಚಿವರು, ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗದ ಮೈಸೂರು ಸಿಲ್ಕ್ ಸೀರೆಗೆಳು ಕರ್ನಾಟಕ ಪ್ರತಿಷ್ಠೆಯಾಗಿದೆ ಎಂದು ಶುಭಾಂಸನೆಗೈದರು.

LEAVE A REPLY

Please enter your comment!
Please enter your name here