ಬ್ರೇಕಿಂಗ್ ನ್ಯೂಸ್
ದ.ಕ ಜಿಲ್ಲೆಯ ಮೂಡುಬಿದಿರೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿನ ಸ್ವರಾಜ್ ಮೈದಾನದಲ್ಲಿರುವ ಫೆಬಿಲಿಯನ್ ಬಳಿ ಇಂದು ಮಧ್ಯಾಹ್ನ ಕಾಣಿಸಿಕೊಂಡಿದೆ.
ಸೇದಿ ಬಿಸಾಡಿದ ಬೀಡಿಯ ಬೆಂಕಿ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆ. ಮೈದಾನದ ಪಕ್ಕದಲ್ಲಿರುವ ಟಾಯ್ಲೆಟ್ ಗೂ ಬೆಂಕಿ ಹಬ್ಬಿದೆ. ಬೆಂಕಿ ಬಿದ್ದ ಜಾಗದಲ್ಲಿ ಒಣಗಿದ ಒಣಹುಲ್ಲು-ಕಡ್ಡಿಗಳು ಇದ್ದ ಕಾರಣ ಬೆಂಕಿ ಕೆನ್ನಾಲೆ ಹೆಚ್ಚಾಲು ಕಾರಣವಾಗಿದೆ. ಸ್ಥಳಕ್ಕೆ ಮೂಡುಬಿದಿರೆ ಅಗ್ನಿಶಾಮಕ ವಾಹನ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.