ಮೆಮುಗೆ ಗ್ರೀನ್ ಸಿಗ್ನಲ್

0
528

ಬೆಂಗಳೂರು ಪ್ರತಿನಿಧಿ ವರದಿ
ಸಬ್ ಅರ್ಬನ್ ರೈಲು ಸರ್ವಿಸ್ ಗೆ ಇಂದು ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೊಸ ರೈಲುಗಳ ಓಡಾಟಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದಾರೆ. ಮೆಜೆಸ್ಟಿಕ್‍ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಮನಗರ ನಡುವೆ ಮೆಮೂ ರೈಲು ಓಡಾಡಲಿದೆ.
 
 
ನಗರ ರೈಲು ನಿಲ್ದಾಣದಿಂದ ರಾಮನಗರ, ವೈಟ್ ಫೀಲ್ಡ್ ಮತ್ತು ಕುಪ್ಪಂ ನಿಲ್ದಾಣಗಳಿಗೆ 3 ಹೊಸ ಮೆಮು ರೈಲುಗಳ ಸಂಚಾರ ಇಂದು ಆರಂಭವಾಗಿದೆ.
15 ರೈಲುಗಳನ್ನು ಮೆಮು ರೈಲುಗಳಾಗಿ ಪರಿವರ್ತಿಸಲಾಗುವುದು. ಮೆಮು ರೈಲುಗಳಾಗಿ ಪರಿವರ್ತಿಸಲು 360 ಕೋಟಿ ರೂ. ಅಗತ್ಯವಿದೆ. ಹೊಸ ಕರಡು ನೀತಿ ಪ್ರಕಾರ ರಾಜ್ಯ ಸರ್ಕಾರ ಶೇ.80ರಷ್ಟು ಪಾಲು ನೀಡಬೇಕು. 50-50 ಆಧಾರದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here