ಮೆಟ್ರೋ ಮೊರೆಹೋದ ಪ್ರಯಾಣಿಕರು

0
204

ಬೆಂಗಳೂರು ಪ್ರತಿನಿಧಿ ವರದಿ
ಭಾರತ್ ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಸರಕಾರಿ ಬಸ್ ಸೇವೆ ವಿರಳವಾಗಿ ಪ್ರಯಾಣಿಕರು ಮೆಟ್ರೋವನ್ನು ಅವಲಂಬಿಸುತ್ತಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೂ ಮೆಟ್ರೋ ಪ್ರತೀ 5ನಿಮಿಷಕ್ಕೊಮ್ಮೆ ತನ್ನ ಸೇವೆಯನ್ನು ಒದಗಿಸುತ್ತಿದೆ. ಈತನಕ 12ಸಾವಿರಕ್ಕೂ ಅಧಿಕ ಮಂದಿ ಮೆಟ್ರೋ ರೈಲನ್ನವಲಂಬಿಸಿ ಪ್ರಯಾಣ ಮಾಡಿದ್ದಾರೆ. ಬಂದ್ ಹಿನ್ನಲೆಯಲ್ಲಿ ಮೆಟ್ರೋ ಮೂಲಕ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚುತ್ತಿದೆ. ಜನ ಖಾಸಗೀ ವಾಹನ, ಟ್ಯಾಕ್ಸಿಗಳ ಮೂಲಕ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

LEAVE A REPLY

Please enter your comment!
Please enter your name here