ಮೆಟ್ರೋ ಬೈಕ್ ಸೇವೆ ಚಾಲನೆ

0
279

 
ಬೆಂಗಳೂರು ಪ್ರತಿನಿಧಿ ವರದಿ
ಪ್ರಯಾಣಿಕರ ಬಹು ನಿರೀಕ್ಷಿತ ಮೆಟ್ರೋ ಬೈಕ್ ಸೇವೆಗೆ ಶನಿವಾರ ಚಾಲನೆ ನೀಡಲಾಗಿದ್ದು, ಭಾನುವಾರದಿಂದ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಂಗಳೂರು ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಅವರು ಉದ್ಘಾಟನೆ ಮಾಡಿದ್ದು, ನಾಳೆಯಿಂದ ಪ್ರಯಾಣಿಕರ ಸೇವೆಗೆ ಮೆಟ್ರೋ ಬೈಕ್ ಗಳು ಲಭ್ಯವಾಗಲಿವೆ.
 
 
ವಿಕೆಡ್ ರೈಡ್ ಅಡ್ವೆಂಚರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೆಟ್ರೋ ಬೈಕ್ ಸರ್ವೀಸ್ ಗುತ್ತಿಗೆ ಪಡೆದಿದ್ದು, ಟ್ರಿನಿಟಿ, ಇಂದಿರಾನಗರ, ಬೈಯಪ್ಪನ ಹಳ್ಳಿ, ಪೀಣ್ಯಾ ಮತ್ತು ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣಗಳಲ್ಲಿ ಈ ಮೆಟ್ರೋ ಬೈಕ್ ಗಳು ಲಭ್ಯವಾಗಲಿವೆ.
 
 
ಪ್ರಸ್ತುತ 10 ಬೈಕ್ ಗಳನ್ನು ಮೆಟ್ರೋ ಬೈಕ್ ಸೇವೆಗೆ ಮೀಸಲಿರಿಸಲಾಗಿದೆ. ಪ್ರಸ್ತುತ ಭಾನುವಾರ ಮತ್ತು ಸೋಮವಾರ ಮಾತ್ರ ಈ ಮೆಟ್ರೋ ಬೈಕ್ ಸೇವೆ ಲಭ್ಯವಿದ್ದು, ಐದು ಬೈಕ್ ಗಳು ಶನಿವಾರದಿಂದ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕಾರ್ಯಾಚರಿಸಲಿವೆ. ಪೀಣ್ಯಾ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ಮಾಲ್ ನಿಲ್ದಾಣದಲ್ಲಿ ಜೂನ್ 2ನೇ ವಾರದಿಂದ ಮೆಟ್ರೋ ಬೈಕ್ ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಡ್ವೆಂಚರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹ ಸಂಸ್ಥಾಪಕರಾದ ಜಿ.ಅನಿಲ್ ಅವರು ಮಾಹಿತಿ ನೀಡಿದರು.
 
 
ಮೆಟ್ರೋ ಬೈಕ್ ಗೆ ಚಾರ್ಚ್ ಎಷ್ಟು?
ಒಂದು ಬೈಕ್ ಗೆ ಪ್ರತೀ ಅರ್ಧ ಗಂಟೆಗೆ 20 ರೂ. ನಿಗದಿಪಡಿಸಲಾಗಿದ್ದು, ಪ್ರಯಾಣಿಕ 3 ಕಿ.ಮೀವರೆಗೂ ಬೈಕ್ ನಲ್ಲಿ ಪ್ರಯಾಣಿಸಬಹುದಾಗಿದೆ. ಆ ಬಳಿಕ ಪ್ರತೀ ಕಿ.ಮೀಗೆ 3 ರೂ.ನಂತೆ ಅನ್ವಯವಾಗುತ್ತದೆ. ಆ ಬಳಿಕದ ಪ್ರತೀ ಅರ್ಧ ಗಂಟೆಗೆ 10 ರೂ. ಅಧಿಕ ಶುಲ್ಕ ತಗುಲುತ್ತದೆ.

LEAVE A REPLY

Please enter your comment!
Please enter your name here