ಮೃಗಾಲಯದ ಪ್ರಾಣಿಗಳಿಗೆ ಹೆಲ್ತ್ ಕಾರ್ಡ್

0
508

ಮೈಸೂರು ಪ್ರತಿನಿಧಿ ವರದಿ
ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳಿಗೆ ಆರೋಗ್ಯ ಕುರಿತ ಹೆಲ್ತ್ ಕಾರ್ಡ್ ಬಿಡುಗಡೆ ಮಾಡಲಿದೆ. ಮೃಗಾಲಯದಲ್ಲಿ ಪ್ರಾಣಿಗಳ ಸಾವಿನ ಬಗ್ಗೆ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯ ಆಡಳಿತವು ಹೆಲ್ತ್ ಕಾರ್ಡ್ ಮಾಡಲಿದೆ.
 
 
 
ಹೆಲ್ತ್ ಕಾರ್ಡ್‍ನಲ್ಲಿ ಪ್ರಾಣಿಗಳ ವಯಸ್ಸು, ಆರೋಗ್ಯ ಪರಿಸ್ಥಿತಿ, ಅನಾರೋಗ್ಯ ಕುರಿತ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗಿರುತ್ತದೆ. ಈ ಎಲ್ಲಾ ಮಾಹಿತಿಗಳು ವೆಬ್‍ಸೈಟ್‍ನಲ್ಲೂ ಕೂಡ ಪ್ರಕಟಿಸಲಾಗುತ್ತದೆ.
 
 
ಮೃಗಾಲಯದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸಾವಿನ ಪ್ರಮಾಣ ಶೇ.8ರಷ್ಟಿದ್ದು, ಜನನ ಪ್ರಮಾಣ 40ಕ್ಕೂ ಹೆಚ್ಚಿದೆ. ಹೀಗಿದ್ದರೂ ಪ್ರಾಣಿಗಳು ಸತ್ತಾಗ ಮೃಗಾಲಯದ ಕಡೆ ಸಾರ್ವಜನಿಕರು ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರಾಣಿಗಳ ಆರೋಗ್ಯ ಕುರಿತ ಹೆಲ್ತ್ ಕಾರ್ಡ್ ಬಿಡುಗಡೆ ಮಾಡುತ್ತಿರುವುದಾಗಿ ಮೃಗಾಲಯದ ಆಡಳಿತ ತಿಳಿಸಿದೆ.

LEAVE A REPLY

Please enter your comment!
Please enter your name here