ಪ್ರಮುಖ ಸುದ್ದಿರಾಜ್ಯವಾರ್ತೆ

ಮೂವರು ಕಿಂಗ್ ಪಿನ್ ಗಳ ಬಂಧನ

 
ಬೆಂಗಳೂರು ಪ್ರತಿನಿಧಿ ವರದಿ
ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಜಾಲವನ್ನು ಸಿಐಡಿಗಳು ಛೇದಿಸಿದ್ಧಾರೆ.
 
 
ಮಾ.21ರಂದು ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಮೂವರ ಬಂಧನವಾಗಿದೆ ಎಂದು ಸಿಐಡಿ ಡಿಐಜಿ ಸೋನಿಯಾನಾರಂಗ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಸಚಿವರೊಬ್ಬರ ಪಿಎ ಸೇರಿ ಮೂವರು ಆರೋಪಿಗಳ ಬಂಧನವಾಗಿದೆ. ಸಿಐಡಿ ಅಧಿಕಾರಿಗಳು ಮಂಜುನಾಥ್, ಓಬಳ್ ರಾಜ್, ರುದ್ರಪ್ಪ ಬಂಧಿಸಿದ್ದಾರೆ.
 
 
 
ಬಂಧಿತ ಮಂಜುನಾಥ್ ಬೆಂಗಳೂರಿನ ವಿಜಯನಗರದಲ್ಲಿರುವ ಕೇಂಬ್ರಿಡ್ಜ್ ಕಾಲೇಜಿನ ದೈಹಿಕ ಶಿಕ್ಷಕನಾಗಿದ್ದಾನೆ. ಈತ ಎಲ್ ಐಸಿ ಏಜೆಂಟ್ ಕೂಡ ಆಗಿದ್ದ. ಮೊದಲು ಪ್ರಶ್ನೆಪತ್ರಿಕೆ ಮಂಜುನಾಥ್ ಗೆ ರವಾನೆಯಾಗಿತ್ತು. ಬಳಿಕ ಆತ 10 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಹಾಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ರ ಪಿಎ ಆಗಿರುವ ಓಬಳ್ ರಾಜ್ ಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ. ನಂತರ ಆರೋಪಿ ಓಬಳ್ ರಾಜ್, ಲೋಕೋಪಯೋಗಿ ಇಲಾಖೆ ಅಧಿಕಾರಿಯಾಗಿದ್ದ ರುದ್ರಪ್ಪನಿಗೆ ಪ್ರಶ್ನೆಪತ್ರಿಕೆಯನ್ನು ಮಾರಾಟ ಮಾಡಿದ್ದ. ರುದ್ರಪ್ಪ ವಿವಿಧ ಕಾಲೇಜುಗಳು, ಟ್ಯುಟೋರಿಯಲ್ಸ್ ಗೆ ಸೇಲ್ ಮಾಡುದ್ದಾನೆ. ಕಾಲೇಜುಗಳು, ಟ್ಯುಟೋರಿಯಲ್ಸ್ ನಿಂದ ಪ್ರಶ್ನೆಪತ್ರಿಕೆ ಹಂಚಿಕೆಯಾಗಿದೆ.
 
ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಪ್ರಶ್ನೆಪತ್ರಿಕೆ ತಲುಪಿದೆ. ಮಾರ್ಚ್ 31ರಂದು 2ನೇ ಬಾರಿಗೆ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಇದರ ತನಿಖೆ ಕೂಡ ಮುಂದುವರಿದಿದೆ ಎಂದು ಮೂಲಗಳು ತಿಳಿಸಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here